Site icon Vistara News

IPL 2024 Auction : ಆಟಗಾರರನ್ನು ಖರೀದಿಸಿದ ಬಳಿಕ ಆರ್​ಸಿಬಿ ತಂಡ ಈ ರೀತಿ ಇದೆ

RCB Team

ಬೆಂಗಳೂರು: ಐಪಿಎಲ್ ಹರಾಜಿನಲ್ಲಿ (IPL 2024 Auction) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡಕ್ಕೆ ಆರಂಭದಲ್ಲೇ ನಿರಾಸೆ ಉಂಟಾಗಿತ್ತು. ಆಸೀಸ್​ ನಾಯಕ ಪ್ಯಾಟ್ ಕಮಿನ್ಸ್ ಅವರನ್ನು ಖರೀದಿಸುವ ಉದ್ದೇಶ ಈಡೇರಲಿಲ್ಲ. ಅವರನ್ನು ಎಸ್​ಎಸ್​ಆರ್​ಎಚ್​ ತಂಡ 20.5 ಕೋಟಿ ರೂ.ಗೆ ತನ್ನ ತೆಕ್ಕೆಗೆ ತೆಗೆದುಕೊಂಡಾಗ ಸುಮ್ಮನಾಗಬೇಕಾಯಿತು. ತಕ್ಷಣವೇ ಬೌಲರ್​ ಒಬ್ಬರನ್ನು ಆಯ್ಕೆ ಮಾಡುವ ಏಕಮೇವ ಉದ್ದೇಶದೊಂದಿಗೆ ಅಲ್ಜಾರಿ ಜೋಸೆಫ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿತು.

ಪ್ರತಿಸ್ಪರ್ಧಿ ಫ್ರಾಂಚೈಸಿಗಳೊಂದಿಗೆ ಜಿದ್ದಿಗೆ ನಿಂತು ಅಂತಿಮವಾಗಿ ಜೋಸೆಫ್ ಅವರನ್ನು 11.5 ಕೋಟಿ ರೂ.ಗೆ ತನ್ನದಾಗಿಸಿಕೊಂಡಿತು. ಹರಾಜಿನ ದೊಡ್ಡ ದೊಡ್ಡ ತಲೆಗಳು ಮಾರಾಟವಾಗಿ ಅಬ್ಬರ ಕಡಿಮೆಯಾಗುತ್ತಿದ್ದಂತೆ ಆರ್​ಸಿಬಿ ತನ್ನ ತಂಡವನ್ನು ಬಲಪಡಿಸಲು ಶುರು ಮಾಡಿತು. ಹರಾಜು ಮುಕ್ತಾಯಗೊಳ್ಳುವುದರೊಂದಿಗೆ ಉಳಿದ ಎಲ್ಲ ಆರು ಸ್ಲಾಟ್​ಗಳನ್ನು ಭರ್ತಿ ಮಾಡಿತು.

ಆರ್​ಸಿಬಿ ಕರೆತಂದ ಆಟಗಾರರು

ಯುವ ಆಟಗಾರ ಸೌರವ್ ಚೌಹಾಣ್ ಅವರನ್ನು 20 ಲಕ್ಷ ರೂ.ಗೆ ಖರೀದಿಸುವುದರೊಂದಿಗೆ ಆರ್​ಸಿಬಿ ಹರಾಜು ಮುಗಿಸಿದರು.. ಅದಕ್ಕಿಂತ ಮೊದಲು ಸ್ವಪ್ನಿಲ್ ಸಿಂಗ್ ಅವರನ್ನು ಬೆಲೆ 20 ಲಕ್ಷ ರೂ.ಗೆ ಖರೀದಿಸಿತು. ಅದೇ ರೀತಿ ಕಿವೀಸ್ ವೇಗಿ ಲಾಕಿ ಫರ್ಗುಸನ್ ಅವರನ್ನು ಪ್ರತಿರೋಧವಿಲ್ಲದೆ ಅವರ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಸಿದೆ.

ಇಂಗ್ಲೆಂಡ್ ಆಲ್​ರೌಂಡರ್​ ಟಾಮ್ ಕರ್ರನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಲೆ 1.50 ಕೋಟಿ ರೂ.ಗೆ ಸೇರಿಕೊಂಡರು. ಕೆರಿಬಿಯನ್ ವೇಗದ ಬೌಲರ್ ಅಲ್ಜಾರಿ ಜೋಸೆಫ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಜಿದ್ದಿನ ಬಳಿಕ ಆರ್​ಸಿಬಿ 11.50 ಕೋಟಿ ರೂಪಾಯಿಗೆ ಖರೀದಿ ಮಾಡಿತು.ಭರವಸೆಯ ವೇಗದ ಬೌಲರ್ ಯಶ್ ದಯಾಳ್ ಅವರನ್ನು ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿ 5 ಕೋಟಿ ರೂ.ಗೆ ಖರೀದಿಸಿತು.

ವೇಗದ ಬೌಲಿಂಗ್​ಗೆ ಮಣೆ

ಐಪಿಎಲ್ 2024 ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವೇಗದ ಬೌಲಿಂಗ್ ಪಡೆಯನ್ನು ಹೆಚ್ಚಿಸಿದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬೈ ಇಂಡಿಯನ್ಸ್ (ಎಂಐ) ನಿಂದ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸುವ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಐಪಿಎಲ್ ಟ್ರೇಡಿಂಗ್ ಮಾಡಿತ್ತು. ಶಹಬಾಜ್ ಅಹ್ಮರ್​ ಅವರನ್ನು ಸನ್​ರೈಸರ್ಸ್​ ತಂಡಕ್ಕೆ ಕಳುಹಿಸಿ ಮಯಾಂಕ್ ದಾಗರ್ ಅವರನ್ನು ಕರೆ ತಂದಿತ್ತು. ಯಶ್​ ದಯಾಳ್ ಈಗ ವೇಗಕ್ಕೆ ಇಂಬುಕೊಟ್ಟಿದ್ದಾರೆ.

ಇದನ್ನೂ ಓದಿ : IPL 2024 Auction : ಮಿನಿ ಹರಾಜಿನ ಐದು ದುಬಾರಿ ಆಟಗಾರರು ಇವರು

ಹರಾಜಿಗೆ ಮೊದಲು ಆರ್​​ಸಿಬಿ

ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ (ಎಸ್ಆರ್ಹೆಚ್), ವಿಜಯಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್.

ಹರಾಜಿನಲ್ಲಿ ಆರ್​ಸಿಬಿ ಖರೀದಿಸಿದ ಆಟಗಾರರು

ಅಲ್ಜಾರಿ ಜೋಸೆಫ್ (11.5 ಕೋಟಿ), ಯಶ್ ದಯಾಳ್ (5 ಕೋಟಿ), ಟಾಮ್ ಕರ್ರನ್ (1.5 ಕೋಟಿ), ಲಾಕಿ ಫರ್ಗುಸನ್ (2 ಕೋಟಿ), ಸ್ವಪ್ನಿಲ್ ಸಿಂಗ್ (0.2 ಕೋಟಿ), ಸೌರವ್ ಚೌಹಾಣ್ (0.2 ಕೋಟಿ).

ಹರಾಜಿನ ಬಳಿಕ ಆರ್​​ಸಿಬಿ ತಂಡ

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್ವೆಲ್, ವಿರಾಟ್ ಕೊಹ್ಲಿ, ಕ್ಯಾಮೆರಾನ್ ಗ್ರೀನ್, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಾಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಯಾಂಕ್ ದಾಗರ್, ಮಹಿಪಾಲ್ ಲೊಮ್ರೊರ್, ಕರಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯ್ ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್.

Exit mobile version