Site icon Vistara News

Ravindra jadeja : ಗುಜರಾತ್​ನ ಪ್ರಸಿದ್ಧ ದೇಗುಲಕ್ಕೆ ಭೇಟಿ ನೀಡಿದ ರವೀಂದ್ರ ಜಡೇಜಾ ದಂಪತಿ

Ravindra jadeja

ವಿಸ್ತಾರನ್ಯೂಸ್​, ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯಕ್ಕಾಗಿ ಸಜ್ಜುಗೊಳ್ಳುತ್ತಿರುವ ಭಾರತ ತಂಡ ಪ್ರಮುಖ ಆಲ್​ರೌಂಡರ್​ ರವೀಂದ್ರ ಜಡೇಜಾ ತಮ್ಮ ಪತ್ನಿಯೊಂದಿಗೆ ಗುಜರಾತ್​ನ ಪುರಣಾ ಪ್ರಸಿದ್ಧ ಮಾತಾನಾ ಮಧ್ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ದೇಗುಲ ಭೇಟಿಯ ಹಾಗೂ ಪ್ರಾರ್ಥನೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಟೆಸ್ಟ್​ ಸರಣಿಗೆ ಸಿದ್ಧಗೊಳ್ಳುವ ಮೊದಲು ಅವರು ದೇಗುಲಕ್ಕೆ ಭೇಟಿ ನೀಡುವ ಮೂಲಕ ಅವರು ಮುಂದಿನ ಹಣಾಹಣಿಗಾಗಿ ವಿಶ್ವಾಸ ಹೆಚ್ಚಿಸಿಕೊಂಡರು.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶುಕ್ರವಾರ ಇಂಗ್ಲೆಂಡ್ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ತಂಡವನ್ನು ಪ್ರಕಟಿಸಿದೆ. ಇದು ಈ ವರ್ಷ ತವರಿನಲ್ಲಿ ನಡೆಯಲಿರುವ ಐದು ಪಂದ್ಯಗಳ ಸರಣಿಯಾಗಿದೆ. . ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಜನವರಿ 4ರಂದು ಕೇಪ್​ಟೌನ್​ನಲ್ಲಿ ಚೊಚ್ಚಲ ಟೆಸ್ಟ್ ಗೆಲುವು ಸಾಧಿಸಿದೆ ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಇದೀಗ ಅದೇ ಹಾದಿಯಲ್ಲಿ ಸಾಗುವ ಇರಾದೆಯಲ್ಲಿದೆ.

ತಂಡದಲ್ಲಿ ನಾಲ್ವರು ಸ್ಪಿನ್ನರ್​ಗಳಿದ್ದಾರೆ. ಅವರಲ್ಲಿ ರವೀಂದ್ರ ಜಡೇಜಾ ಪ್ರಮುಖ ಹೆಸರು. ತವರು ನೆಲದಲ್ಲಿ ಇಂಗ್ಲೆಂಡ್ ತಂಡವನ್ನು ಹಿಂದಿಕ್ಕುವ ಗುರಿ ಹೊಂದಿರುವ ಭಾರತ ಸ್ಪಿನ್ ವಿಭಾಗದ ಮೇಲೆ ಹೆಚ್ಚು ಅವಲಂಬಿತವಾಗಿದೆ . ಕುಲ್ದೀಪ್ ಯಾದವ್ ಸೇರ್ಪಡೆಯು ಆರ್ ಅಶ್ವಿನ್, ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರಂತಹ ಪ್ರಭಾವಿ ಸ್ಪಿನ್ ಆಟಗಾರರಿಗೆ ಅಮೂಲ್ಯವಾದ ರಕ್ಷಣೆ ಒದಗಿಸಲಿದೆ.

ಇದನ್ನೂ ಓದಿ : IPL 2024 : ಸಂಕ್ರಾತಿ ಹಿನ್ನೆಲೆಯಲ್ಲಿ ಐಪಿಎಲ್​ ತಂಡಗಳ ಗಾಳಿಪಟ ಸಮರ, ಇಲ್ಲಿದೆ ನೋಡಿ ವಿಡಿಯೊ

ವೇಗದ ವಿಭಾಗದಲ್ಲಿ, ಅವೇಶ್ ಖಾನ್ ನಿಯೋಜಿತ ಉಪನಾಯಕ ಜಸ್ಪ್ರೀತ್ ಬುಮ್ರಾ ನೇತೃತ್ವದ ವಿಭಾಗವನ್ನು ಸೇರಿಕೊಂಡಿದ್ದಾರೆ. ವೇಗದ ಬೌಲಿಂಗ್ ಆಯ್ಕೆಗಳಲ್ಲಿ ಮೊಹಮ್ಮದ್ ಸಿರಾಜ್ ಮತ್ತು ಮುಖೇಶ್ ಕುಮಾರ್ ಕೂಡ ಇದ್ದಾರೆ. ಇಂಗ್ಲಿಷ್ ತಂಡವು ಒಡ್ಡುವ ಸವಾಲುಗಳನ್ನು ಎದುರಿಸಲು ತಂಡವು ಸಕಲ ರೀತಿಯಲ್ಲಿ ಸಜ್ಜಾಗಿದೆ.

ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ಆರ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.

ಟೆಸ್ಟ್​ ಸರಣಿಗೂ ಅವಕಾಶ ಪಡೆಯದ ಇಶಾನ್

ಮುಂಬಯಿ: ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಶುಕ್ರವಾರ ಬಿಸಿಸಿಊ ಭಾರತ ತಂಡವನ್ನು ಪ್ರಕಟಿಸಿತ್ತು. ಆದರೆ, ಈ ತಂಡದಲ್ಲಿ ಇಶಾನ್ ಕಿಶನ್​(ishan Kishan) ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅಶಿಸ್ತಿನ ಕಾರಣದಿಂದಲೇ ಅವರನ್ನು ತಂಡದಿಂದ ಕೈಬಿಡಲಾಗಿದ ಎಂಬ ಮಾತುಗಳು ಮತ್ತೆ ಕೇಳಿ ಬಂದಿದೆ.

ಮಾನಸಿಕ ಒತ್ತಡದಿಂದ ಹೊರಬರಲು ವಿಶ್ರಾಂತಿ ಬೇಕೆಂದು ಕಾರಣ ಹೇಳಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ದೂರ ಉಳಿದಿದ್ದ ಇಶಾನ್‌ ಕಿಶನ್‌, ಬಳಿಕ ದುಬೈನಲ್ಲಿ ಮಾಜಿ ಆಟಗಾರ ಧೋನಿ ಜತೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ಅಷ್ಟೇ ಅಲ್ಲ, ಟಿವಿ ಶೋಗಳಲ್ಲೂ ಕೂಡಾ ಭಾಗಿಯಾಗಿದ್ದರು. ಇಶಾನ್​ ಎಂಜಾಯ್​ ಮಾಡುತ್ತಿರುವ ಪೋಟೊಗಳು ವೈರಲ್​ ಕೂಡ ಆಗಿತ್ತು.

‘ಕಿಶನ್‌ ನಂಬಿಕೆಗೆ ಅರ್ಹರಲ್ಲ. ಕ್ರಿಕೆಟ್‌ನಿಂದ ದೂರ ಉಳಿಯಲು ಕೊಟ್ಟ ಕಾರಣವೇ ಬೇರೆ, ಮಾಡಿದ್ದೇ ಬೇರೆ’ ಎಂದು ಬಿಸಿಸಿಐ ಶಿಸ್ತು ಕ್ರಮ ಕೈಗೊಂಡಂತೆ ಅವರನ್ನು ಅಫಘಾನಿಸ್ತಾನ ಟಿ20 ಸರಣಿಯಿಂದ ಕೈಬಿಟ್ಟಿತ್ತು. ಆದರೆ, ಕೋಚ್​ ದ್ರಾವಿಡ್‌ ಅವರು ಕಿಶನ್‌ ವಿರುದ್ಧ ಅಶಿಸ್ತಿನ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದರು. ಅಲ್ಲದೆ ಅವರಿಗೆ ರಣಜಿ ಆಡಲು ಸೂಚನೆ ನೀಡಿದ್ದರು. ಇದಕ್ಕೂ ಇಶಾನ್​ ಒಪ್ಪಲಿಲ್ಲ. ಇದೇ ಕಾರಣಕ್ಕೆ ಅವರನ್ನು ಇಂಗ್ಲೆಂಡ್​ ಸರಣಿಗೆ ಆಯ್ಕೆ ಮಾಡಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಇಶಾನ್​ ಸ್ಥಾನಕ್ಕೆ ಧ್ರುವ್ ಜುರೆಲ್ ಅವರನ್ನು ಹೆಚ್ಚುವರಿ ಕೀಪರ್​ ಆಗಿ ಆಯ್ಕೆ ಮಾಡಲಾಗಿದೆ. ಇಶಾನ್​ ಅವರ ಕೆಟ್ಟ ನಡೆ, ಮುಂಬರುವ ಟಿ20 ವಿಶ್ವಕಪ್‌ ತಂಡದಲ್ಲೂ ಅವರಿಗೆ ಜಾಗ ಸಿಗದಂತೆ ಮಾಡಬಹುದು ಎಂದು ಹೇಳಲಾಗುತ್ತಿದೆ.

Exit mobile version