Site icon Vistara News

Reece Topley : ಆರ್​ಸಿಬಿ ವೇಗದ ಬೌಲರ್​ ರೀಸ್​ ಟಾಪ್ಲೆ​ ಈ ಬಾರಿಯ ಐಪಿಎಲ್​ಗೂ ಅಲಭ್ಯ?

Rece Topley

ಬೆಂಗಳೂರು: ಗಾಯದ ಸಮಸ್ಯೆಯಿಂದಾಗಿ ಎನ್ಒಸಿ ಪಡೆಯದ ಕಾರಣ ರೀಸ್ ಟಾಪ್ಲೆ (Reece Topley) ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ನಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) 2024 ರ ಐಸಿಸಿ ಟಿ 20 ವಿಶ್ವಕಪ್​ಗಾಗಿ ಅವರು ಸಂಪೂರ್ಣವಾಗಿ ಫಿಟ್ ಆಗಬೇಕೆಂದು ಬಯಸಿದೆ. ಈ ವೇಳೆ ಅವರು ಗಾಯದ ಸಮಸ್ಯೆ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಅವರು ಐಪಿಎಲ್ 2024ರಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲಿದ್ದಾರೆಯೇ ಎಂದು ಅಭಿಮಾನಿಗಳು ಚಿಂತಿತರಾಗಿದ್ದಾರೆ. ಗಾಯದಿಂದಾಗಿ ಅವರು ಐಪಿಎಲ್ 2023 ರ ಹೆಚ್ಚಿನ ಪಂದ್ಯಗಳಿಂದ ಹೊರಗುಳಿದಿದ್ದರು.

ರೀಸ್ ಟಾಪ್ಲೆ ಐಪಿಎಲ್​​ನಲ್ಲಿ ಆರ್​ಸಿಬಿ ತಂಡ ಸೇರಿಕೊಂಡಿದ್ದಾರೆ. ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್​ನಲ್ಲಿ ಕೇವಲ ಒಂದು ಪಂದ್ಯವನ್ನು ಆಡಿದ್ದಾರೆ. ನಂತರ ಅವರು ಗಾಯಗೊಂಡು ಋತುವಿನ ಉಳಿದ ಭಾಗವನ್ನು ತಪ್ಪಿಸಿಕೊಂಡಿದ್ದರು. ಈಗ ಅವರು ಮತ್ತೊಂದು ಗಾಯದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಅವರು ಈ ಋತುವಿನಲ್ಲಿ ಪಾಕಿಸ್ತಾನ ಸೂಪರ್ ಲೀಗ್​ನಲ್ಲಿ ಹೊರಗುಳಿದಿದ್ದಾರೆ. ಅಲ್ಲಿ ಅವರು ಈ ಋತುವಿನಲ್ಲಿ ಮುಲ್ತಾನ್ ಸುಲ್ತಾನ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

ರೀಸ್ ಟಾಪ್ಲೆ ಎಸ್ಎ 20 ಲೀಗ್​ನಲ್ಲಿ ಸಂಪೂರ್ಣವಾಗಿ ಫಿಟ್ ಆಗಿದ್ದರು. ಲೀಗ್​ನ ಫೈನಲ್ ತಲುಪಿದ ಡರ್ಬಾನ್ ಸೂಪರ್ ಜೈಂಟ್ಸ್ ಪರ ಇಡೀ ಪಂದ್ಯಾವಳಿ ಪರ ಆಡಿದ್ದಾರೆ. ಆದರೆ ಫೈನಲ್ ಮುಖಾಮುಖಿಯಲ್ಲಿ ಸನ್ರೈಸರ್ಸ್ ಈಸ್ಟರ್ನ್ ಕೇಪ್ ವಿರುದ್ಧ ಈ ತಂಡ ಸೋತಿತ್ತು. ಟಾಪ್ಲೆ 12 ಪಂದ್ಯಗಳಲ್ಲಿ 25.31 ಸರಾಸರಿಯಲ್ಲಿ 13 ವಿಕೆಟ್​​ಗಳನ್ನು ಗಳಿಸಿದ್ದಾರೆ. ಈ ಋತುವಿನಲ್ಲಿ ಎಸ್ಎ 20 ಲೀಗ್​ನಲ್ಲಿ ಡಿಎಸ್​ಜಿ ಪರ ಎಲ್ಲಾ 12 ಪಂದ್ಯಗಳನ್ನು ಆಡಿದ್ದಾರೆ.

ಇದನ್ನೂ ಓದಿ : Rivaba Jadeja : ಮಾವನ ಬಗ್ಗೆ ಕೇಳಿದಾಗ ಸಿಟ್ಟಿಗೆದ್ದ ಜಡೇಜಾ ಪತ್ನಿ ರಿವಾಬಾ

ಗಾಯಗೊಂಡಿರುವ ಟಾಪ್ಲೆ ಅವರಿಂದ ಇಸಿಬಿ ಎನ್ಒಸಿಯನ್ನು ಹಿಂತೆಗೆದುಕೊಂಡಿದ್ದಾರೆ. ಇದರ ಪರಿಣಾಮವಾಗಿ ಅವರು ಪಾಕಿಸ್ತಾನ ಸೂಪರ್ ಲೀಗ್​ನಿಂದಾಗಿ ಹೊರಗುಳಿದಿದ್ದಾರೆ. ಫ್ರಾಂಚೈಸಿಯ ಮಾಲೀಕರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಅವರು ಎಸ್ಎ 20 ಲೀಗ್​ನಲ್ಲಿ ಸಂಪೂರ್ಣವಾಗಿ ಫಿಟ್ ಆಗಿರುವುದರಿಂದ ಮತ್ತು ಫ್ರಾಂಚೈಸಿಗಾಗಿ ಹೆಚ್ಚಿನ ಪಂದ್ಯಗಳನ್ನು ಆಡಿದ್ದರಿಂದ ಪಿತೂರಿಯೂ ಆಗಿರಬಹುದು ಎಂದು ಹೇಳಿದೆ. ಡರ್ಬಾನ್ ಸೂಪರ್ ಜೈಂಟ್ಸ್ ಪರ ಪ್ಲೇಆಫ್ ಪಂದ್ಯಗಳು ಸೇರಿದಂತೆ 13 ಪಂದ್ಯಗಳಲ್ಲಿ 12 ಪಂದ್ಯಗಳನ್ನು ಆಡಿದ್ದಾರೆ. ಈಗ ಇದ್ದಕ್ಕಿದ್ದಂತೆ ಅವರು ಗಾಯಗೊಂಡಿದ್ದಾರೆ ಎಂದು ಇಸಿಬಿ ಹೇಳಿದೆ.

ಆರ್​ಸಿಬಿಯಲ್ಲಿ ವೇಗದ ಬೌಲರ್​

ಐಪಿಎಲ್ 2024 ರಲ್ಲಿ ರೀಸ್ ಟಾಪ್ಲೆ ಆರ್​ಸಿಬಿ ಪರ ಆಡಬೇಕಾಗಿದೆ. ಫ್ರಾಂಚೈಸಿ ಐಪಿಎಲ್ ಹರಾಜಿನಲ್ಲಿ ಅಲ್ಜಾರಿ ಜೋಸೆಫ್ ಮತ್ತು ಟಾಮ್ ಕರ್ರನ್ ಅವರಂತಹ ಕೆಲವು ಉತ್ತಮ ವೇಗದ ಬೌಲರ್​ಗಳನ್ನು ಖರೀದಿಸಿದೆ. ಹರಾಜಿಗೆ ಮುಂಚಿತವಾಗಿ ಮುಂಬೈ ಇಂಡಿಯನ್ಸ್​​ನಿಂದ ಕ್ಯಾಮರೂನ್ ಗ್ರೀನ್ ಅವರನ್ನೂ ಟ್ರೇಡ್​ ಮೂಲಕ ಪಡೆದುಕೊಂಡಿದೆ. ಐಪಿಎಲ್ ವೇಳೆಗೆ ಅವರು ಫಿಟ್ ಆಗಿದ್ದರೆ ಮೊಹಮ್ಮದ್ ಸಿರಾಜ್ ಮತ್ತು ರೀಸ್ ಟಾಪ್ಲೆ ಅವರ ಸೇವೆಯೂ ತಂಡಕ್ಕೆ ಸಿಗಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಮಾರ್ಚ್ ಮೂರನೇ ವಾರದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ. ಮೇ ಕೊನೆಯ ವಾರದಲ್ಲಿ ಕೊನೆಗೊಳ್ಳಲಿದೆ. 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ವೆಸ್ಟ್ ಇಂಡೀಸ್ ಹಾಗೂ ಅಮೆರಿಕ ಜಂಟಿಯಾಗಿ ಆತಿಥ್ಯ ವಹಿಸಲಿವೆ.

Exit mobile version