Site icon Vistara News

Ravindra Jadeja : ಸರ್ಫರಾಜ್​ ಖಾನ್​ ಕ್ಷಮೆ ಕೋರಿದ ರವೀಂದ್ರ ಜಡೇಜಾ!

Sarfaraz khan

ನವದೆಹಲಿ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆ ಸರ್ಫರಾಜ್ ಖಾನ್ (Sarfaraz Khan) ಅವರು ರನ್​ಔಟ್​ ಆಗಿರುವುದು ಕ್ರಿಕೆಟ್​ ಕ್ಷೇತ್ರದಲ್ಲಿ ಚರ್ಚೆಯ ವಿಷಯವಾಯಿತು. ಬಳಿಕ ಭಾರತದ ಆಲ್ರೌಂಡರ್ ರವೀಂದ್ರ ಜಡೇಜಾ (Ravindra Jadeja) ತಮ್ಮ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಪದಾರ್ಪಣೆ ಆಟಗಾರನ ವಿಕೆಟ್​ ಪತನಕ್ಕೆ ಕಾರಣವಾಗಿದ್ದು ತಮ್ಮ ತಪ್ಪು ಎಂದು ಒಪ್ಪಿಕೊಂಡರು.

ಸರ್ಫರಾಜ್ ಖಾನ್ ಟೆಸ್ಟ್ ಕ್ರಿಕೆಟ್​ನಲ್ಲಿ ಭಾರತಕ್ಕಾಗಿ ತಮ್ಮ ಚೊಚ್ಚಲ ಪಂದ್ಯದಲ್ಲಿಯೇ ಅರ್ಧ ಶತಕ ಬಾರಿಸಿದರು. ಬ್ಯಾಟ್ಸ್ಮನ್ ನಿರೀಕ್ಷೆಗೆ ತಕ್ಕಂತೆ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಅವರು ರವೀಂದ್ರ ಜಡೇಜಾ ಅವರ ತಪ್ಪಿನಿಂದಾಗಿ ರನ್ ಔಟ್ ಆದ ಕಾರಣ ಅವರ ಉತ್ತಮ ಇನಿಂಗ್ಸ್​ ಅನಗತ್ಯವಾಗಿ ಕೊನೆಯಾಯಿತು.

82ನೇ ಓರ್​ನ ಕೊನೆಯ ಎಸೆತದಲ್ಲಿ ರವೀಂದ್ರ ಜಡೇಜಾ ರನ್ ಗಳಿಸಲು ಕರೆ ನೀಡಿ ಒಂದೆರಡು ಹೆಜ್ಜೆಗಳನ್ನು ಹಾಕಿದರು. ಸರ್ಫರಾಜ್ ಖಾನ್ ಮುಂದೆ ಬಂದರು. ಜಡೇಜಾ ಅರ್ಧದಲ್ಲೇ ನಿಂತರು. ಸರ್ಫರಾಜ್​ಗೆ ಹಿಂತಿರುಗಲು ಯಾವುದೇ ಅವಕಾಶವಿರಲಿಲ್ಲ . ಮಾರ್ಕ್ ವುಡ್ ಬ್ಯಾಟರ್ ರನ್ಔಟ್ ಮಾಡಿದರು.

ಇದು ಸ್ಪಷ್ಟವಾಗಿ ರವೀಂದ್ರ ಜಡೇಜಾ ಅವರ ತಪ್ಪು. ಏಕೆಂದರೆ ಅವರು ಶತಕ ಗಳಿಸಲು ಉತ್ಸುಕರಾಗಿದ್ದರು. ಸರ್ಫರಾಜ್ ಖಾನ್ ಕೂಡ ಅವರಿಗೆ ಉತ್ತಮ ಬೆಂಬಲ ನೀಡಿದರು. ಅವರು ಹಿರಿಯ ಆಟಗಾರನಿಗಾಗಿ ತಮ್ಮ ವಿಕೆಟ್ ಅನ್ನು ತ್ಯಾಗ ಮಾಡಿದರು. ಈ ರನ್​ಔಟ್​ಗೆ ನಾಯಕ ರೋಹಿತ್ ಶರ್ಮಾ ಕೂಡ ತೀವ್ರ ನಿರಾಶೆಗೊಂಡರು.

ಸರ್ಫರಾಜ್ ಖಾನ್ ಅವರ ವಿಕೆಟ್ಗಾಗಿ ರವೀಂದ್ರ ಜಡೇಜಾ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿರುವುದರಿಂದ, ಆಲ್ರೌಂಡರ್ ಕ್ಷಮೆಯಾಚಿಸಿದರು. ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ಜತೆಗಾರನನ್ನು ಔಟ್ ಮಾಡಿದ್ದಕ್ಕೆ ಕ್ಷಮೆ ಯಾಚಿಸಿದ್ದಾರೆ.

ಇದನ್ನೂ ಓದಿ : Ravindra Jadeja : ಕಪಿಲ್ ದೇವ್​, ಆರ್​ ಅಶ್ವಿನ್​​ ಇರುವ ಎಲೈಟ್​ ಕ್ಲಬ್​ ಸೇರಿದ ರವೀಂದ್ರ ಜಡೇಜಾ

ಸರ್ಫರಾಜ್ ಖಾನ್ ಚೊಚ್ಚಲ ಪಂದ್ಯದಲ್ಲೇ ಅರ್ಧಶತಕ ಬಾರಿಸಿ ಉತ್ತಮ ಇನ್ನಿಂಗ್ಸ್ ಆಡಿದರು. ಬ್ಯಾಟ್ಸ್ಮನ್ 66 ಎಸೆತಗಳಲ್ಲಿ 62 ರನ್ ಗಳಿಸಿದರು ಮತ್ತು ಅವರ ಇನ್ನಿಂಗ್ಸ್​ಗಳಲ್ಲಿ 9 ಬೌಂಡರಿಗಳು ಮತ್ತು 1 ಸಿಕ್ಸರ್ ಇದ್ದವು. ಅವರು ರವೀಂದ್ರ ಜಡೇಜಾ ಅವರೊಂದಿಗೆ 77 ರನ್ ಸೇರಿಸಿ ತಂಡಕ್ಕೆ ನೆರವಾದರು.

ಮತ್ತೊಂದೆಡೆ ರವೀಂದ್ರ ಜಡೇಜಾ ತಮ್ಮ ತವರು ಪ್ರೇಕ್ಷಕರ ಮುಂದೆ ಅದ್ಭುತ ಶತಕ ಬಾರಿಸಿದರು. ಆಲ್ರೌಂಡರ್ ಮೊದಲ ದಿನ ಸ್ಪಂಪ್​ ವೇಲೆ ಅಜೇಯ 110 ರನ್ ಗಳಿಸಿದ್ದಾರೆ. ಗಾಯದಿಂದಾಗಿ ಅವರು ಎರಡನೇ ಪಂದ್ಯವನ್ನು ತಪ್ಪಿಸಿಕೊಂಡರು ಮತ್ತು ಬಲವಾದ ಪುನರಾಗಮನ ಮಾಡಿದರು.

Exit mobile version