Site icon Vistara News

R Ashwin : ಕಪಿಲ್‌ದೇವ್ ದಾಖಲೆಯನ್ನೂ ಮುರಿದ ಭಾರತದ ಸ್ಪಿನ್‌ ಮಾಂತ್ರಿಕ!

r ashwin

ಬೆಂಗಳೂರು : ಭಾರತದ ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (R Ashwin) ಭಾರತಕ್ಕಾಗಿ ತಮ್ಮ 100 ನೇ ಟೆಸ್ಟ್ ಪಂದ್ಯದಲ್ಲಿ (Ind vs Eng) ಮಾಡಿದ ಸಾಧನೆ ಅಸಮಾನ್ಯ. ಮೊದಲ ಇನ್ನಿಂಗ್ಸ್​​ನಲ್ಲಿ 4 ವಿಕೆಟ್ ಪಡೆದ ಅವರು ಮೂರನೇ ಇನಿಂಗ್ಸ್​​ನಲ್ಲಿ 5 ವಿಕೆಟ್ ಸೇರಿದಂತೆ 9 ವಿಕೆಟ್​ ಕಬಳಿಸಿದ್ದಾರೆ. ಇದು ಅವರ ಪಾಲಿಗೆ ಸ್ಮರಣೀಯ. ಅಂತೆಯೇ ಅವರು ಟೆಸ್ಟ್ ಕ್ರಿಕೆಟ್​ನಲ್ಲಿ ನಿರ್ದಿಷ್ಟ ಬ್ಯಾಟರ್​ ಅನ್ನು ಅತಿ ಹೆಚ್ಚು ಬಾರಿ ಔಟ್ ಮಾಡಿದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅವರು ಆಂಗ್ಲರ ನಾಯಕ ಬೆನ್​ಸ್ಟೋಕ್ಸ್ ಅವರನ್ನು 13 ಬಾರಿ ಔಟ್ ಮಾಡಿದ ಕೀರ್ತಿ ತಮ್ಮದಾಗಿಸಿಕೊಂಡರು. ಜತೆಗೆ ಕಪಿಲ್ ದೇವ್​ ರೆಕಾರ್ಡ್​ ಬ್ರೇಕ್ ಮಾಡಿದರು.

ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೊದಲು, 1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರು ಪಾಕಿಸ್ತಾನದ ಮುದಾಸರ್ ನಜರ್ ಅವರ ವಿಕೆಟ್ ಅನ್ನು 12 ಬಾರಿ ಪಡೆದಿದ್ದರು. ಆದರೆ 5 ನೇ ಟೆಸ್ಟ್ನ 3 ನೇ ದಿನದಂದು, ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ದಾಖಲೆಯ 13 ನೇ ಬಾರಿಗೆ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಔಟ್ ಮಾಡುವ ಮೂಲಕ ಅಗ್ರಸ್ಥಾನಕ್ಕೇರಿದರು.

100 ನೇ ಟೆಸ್ಟ್ ಪಂದ್ಯವು ಹೇಗೆ ನಡೆಯಿತು?

ಅಶ್ವಿನ್ ಅವರು ತಮ್ಮ ಇಬ್ಬರು ಪುಟ್ಟ ಹೆಣ್ಣುಮಕ್ಕಳು ಮತ್ತು ಪತ್ನಿ ಪ್ರೀತಿ ಅಶ್ವಿನ್ ಅವರೊಂದಿಗೆ ಪಂದ್ಯಕ್ಕೆ ಮುಂಚಿತವಾಗಿ ವಿಶೇಷ ಉಡುಗೊರೆ ಪಡೆದುಕೊಂಡರು. ನಂತರ ಅವರ 100ನೇ ಟೆಸ್ಟ್ ಪ್ರಾರಂಭವಾಯಿತು. ಮೊದಲ ಇನಿಂಗ್ಸ್​​ನಲ್ಲಿ ಬೆನ್ ಫೋಕ್ಸ್, ಟಾಮ್ ಹಾರ್ಟ್ಲೆ, ಮಾರ್ಕ್ ವುಡ್ ಮತ್ತು ಜೇಮ್ಸ್ ಆಂಡರ್ಸನ್ ಸೇರಿದಂತೆ 4 ವಿಕೆಟ್​ ಪಡೆದರು. ಕುಲ್ದೀಪ್ ಯಾದವ್​ಗೆ ಐದು ವಿಕೆಟ್​ ಲಭಿಸಿತು.

ಬ್ಯಾಟಿಂಗ್​ನಲ್ಲಿ ಅವರು ಡಕ್ ಔಟ್ ಆಗಿದ್ದರಿಂದ ಬೇಸರಕ್ಕೆ ಒಳಗಾದರು. ಆದರೆ ಅವರು ಅದನ್ನು ಲೆಕ್ಕಿಸಲಿಲ್ಲ ಏಕೆಂದರೆ ಅವರು 5 ವಿಕೆಟ್​ಗಳನ್ನು ಗಳಿಸುವ ನಿರೀಕ್ಷೆಯಲ್ಲಿದ್ದರು. ಅಂತೆಯೇ ಅವರಿಗೆ ಹಂಗಾಮಿ ನಾಯಕ ಜಸ್ಪ್ರೀತ್ ಬುಮ್ರಾ ಹೊಸ ಚೆಂಡನ್ನು ಹಸ್ತಾಂತರಿಸಿದರು. ಅಶ್ವಿನ್ ಅವರ ಮ್ಯಾಜಿಕ್ ಕೆಲಸ ಮಾಡಿತು. ಜಾನಿ ಬೈರ್​​ಸ್ಟೋವ್ಅ ವರನ್ನು ಕುಲ್ದೀಪ್ ಔಟ್ ಮಾಡುವ ಮೊದಲು ತಮಿಳುನಾಡು ಮೂಲದ ಆಟಗಾರ ಬೆನ್ ಡಕೆಟ್ (2), ಜಾಕ್ ಕ್ರಾವ್ಲಿ (0) ಮತ್ತು ಒಲ್ಲಿ ಪೋಪ್ (19) ಅವರ ಮೊದಲ ಮೂರು ವಿಕೆಟ್​ಗಳನ್ನು ಪಡೆದರು.

ಹಾಲಿ ಟೆಸ್ಟ್ ಪಂದ್ಯದಲ್ಲಿ ಎರಡನೇ ಬಾರಿಗೆ ಬೆನ್ ಸ್ಟೋಕ್ಸ್ ಮತ್ತು ಬೆನ್ ಫೋಕ್ಸ್ ವಿಕೆಟ್ ಪಡೆಯುವ ಮೂಲಕ ರವಿಚಂದ್ರನ್ ಅಶ್ವಿನ್ ಐದು ವಿಕೆಟ್ ಪೂರೈಸಿದರು. ಆದರೆ, ಸ್ಟೋಕ್ಸ್ ಅವರ ವಿಕೆಟ್ ಅನ್ನು ಅಶ್ವಿನ್ 13 ಬಾರಿ ಪಡೆದ ಸಾಧನೆ ಮಾಡಿದರು. ಇದು ಭಾರತೀಯ ಬೌಲರ್​ ಪಾಲಿಗೆ ವಿಶೇಷ ಸಾಧನೆಯಾಗಿದೆ.

ಟೆಸ್ಟ್​ನಲ್ಲಿ ಅತಿ ಹೆಚ್ಚು ಬಾರಿ ನಿರ್ದಿಷ್ಟ ಬ್ಯಾಟರ್​ ಗಳನ್ನು ಔಟ್ ಮಾಡಿದ ಭಾರತೀಯ ಬ್ಯಾಟರ್​ಗಳು

ದಾಖಲೆ ಬರೆದ ರವಿ ಅಶ್ವಿನ್

ತಮ್ಮ 100ನೇ ಪಂದ್ಯದಲ್ಲಿ 5 ವಿಕೆಟ್ ಕಬಳಿಸುವ ಮೂಲಕ ರವಿ ಅಶ್ವಿನ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಚೊಚ್ಚಲ ಹಾಗೂ 100ನೇ ಪಂದ್ಯದಲ್ಲಿ 5 ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇದನ್ನೂ ಓದಿ : Ind vs Eng : ಬೌಲ್ಡ್​​ ಆದ ಬಳಿಕ ಡಿಆರ್​ಎಸ್​​ಗೆ ಮನವಿ ಮಾಡಿದ ಬಶೀರ್​; ಬಿದ್ದು ಬಿದ್ದು ನಕ್ಕ ರೂಟ್​!

ಟೆಸ್ಟ್ ಕ್ರಿಕೆಟ್​್ನಲ್ಲಿ ಅತಿ ಹೆಚ್ಚು 5 ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಶ್ವಿನ್ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ ಮತ್ತು ಶೇನ್ ವಾರ್ನ್ ಅವರೊಂದಿಗೆ ಜಂಟಿಯಾಗಿ ಎರಡನೇ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆಯಲು ಅವರಿಗೆ ಇನ್ನೂ ಒಂದು ವಿಕೆಟ್ ಅಗತ್ಯವಿದೆ. ರವಿಚಂದ್ರನ್ ಅಶ್ವಿನ್ ಈಗ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ 114 ಟೆಸ್ಟ್ ವಿಕೆಟ್​ಗಳನ್ನು ಹೊಂದಿದ್ದಾರೆ.

Exit mobile version