Site icon Vistara News

R Ashwin : ನಥಾನ್​ ಲಿಯಾನ್​ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

R Ashwin

ರಾಂಚಿ : ಭಾರತ ಹಾಗೂ ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ (R Ashwin) 5 ವಿಕೆಟ್ ಕಬಳಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ತಮ್ಮ 35ನೇ ಟೆಸ್ಟ್ 5 ವಿಕೆಟ್ ಗೊಂಚಲಿನ ಸಾಧನೆಯನ್ನು ಅವರು ಮಾಡಿದ್ದಾರೆ. ಅವರು ಸ್ಪಿನ್ನರ್ ಅನಿಲ್ ಕುಂಬ್ಳೆ (Anil Kumble) ಅವರನ್ನು ಹಿಂದಿಕ್ಕಿ ಅತಿ ಹೆಚ್ಚು ಐದು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೇ ವೇಳೆ ಅವರು ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ನಲ್ಲಿ 9 ಬಾರಿ ಐದು ವಿಕೆಟ್ ಸಾಧನೆ ಮಾಡಿದ್ದು, ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಅವರ ದಾಖಲೆ ಸರಿಗಟ್ಟಿದ್ದಾರೆ.

ಲಿಯಾನ್ ಮಾರ್ಚ್ 2023ರಲ್ಲಿ ಭಾರತದ ವಿರುದ್ಧ ತಮ್ಮ ಕೊನೆಯ ಐದು ವಿಕೆಟ್ ಸಾಧನೆಯನ್ನು ಮಾಡಿದ್ದಾರೆ. ಅಂದಿನಿಂದ ಒಂಬತ್ತು ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಆದರೆ ಸ್ಪಿನ್​ ಮಾಂತ್ರಿಕ 5ರ ಗೊಂಚಲು ತಲುಪಲು ವಿಫಲರಾಗಿದ್ದಾರೆ. ಆದಾಗ್ಯೂ, ರಾಂಚಿಯಲ್ಲಿ ನಡೆದ 4 ನೇ ಟೆಸ್ಟ್​​ನಲ್ಲಿ ಅಶ್ವಿನ್​ ಉತ್ತಮ ಪ್ರದರ್ಶನ ನೀಡಿದ್ದಾರೆ

ಅತಿ ಹೆಚ್ಚು ಬಾರಿ ವಿಕೆಟ್ ಸಾಧನೆ ಮಾಡಿದವರು

ಅನಿಲ್ ಕುಂಬ್ಳೆ ದಾಖಲೆ ಮುರಿದ ಆರ್ ಅಶ್ವಿನ್; ಏನದು ದಾಖಲೆ?

ರಾಂಚಿ: ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ ದಂತಕಥೆ ರವಿಚಂದ್ರನ್ ಅಶ್ವಿನ್ (R Ashwin) ಅವರು ಅನಿಲ್ ಕುಂಬ್ಳೆ (Anil Kumble) ಅವರ ದೀರ್ಘಕಾಲದ ದಾಖಲೆಯನ್ನು ಮುರಿದು ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಜ್​ಕೋಟ್​ನಲ್ಲಿ ನಡೆದ ಮೂರನೇ ಟೆಸ್ಟ್​ನಲ್ಲಿ 500 ಟೆಸ್ಟ್ ವಿಕೆಟ್​​ಗಳ ಮೈಲಿಗಲ್ಲನ್ನು ದಾಟಿದ ಅಶ್ವಿನ್ ಮತ್ತೊಮ್ಮೆ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ.

ಇದನ್ನೂ ಓದಿ : Dhruv Jurel: ಫಿಫ್ಟಿ ಬಾರಿಸಿ ತಂದೆಗೆ ಧ್ರುವ್‌ ಜುರೆಲ್ ಸೆಲ್ಯೂಟ್‌ ;‌ ಇವರ ತಂದೆ ಕಾರ್ಗಿಲ್‌ ಹೀರೊ

ರಾಂಚಿಯಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 307 ರನ್​ಗಳಿಗೆ ಆಲೌಟ್ ಆದ ನಂತರ ಈ ಮಹತ್ವದ ದಾಖಲೆ ಬರೆದರು. ಇಂಗ್ಲೆಂಡ್​ನ ಬೆನ್ ಡಕೆಟ್ ಮತ್ತು ಒಲ್ಲಿ ಪೋಪ್ ಅವರನ್ನು ಸತತ ಎಸೆತಗಳಲ್ಲಿ ಔಟ್ ಮಾಡುವ ಮೂಲಕ ಅಶ್ವಿನ್ ತ್ವರಿತವಾಗಿ ತಮ್ಮ ಛಾಪು ಮೂಡಿಸಿದರು. ಇದರಿಂದಾಗಿ ಕುಂಬ್ಳೆ ಅವರ 16 ವರ್ಷಗಳ ಹಳೆಯ ದಾಖಲೆಯನ್ನು ಮೀರಿಸಿದರು.

ಒಲಿ ಪೋಪ್ ಅವರನ್ನು ಔಟ್ ಮಾಡಿದ ರವಿಚಂದ್ರನ್ ಅಶ್ವಿನ್ ಅವರ ಭಾರತದಲ್ಲಿ ಟೆಸ್ಟ್ ವಿಕೆಟ್​​ಗಳ ಸಂಖ್ಯೆ 351 ಕ್ಕೆ ತಲುಪಿದೆ. ಕುಂಬ್ಳೆ ಅವರ 350 ವಿಕೆಟ್​ಗಳ ಸಾಧನೆಯನ್ನು ಈ ವೇಳೆ ಹಿಂದಿಕ್ಕಿದ್ದಾರೆ.

ಭಾರತದ ನೆಲದಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಆಟಗಾರರು

Exit mobile version