Site icon Vistara News

IPL 2023: ಜಡೇಜಾ ಬ್ಯಾಟಿಂಗ್​ ಸಾಹಸ ಕಂಡು ಆನಂದಭಾಷ್ಪ ಸುರಿಸಿದ ಪತ್ನಿ ರಿವಾಬಾ; ವಿಡಿಯೊ ವೈರಲ್​

Ravindra Jadeja Hugs Wife Rivaba

ಅಹಮದಾಬಾದ್​: ಕ್ರಿಕೆಟ್​ ಅಭಿಮಾನಿಗಳನ್ನು ತುದಿಗಾಲಿನಲ್ಲಿ ಉಸಿರು ಬಿಗಿಹಿಡಿದು ನಿಲ್ಲುವಂತೆ ಮಾಡಿದ್ದ ಸೋಮವಾರದ ಐಪಿಎಲ್​ ಫೈನಲ್​ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್ ಗೆದ್ದು ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಈ ಪಂದ್ಯದಲ್ಲಿ ಅಸಾಮಾನ್ಯ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟ ರವೀಂದ್ರ ಜಡೇಜಾಗೆ ಭಾರಿ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಪಂದ್ಯವನ್ನು ಗೆಲ್ಲಿಸಿದ ಸಂತಸದಲ್ಲಿ ಜಡೇಜಾ ಅವರ ಪತ್ನಿ ರಿವಾಬಾ ಅವರು ಆನಂದಭಾಷ್ಪ ಸುರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಗುಜರಾತ್​ 4 ವಿಕೆಟ್​ಗೆ 214 ರನ್​ ಬಾರಿಸಿತು. ಆದರೆ ಚೆನ್ನೈ ತಂಡ ಗುರಿ ಬೆನ್ನಟ್ಟುವ ವೇಳೆ ಜೋರಾಗಿ ಮಳೆ ಸುರಿದು ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತು. ಮಳೆ ಬರುವ ವೇಳೆ ಚೆನ್ನೈ ಮೂರು ಎಸೆತಗಳಲ್ಲಿ 4 ರನ್​ ಗಳಿಸಿತ್ತು.

ಮಳೆ ನಿಂತ ಬಳಿಕ ಡಕ್​ವರ್ತ್​ ನಿಯದ ಅನ್ವಯ ಪಂದ್ಯವನ್ನು 15 ಓವರ್​ಗೆ ಸೀಮಿತಗೊಳಿಸಿ ಚೆನ್ನೈಗೆ 171 ರನ್​ಗ ಸವಾಲು ನೀಡಲಾಯಿತು. ಬೃಹತ್​ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿದ ಚೆನ್ನೈ ಉತ್ತಮ ಆರಂಭ ಪಡೆಯಿತು. ಆದರೆ ಅಂತಿಮ ಕ್ಷಣದಲ್ಲಿ ಸಂಕಷ್ಟಕ್ಕೆ ಸಿಲುಕಿತು. ಚೆನ್ನೈ ಗೆಲುವಿಗೆ ಅಂತಿಮ ಓವರಿನಲ್ಲಿ 13 ರನ್‌ ತೆಗೆಯುವ ಸವಾಲು ಎದುರಾಯಿತು.

ಇದನ್ನೂ ಓದಿ IPL 2023 : ಚಾಂಪಿಯನ್​ ಸಿಎಸ್​ಕೆಗೆ, ರನ್ನರ್ ಅಪ್​ ಗುಜರಾತ್​​ಗೆ ಎಷ್ಟು ನಗದು ಬಹುಮಾನ ಸಿಕ್ಕಿತು?

ಈ ಹಿಂದಿನ ಎರಡು ಓವರ್​ಗಳಲ್ಲಿ ವಿಕೆಟ್​ ಕಬಳಿಸಿ ಚೆನ್ನೈಗೆ ಅವಳಿ ಆಘಾತವಿಕ್ಕಿದ ಮೋಹಿತ್​ ಶರ್ಮ ಅವರು ಅಂತಿಮ ಓವರ್​ ಎಸೆದರು. ಈ ಓವರಿನ ಮೊದಲ ನಾಲ್ಕು ಎಸೆತಗಳಲ್ಲಿ ಕೇವಲ ಮೂರು ರನ್‌ ಬಿಟ್ಟುಕೊಟ್ಟು ಚೆನ್ನೈ ತಮಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದರು. ಇದರಿಂದಾಗಿ ಪಾಂಡ್ಯ ಪಡೆಯ ಗೆಲ್ಲುವ ಆಸೆ ಬಲವಾಯಿತು. ಆದರೆ ಗುಜರಾತ್‌ನ ಈ ಕನಸನ್ನು ರವೀಂದ್ರ ಜಡೇಜಾ ನುಚ್ಚುನೂರು ಮಾಡಿದರು. ಅಂತಿಮ ಎರಡು ಎಸೆತದಲ್ಲಿ 10 ರನ್‌ ಗಳಿಸಬೇಕಿತ್ತು, ಈ ಸವಾಲನ್ನು ಜಡೇಜಾ ಸಿಕ್ಸರ್‌ ಮತ್ತು ಬೌಂಡರಿ ಸಿಡಿಸಿ ಚೆನ್ನೈ ತಂಡದ ಗೆಲುವನ್ನು ಸಾರಿದರು. ಇದನ್ನೂ ವೀಕ್ಷಿಸುತ್ತಿದ್ದ ಅವರ ಪತ್ನಿ ಗಂಡ ಈ ಸಾಧನೆ ಕಂಡು ಸಂತದಿಂದ ಕಣ್ಣೀರು ಸುರಿಸಿ ಸಂಭ್ರಮಿಸಿದರು. ಬಳಿಕ ಮೈದಾನದಲ್ಲಿ ಬಿಗಿದಪ್ಪಿ ಸಂಭ್ರಮಾಚರಣೆ ಮಾಡಿದರು. ಟ್ರೋಫಿಯೊಂದಿಗೂ ಕೆಲ ಫೋಟೊಗಳಿಗೆ ಫೋಸ್​ ನೀಡಿದರು. ಇದರ ವಿಡಿಯೊ ವೈರಲ್ ಆಗಿದೆ.

Exit mobile version