Site icon Vistara News

IPL 2023 : ರವೀಂದ್ರ ಜಡೇಜಾ ಬಿಜೆಪಿ ಕಾರ್ಯಕರ್ತ, ಅದಕ್ಕೆ ಚೆನ್ನೈಗೆ ಗೆಲವು ತಂದುಕೊಟ್ಟರು ಎಂದ ಅಣ್ಣಾಮಲೈ!

Tamil Nadu BJP president K Annamalai

#image_title

ಚೆನ್ನೈ: ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ (IPL 2023) ಫೈನಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ರವೀಂದ್ರ ಜಡೇಜಾ ಎಂಬುದಾಗಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಐಪಿಎಸ್​ ಅಧಿಕಾರ ಕೆ ಅಣ್ಣಾಮಲೈ ಹೇಳಿದ್ದಾರೆ. ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲ ಮಾತನಾಡಿದ ಅವರು ಮುಂಬೈ ಇಂಡಿಯನ್ಸ್ ತಂಡದ ಐದು ಟ್ರೋಫಿಗಳ ದಾಖಲೆಯನ್ನು ಸರಿಗಟ್ಟುವುದಕ್ಕೆ ಚೆನ್ನೈ ತಂಡಕ್ಕೆ ನಮ್ಮ ಕಾರ್ಯಕರ್ತನೇ ನೆರವು ನೀಡಿದ್ದಾರೆ ಎಂಬುದಾಗಿ ನುಡಿದಿದ್ದಾರೆ.

ಮಂಗಳವಾರ ರಾತ್ರಿ ನಡೆದ ಮಳೆ ಬಾಧಿತ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡಕ್​ವರ್ತ್​ ಲೂಯಿಸ್​ ನಿಯಮ ಪ್ರಕಾರ ಗೆಲುವ ಸಾಧಿಸಿತ್ತು. ಮೊದಲು ಬ್ಯಾಟ್​ ಮಾಡಿದ ಗುಜರಾತ್​ ತಂಡ 20 ಓವರ್​​ಗಳಲ್ಲಿ 214 ರನ್​ ಬಾರಿಸಿತ್ತು. ಈ ವೇಳೆ ಮಳೆ ಬಂದ ಕಾರಣ 12.10ಕ್ಕೆ ಪಂದ್ಯ ಆರಂಭಗೊಂಡಿತು. ಓವರ್​​ಗಳನ್ನು 15ಕ್ಕೆ ಇಳಿಸಿದ ಚೆನ್ನೈ ತಂಡಕ್ಕೆ 171 ರನ್​ಗಳ ಗುರಿ ನೀಡಲಾಗಿತ್ತು. ಅತ್ಯಂತ ರೋಚಕವಾಗಿ ನಡೆದ ಪಂದ್ಯದಲ್ಲಿ ಕೊನೆಯ ಎರಡು ಎಸೆತಗಳಲ್ಲಿ ಸಿಎಸ್​ಕೆಗೆ 10 ರನ್​ ಬೇಕಾಗಿತ್ತು. ಒಂದು ಸಿಕ್ಸರ್​ ಹಾಗೂ ಒಂದು ಫೋರ್ ಮೂಲಕ ಈ ರನ್​ ಬಾರಿಸಿದ ಜಡೇಜಾ ಜಯ ತಂದುಕೊಟ್ಟಿದ್ದರು.

ಈ ಗೆಲುವನ್ನು ಉಲ್ಲೇಖಿಸಿ ತಮಿಳುನಾಡಿನ ಆಡಳಿತಾರೂಡ ರಾಜಕೀಯ ಪಕ್ಷ ಡಿಎಂಕೆ, ಇದು ಗುಜರಾತ್ ಮಾದರಿಯ ವಿರುದ್ಧ ದ್ರಾವಿಡ ಮಾದರಿಯ ಗೆಲುವು ಎಂದು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಅಣ್ಣಾಮಲೈ ಅವರು, ಜಡೇಜಾ ಬಿಜೆಪಿ ಕಾರ್ಯಕರ್ತ ಮತ್ತು ಅವರು ಗುಜರಾತ್ ಮೂಲದವರು. ಅವರ ಪತ್ನಿ ಬಿಜೆಪಿ ಶಾಸಕಿ. ತಮಿಳಿಗನಾಗಿಯೂ ನನಗೆ ಈ ಬಗ್ಗೆ ಹೆಮ್ಮೆ ಇದೆ. ಸಿಎಸ್​ಕೆ ತಂಡಕ್ಕಿಂತಲೂ ಹೆಚ್ಚಾಗಿ ಗುಜರಾತ್​ ತಂಡದಲ್ಲಿ ತಮಿಳಿಗರು ಇದ್ದಾರೆ. ಆ ಖುಷಿಯೂ ನನಗಿದೆ, ಎಂದು ಹೇಳಿದ್ದಾರೆ.

ಗುಜರಾತ್ ಟೈಟಾನ್ಸ್ ಪರ ಆಡಿದ ತಮಿಳಿಗ ಸಾಯಿ ಸುದರ್ಶನ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಶ್ಲಾಘಿಸಿದರು. ತಮಿಳರೊಬ್ಬರು 96 ರನ್ ಗಳಿಸಿದ್ದಾರೆ. ನಾವು ಆ ಖುಷಿಯನ್ನೂ ಆಚರಿಸುತ್ತೇವೆ. ಸಿಎಸ್​ಕೆ ತಂಡದಲ್ಲಿ ಒಬ್ಬನೇ ಒಬ್ಬ ತಮಿಳಿಗನೂ ಆಡಿಲ್ಲ. ಆದರೆ ಎಂಎಸ್ ಧೋನಿಯಿಂದಾಗಿ ನಾವು ಚೆನ್ನೈ ತಂಡವನ್ನು ಬೆಂಬಲಿಸುತ್ತೇವೆ. ಒಟ್ಟಿನಲ್ಲಿ ಗೆಲುವಿನ ನಾಗಾಲೋಟವನ್ನು ಬಿಜೆಪಿ ಕಾರ್ಯಕರ್ತರು ಮುಂದುವರಿಸಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ” ಎಂದು ಅಣ್ಣಾಮಲೈ ಅವರು ಹೇಳಿದ್ದಾರೆ.

ಇದನ್ನೂ ಓದಿ : IPL 2023: ಜಡೇಜಾ ಬ್ಯಾಟಿಂಗ್​ ಸಾಹಸ ಕಂಡು ಆನಂದಭಾಷ್ಪ ಸುರಿಸಿದ ಪತ್ನಿ ರಿವಾಬಾ; ವಿಡಿಯೊ ವೈರಲ್​

ಗುಜರಾತ್ ಟೈಟಾನ್ಸ್ ಪರ ಆಡುವ ಮತ್ತೊಬ್ಬ ತಮಿಳಿಗ ಸಾಯಿ ಸುದರ್ಶನ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು ಶ್ಲಾಘಿಸಿದರು. “ತಮಿಳರೊಬ್ಬರು 96 ರನ್ ಗಳಿಸಿದ್ದಾರೆ, ನಾವು ಅದನ್ನು ಸಹ ಆಚರಿಸುತ್ತೇವೆ. ಸಿಎಸ್ಕೆ ತಂಡದಲ್ಲಿ ಒಬ್ಬನೇ ಒಬ್ಬ ತಮಿಳಿಗನೂ ಆಡಿಲ್ಲ. ಆದರೆ ಎಂಎಸ್ ಧೋನಿಯಿಂದಾಗಿ ನಾವು ಇನ್ನೂ ಸಿಎಸ್ಕೆಯನ್ನು ಆಚರಿಸುತ್ತೇವೆ. ಗೆಲುವಿನ ಓಟವನ್ನು ಬಿಜೆಪಿ ಕಾರ್ಯಕರ್ತರು ಗಳಿಸಿದ್ದಾರೆ ಎಂದು ನಾವು ಹೆಮ್ಮೆಪಡುತ್ತೇವೆ” ಎಂದು ಅವರು ಹೇಳಿದರು.

ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಅವರು ಗುಜರಾತ್​ನ ಜಾಮ್​ನಗರದ ಶಾಸಕಿ. 2019ರಲ್ಲಿ ಬಿಜೆಪಿ ಸೇರಿದ್ದ ಅವರು 2022ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ 80 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಚುನಾವಣೆಯಲ್ಲಿ ಪತ್ನಿಯ ಪರವಾಗಿ ಜಡೇಜಾ ಪ್ರಚಾರ ನಡೆಸಿದ್ದರು. ಜಡೇಜಾ ಕ್ರಿಕೆಟ್ ತಂಡದ ಸದಸ್ಯರಾಗಿದ್ದು ನೇರವಾಗಿ ಬಿಜೆಪಿ ಕಾರ್ಯಕರ್ತರಲ್ಲ.

Exit mobile version