ಬೆಂಗಳೂರು: ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಪ್ಲೇಆಫ್ ರೇಸ್ನಿಂದ ಹೊರಗೆ ಬಿದ್ದಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ತನ್ನ ಕೊನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ 6 ವಿಕೆಟ್ಗಳಿಂದ ಸೋಲುವುದರೊಂದಿಗೆ ಆರ್ಸಿಬಿ ತನ್ನ ಅಭಿಯಾನ ಮುಗಿಸಿದೆ. ಇದರೊಂದಿಗೆ ಮುಂಬಯಿ ಇಂಡಿಯನ್ಸ್ ತಂಡ ಪ್ಲೇಆಫ್ ಅವಕಾಶ ಪಡೆದುಕೊಂಡಿದೆ. ಭಾನುವಾರ ನಡೆದ ಈ ಎರಡು ಪಂದ್ಯಗಳ ಬಳಿಕ ಐಪಿಎಲ್ ಅಂಕಪಟ್ಟಿ ಹೀಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಗೆಲುವು ಸಾಧಿಸುವ ಮೂಲಕ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ (ಜಿಟಿ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 197 ರನ್ಗಳ ಸವಾಲಿನ ಮೊತ್ತವನ್ನು ದಾಖಲಿಸಿತು. ಕೊಹ್ಲಿ 61 ಎಸೆತಗಳಲ್ಲಿ 101* ರನ್ ಗಳಿಸುವ ಮೂಲಕ ಆರ್ಸಿಬಿಗೆ 198 ರನ್ ಪೇರಿಸಲು ನೆರವಾದರು. ಅತ್ತ ಗುಜರಾತ್ ತಂಡದ ಪರವಾಗಿ ಆರಂಭಿಕ ಬ್ಯಾಟ್ಸ್ಮನ್ ಶುಭ್ಮನ್ ಗಿಲ್ ಐಪಿಎಲ್ 2023ರಲ್ಲಿ ತಮ್ಮ ಎರಡನೇ ಶತಕವನ್ನು (52 ಎಸೆತಗಳಲ್ಲಿ 104* ರನ್) ಬಾರಿಸುವ ಮೂಲಕ ಆರ್ಸಿಬಿ ಸೋಲಿಗೆ ಕಾರಣರಾದರು.
ಆರ್ಸಿಬಿಯ ಸೋಲು ಮುಂಬೈ ಇಂಡಿಯನ್ಸ್ (ಎಂಐ) ಬಳಗವನ್ನು ನಾಲ್ಕನೇ ತಂಡವಾಗಿ ಪ್ಲೇಆಫ್ಗೆ ಎಂಟ್ರಿ ಮಾಡಿಸಿತು. ಇದರ ಜತೆಗೆ ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಎರಡನೇ ತಂಡವಾಗಿ ಮತ್ತು ಕೃಣಾಲ್ ಪಾಂಡ್ಯ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ಮೂರನೇ ಪ್ಲೇಆಫ್ಗೇರಿತು. ಗುಜರಾತ್ ತಂಡ ಪ್ಲೇಆಫ್ ಪಟ್ಟಿಯಲ್ಲಿರುವ ಮೊದಲ ತಂಡ.
ಗುಜರಾತ್ ತಂಡದ ವೇಗಿ ಮೊಹಮ್ಮದ್ ಶಮಿ 14 ಪಂದ್ಯಗಳಲ್ಲಿ 24 ವಿಕೆಟ್ಗಳೊಂದಿಗೆ ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್ 2023ರ ಲೀಗ್ ಹಂತದಲ್ಲಿ ಎರಡನೇ ಸ್ಥಾನದಲ್ಲಿರುವ ರಶೀದ್ ಖಾನ್ ಕೂಡ ಅಷ್ಟೇ ವಿಕೆಟ್ ಪಡೆದಿದ್ದಾರೆ. ಪರ್ಪಲ್ ಕ್ಯಾಪ್ ಪಟ್ಟಿಯಲ್ಲಿ ಯುಜ್ವೇಂದ್ರ ಚಹಲ್ (21) ಮತ್ತು ಪಿಯೂಷ್ ಚಾವ್ಲಾ (20) ನಂತರದ ಸ್ಥಾನದಲ್ಲಿದ್ದಾರೆ.
ತಂಡ | ಪಂದ್ಯ | ಗೆಲುವು | ಸೋಲು | ಅಂಕಗಳು | ನೆಟ್ ರನ್ರೇಟ್ |
ಗುಜರಾತ್ ಟೈಟನ್ಸ್ | 14 | 10 | 4 | 20 | +0.809 |
ಚೆನ್ನೈ ಸೂಪರ್ ಕಿಂಗ್ಸ್ | 14 | 8 | 5 | 17 | +0.652 |
ಲಕ್ನೋ ಸೂಪರ್ ಜೈಂಟ್ಸ್ | 14 | 8 | 5 | 17 | +0.284 |
ಮುಂಬೈ ಇಂಡಿಯನ್ಸ್ | 14 | 8 | 6 | 16 | -0.044 |
ರಾಜಸ್ಥಾನ್ ರಾಯಲ್ಸ್ | 14 | 7 | 7 | 14 | +0.148 |
ಆರ್ಸಿಬಿ | 14 | 7 | 7 | 14 | +0.135 |
ಕೆಕೆಆರ್ | 14 | 6 | 8 | 12 | -0.239 |
ಪಂಜಾಬ್ ಕಿಂಗ್ಸ್ | 14 | 6 | 8 | 12 | -0.304 |
ಡೆಲ್ಲಿ ಕ್ಯಾಪಿಟಲ್ಸ್ | 14 | 5 | 9 | 10 | -0.808 |
ಹೈದರಾಬಾದ್ | 13 | 4 | 10` | 8 | -0.590 |
ಆರೆಂಜ್ ಕ್ಯಾಪ್ | ಪರ್ಪಲ್ ಕ್ಯಾಪ್ |
ಫಾಫ್ ಡು ಪ್ಲೆಸಿಸ್(ಆರ್ಸಿಬಿ) | ಮೊಹಮ್ಮದ್ ಶಮಿ(ಗುಜರಾತ್) |
730 ರನ್ಗಳು | 24ವಿಕೆಟ್ |