ಚೆನ್ನೈ: ಇಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ನಲ್ಇ ಆಸ್ಟ್ರೇಲಿಯಾ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದ ನಂತರ ಭಾರತದ ಏಸ್ ಆಲ್ರೌಂಡರ್ ವಿಶೇಷ ದಾಖಲೆಯೊಂದನ್ನು ಮಾಡಿದ್ದಾರೆ. ಅವರೀಗ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರೊಂದಿಗೆ ಎಲೈಟ್ ಪಟ್ಟಿಯಲ್ಲಿ ಸೇರಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಜಡೇಜಾಗೆ ಚೆನ್ನೈ ಪಿಚ್ ತವರು. ಅಲ್ಲಿ 34 ವರ್ಷದ ಸ್ಪಿನ್ನರ್ ಮೂರು ನಿರ್ಣಾಯಕ ವಿಕೆಟ್ಗಳನ್ನು ಪಡೆದರು. ಅವರು ಈಗ 102 ವಿಕೆಟ್ಗಳನ್ನು ಹೊಂದಿದ್ದು, ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಕೆಟ್ಗಳ ಶತಕ ಗಳಿಸಿದ ಆಟಗಾರ ಎಂಬ ಖ್ಯಾತಿ ಪಡೆದಿದ್ದಾರೆ. ಅವರು ಈ ಸಾಧನೆ ಮಾಡಿದ ಮೂರನೇ ಬೌಲರ್ ಆಗಿದ್ದಾರೆ. ಅವರು ಒಟ್ಟು 40 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ 37 ಪಂದ್ಯಗಳಲ್ಲಿ 105 ವಿಕೆಟ್ಗಳೊಂದಿಗೆ ಈ ಎಲೈಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇಂಗ್ಲೆಂಡ್ನ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ 41 ಪಂದ್ಯಗಳಲ್ಲಿ 128 ವಿಕೆಟ್ ಉರುಳಿಸಿ ಅಗ್ರಸ್ಥಾನದಲ್ಲಿದ್ದಾರೆ.
ಧೋನಿಗೆ ವಿಶೇಷ ಗೌರವ
ವಿಶ್ವಕಪ್ ಜ್ವರ ಪ್ರತಿದಿನ ಹೊಸ ಎತ್ತರವನ್ನು ತಲುಪುತ್ತಿದ್ದಂತೆ, ಪಂದ್ಯಾವಳಿಯ ಸಂಭ್ರಮದ ಅಲೆ ಚೆನ್ನೈ ತಲುಪಿದೆ. ಏತನ್ಮಧ್ಯೆ ಚೆನ್ನೈನಲ್ಲಿ ನಡೆದ ಪಂದ್ಯದ ವೇಳೆ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ (MS Dhoni) ವಿಶೇಷ ಗೌರವ ಲಭಿಸಿದೆ.
ಇದನ್ನೂ ಓದಿ : Virat Kohli : ಮೈದಾನದಲ್ಲಿ ವಿರಾಟ್ ಮೆರೆದಾಟ; ಹೊಸ ದಾಖಲೆ ಬರೆದ ಕಿಂಗ್ ಕೊಹ್ಲಿ
ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೂ ಮುನ್ನ ಚೆನ್ನೈನ ಚೆಪಾಕ್ನಲ್ಲಿ ಧೋನಿಯ ದೊಡ್ಡ ಪೋಸ್ಟರ್ ಕಾಣಿಸಿಕೊಂಡಿತ್ತು. ಚೆನ್ನೈನ ಪೋಸ್ಟರ್ ಬಾಯ್ ಎಂದು ಪರಿಗಣಿಸಲ್ಪಟ್ಟಿರುವ ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿಯಾದರೂ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ.
ಮಹೇಂದ್ರ ಸಿಂಗ್ ಧೋನಿ ಜಾರ್ಖಂಡ್ನವರಾಗಿದ್ದರೂ ಅವರಿಗೆ ಅತಿ ಹೆಚ್ಚು ಅಭಿಮಾನಿಗಳು ಇರುವುದು ತಮಿಳುನಾಡಿನಲ್ಲಿ. ಅದಕ್ಕೆ ಕಾರಣವಾಗಿದ್ದು ಅವರ ಚೆನ್ನೈ ಸೂಪರ್ ಕಿಂಗ್ಸ್ ಜತೆಗಿನ ಪಯಣ. ಅವರು ಆ ಫ್ರಾಂಚೈಸಿ ಸೇರಿಕೊಂಡು ನಾಯಕತ್ವ ವಹಿಸಿಕೊಂಡ ಬಳಿಕ ದಾಖಲೆಯ ಐದು ಪ್ರಸ್ತಿಗಳನ್ನು ಗೆದ್ದಿದೆ. ಹೀಗಾಗಿ ಅವರಿಗೆ ಚೆನ್ನೈ ನಗರ ಸೇರಿದಂತೆ ಆ ರಾಜ್ಯದ ಎಲ್ಲೆಡೆ ಅಪಾರ ಅಭಿಮಾನಿಗಳು ಇದ್ದಾರೆ.
ಚೆನ್ನೈ ಮೈದಾನದಲ್ಲಿ ಸೂಪರ್ ಕಿಂಗ್ಸ್ ಜತೆ ಪಂದ್ಯ ನಡೆಯುವ ವೇಳೆಯಲ್ಲಂತೂ ಧೋನಿ ಫ್ಯಾನ್ಸ್ಗಳದ್ದೇ ಅಬ್ಬರ ಜಾಸ್ತಿ ಇರುತ್ತದೆ. ಧೋನಿಯೂ ಅದಕ್ಕೆ ಪೂರಕವಾಗಿ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದಾರೆ. ಹಲವಾರು ವಿನ್ನಿಂಗ್ ಶಾಟ್ಗಳು ಹಾಗೂ ಬೌಂಡರಿ ಮತ್ತು ಸಿಕ್ಸರ್ಗಳ ಜತೆಗೆ ಅವರಿಗೆ ಖುಷಿ ಕೊಟ್ಟಿದ್ದಾರೆ.