Site icon Vistara News

RCB Funny Memes: ಕೊನೆಗೊಂಡ ಆರ್​ಸಿಬಿಯ ಹೊಸ ಅಧ್ಯಾಯ; ಟ್ರೋಲ್​, ಮೀಮ್ಸ್​ಗಳ ಮೂಲಕವೇ ತಿರುಗೇಟು ಕೊಟ್ಟ ಚೆನ್ನೈ ಅಭಿಮಾನಿಗಳು

RCB Funny Memes

RCB Funny Memes: RCB Funny Memes and Jokes Go Viral as Fans Troll Royal Challengers Bengaluru After Disappointing Loss to RR in Eliminator

ಬೆಂಗಳೂರು: ಐಪಿಎಲ್​ನ(IPL 2024) ಸಾಂಪ್ರದಾಯಿಕ ಬದ್ಧ ಎದುರಾಳಿಗಳೆಂದರೆ ಅದು ಚೆನ್ನೈ ಸೂಪರ್​ ಕಿಂಗ್ಸ್(CSK)​ ಮತ್ತು ಆರ್​ಸಿಬಿ(RCB). ಅಭಿಮಾನಿಗಳ ಅತಿಯಾದ ಹುಚ್ಚಾಟದಿಂದಲೇ ಉಭಯ ತಂಡಗಳನ್ನು ಬುದ್ಧ ಎದುರಾಳಿಗಳೆಂದು ಕರೆಯಲಾಗುತ್ತದೆ. ಯಾರೇ ಗೆದ್ದರೂ ಅಥವಾ ಸೋತರೂ ಅಭಿಮಾನಿಗಳು ಪರಸ್ಪರ ಟ್ರೋಲ್​ ಮಾಡುತ್ತಾರೆ. ಅಲ್ಲದೆ ಹೊಡೆದಾಟ ನಡೆಸಿದ ನಿದರ್ಶನ ಕೂಡ ಸಾಕಷ್ಟಿದೆ.

ಕಳೆದ ಶನಿವಾರ ಚಿನ್ನಸ್ವಾಮಿ ಕ್ರೀಡಾಂಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ತಂಡ ಆರ್​ಸಿಬಿ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತ್ತು. ಈ ವೇಳೆ ಆರ್​ಸಿಬಿ ಅಭಿಮಾನಿಗಳು ಎಲ್ಲೆ ಮೀರಿದ ಸಂಭ್ರಮಾಚರಣೆ ಮಾಡಿ ಚೆನ್ನೈ ಅಭಿಮಾನಿಗಳಿಗೆ ಎಲ್ಲೆಂದರಲ್ಲಿ ಕಾಟ ಕೊಟ್ಟಿದ್ದರು. ಇದೀಗ ಆರ್​ಸಿಬಿ ರಾಜಸ್ಥಾನ್​ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ. ಇದೇ ಸಂತಸದಲ್ಲಿ ಆರ್​ಸಿಬಿ ಅಭಿಮಾನಿಗಳನ್ನು ಚೆನ್ನೈ ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್​ ಮಾಡಿದ್ದಾರೆ.

ಆರ್‌ಸಿಬಿ ಅಭಿಮಾನಿಗಳಿ ತಮ್ಮ ತಂಡದ ಸೋಲಿನ ನಿರಾಸೆ ಮಧ್ಯೆ ಇದೀಗ ಚೆನ್ನೈ ಅಭಿಮಾನಿಗಳ ಟ್ರೋಲ್​ ಮತ್ತು ಮೀಮ್ಸ್​ಗಳ ಬಿಸಿ ಮುಟ್ಟಿದೆ. ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಫ್ಯಾನ್ಸ್ ಪುಟದಲ್ಲಿ ಆರ್‌ಸಿಬಿ ಸೋಲನ್ನು ಟ್ರೋಲ್ ಮಾಡಲಾಗಿದ್ದು. ‘ಕರ್ಮ’ ಗುರಿಯಿಟ್ಟವನ ಬಳಿಗೇ ತಿರುಗು ಬಾಣದಂತೆ ಹಿಂತಿರುಗಲಿದೆ ಎಂದು ಕಾಲೆಳೆದಿದ್ದಾರೆ.

ಇದನ್ನೂ ಓದಿ RCB: ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ವಿಜಯ್​ ಮಲ್ಯ ಕಾರಣವಂತೆ!

ಚೆನ್ನೈ ಸೂಪರ್​ ಕಿಂಗ್ಸ್​ನ ಫ್ಯಾನ್ಸ್ ಪೇಜ್‌ವೊಂದು ಬೆಂಗಳೂರು ದಂಡು ರೈಲ್ವೇ ನಿಲ್ದಾಣದ (Bangalore cant) ಫೋಟೋವನ್ನು ಹಂಚಿಕೊಂಡಿದೆ. ಈ ಮೂಲಕ ಬೆಂಗಳೂರು ತಂಡದಿಂದ ಕಪ್‌ ಗೆಲ್ಲಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಈ ಮೀಮ್ಸ್ ಅನ್ನು ಸಿಎಸ್‌ಕೆ ಫ್ಯಾನ್ ಪೇಜ್‌ ಹಂಚಿಕೊಂಡಿದೆ. ಈ ಮೀಮ್ಸ್‌ ಅನ್ನು ತುಷಾರ್‌ ದೇಶ್‌ಪಾಂಡೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.

ಎಲಿಮಿನೇಟರ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಆರ್​ಸಿಬಿ 8 ವಿಕೆಟಿಗೆ 172 ರನ್‌ ಗಳಿಸಿತು. ರಾಜಸ್ಥಾನ್‌ 19 ಓವರ್‌ಗಳಲ್ಲಿ 6 ವಿಕೆಟಿಗೆ 174 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಚೇಸಿಂಗ್​ ವೇಳೆ ರಾಜಸ್ಥಾನ್‌ ಬಿರುಸಿನ ಆಡವಾಡಿತು. ಜೈಸ್ವಾಲ್‌ (45)-ಕ್ಯಾಡ್‌ಮೋರ್‌ (20) ಮೊದಲ ವಿಕೆಟ್​ಗೆ 46 ರನ್‌ ಜತೆಯಾಟ ನಿಭಾಯಿಸಿದರು. ಆ ಬಳಿಕ ಜೈಸ್ವಾಲ್‌-ಸ್ಯಾಮ್ಸನ್‌ ಜತೆಗೂಡಿ 35 ರನ್‌ ಕಲೆಹಾಕಿದರು. 112ಕ್ಕೆ 4 ವಿಕೆಟ್‌ ಬಿದ್ದಾಗ ಪಂದ್ಯ ಕುತೂಹಲ ಘಟ್ಟ ತಲುಪಿತು. ಆದರೆ ಪರಾಗ್‌-ಹೆಟ್‌ಮೈರ್‌ ಸಿಡಿದು ನಿಂತು 45 ರನ್‌ ಜತೆಯಾಟ ನಿಭಾಯಿಸಿ ಆರ್‌ಸಿಬಿಗೆ ಸೋಲುಣಿಸಿದರು. ಮೂರು ಓವರ್​ ತನಕ ಉತ್ತಮ ಲಯದಲ್ಲಿದ್ದ ಕ್ಯಾಮರೂನ್​ ಗ್ರೀನ್​ ನಾಲ್ಕನೇ ಓವರ್​ನಲ್ಲಿ ದುಬಾರಿಯಾದರು. ಹೆಟ್‌ಮೈರ್‌ ಈ ಓವರ್​ನಲ್ಲಿ ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಬಿಸಿ ಮುಟ್ಟಿಸಿದರು.

Exit mobile version