Site icon Vistara News

WPL 2024 : ಪೆರ್ರಿ ಭರ್ಜರಿ ಆಟ, ಪ್ಲೇಆಫ್​ ಪ್ರವೇಶಿಸಿದ ಆರ್​ಸಿಬಿ

RCB Team

ನವ ದೆಹಲಿ : ಮಹಿಳೆಯರ ಪ್ರೀಮಿಯರ್ ಲೀಗ್​ನ ಪ್ಲೇಆಫ್ ಹಂತಕ್ಕೆ ಸ್ಮೃತಿ ಮಂಧಾನಾ ನೇತೃತ್ವದ ಆರ್​ಸಿಬಿ ತಂಡ ಪ್ರವೇಶ ಪಡೆದಿದೆ. ಈ ಮೂಲಕ ಎರಡನೇ ಆವೃತ್ತಿಯಲ್ಲಿ ಪ್ಲೇ ಆಫ್​ ಪ್ರವೇಶ ಪಡೆದು ಸಾಧನೆ ಮಾಡಿದೆ. ಮುಂಬಯಿ ಇಂಡಿಯನ್ಸ್​ ವಿರುದ್ಧ 7 ವಿಕೆಟ್​ ಭರ್ಜರಿ ಜಯ ದಾಖಲಿಸಿ ಸಾಧನೆ ಮಾಡಿದೆ. ಅದೇ ರೀತಿ ಹಿಂದಿನ ಪಂದ್ಯದಲ್ಲಿ ಡೆಲ್ಲಿ ವಿರುದ್ಧದ ಒಂದು ರನ್​ಗಳ ಸೋಲಿನ ಕಹಿಯನ್ನು ಮರೆತಿದೆ. ಬೌಲಿಂಗ್​ನದಲ್ಲಿ ದಾಖಲೆಯ 6 ವಿಕೆಟ್​ ಹಾಗೂ ಬ್ಯಾಟಿಂಗ್​ನಲ್ಲಿ ವೇಗದ 40 ರನ್ ಬಾರಿಸಿದ ಎಲಿಸ್​ ಪೆರಿ ಗೆಲುವಿನ ರೂವಾರಿ ಎನಿಸಿಕೊಂಡರು.

ಮುಂಬೈ ಇಂಡಿಯನ್ಸ್‌ ವಿರುದ್ಧದ ಗೆದ್ದೇ ತೀರಬೇಕು ಎಂಬ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿದ ರಾಯಲ್​ ಚಾಲೆಂಜರ್ಸ್​​ ಬೆಂಗಳೂರು ಅರ್ಹವಾಗಿ ಪ್ಲೇ ಆಫ್​ ಹಂತಕ್ಕೆ ಪ್ರವೇಶ ಪಡೆದುಕೊಂಡಿದೆ. ಮಂಧಾನ ಬಳಗದ ಪ್ಲೇಆಫ್​ ಪ್ರವೇಶದೊಂದಿಗೆ ಯುಪಿ ವಾರಿಯರ್ಸ್‌ ಹಾಗೂ ಗುಜರಾತ್‌ ಜೈಂಟ್ಸ್‌ ತಂಡಗಳು ಟೂರ್ನಿಯಿಂದ ನಿರ್ಗಮಿಸಿವೆ.

ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ತಂಡ 19 ಓವರ್​ಗಳಲ್ಲಿ 113 ರನ್​ಗಳಿಗೆ ಆಲ್​ಔಟ್​ ಆಯಿತು. ಪ್ರತಿಯಾಗಿ ಆಡಿದ ಆರ್​ಸಿಬಿ 15 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 1145 ರನ್ ಬಾರಿಸಿ ಗೆಲುವು ಸಾಧಿಸಿತು. ಸಾಧಾರಣ ಮೊತ್ತವನ್ನು ಎದುರಿಸಿದ ಆರ್​ಸಿಬಿ ಉತ್ತಮ ಆರಂಭ ಪಡೆಯಲಿಲ್ಲ. 22 ರನ್​ಗೆ ಮೊದಲ ವಿಕೆಟ್​ ಕಳೆಕೊಂಡಿತು. ಸೋಫಿ ಮೊಲಿನಕ್ಸ್​ 9 ರನ್​ ಬಾರಿಸಿ ಸ್ಟಂಪ್ ಔಟ್​ ಆದರು. ಸ್ವಲ್ಪ ಹೊತ್ತಿನಲ್ಲೇ ನಾಯಕ ಸ್ಮೃತಿ 11 ರನ್​ಗೆ ಔಟಾದರು. 25 ರನ್​ಗೆ 2 ವಿಕೆಟ್ ನಷ್ಟ ಮಾಡಿಕೊಂಡ ಆರ್​ಸಿಬಿಗೆ ಆತಂಕ ಶುರುವಾಯಿತು. ಅದ ಜತೆಗೆ ಸೋಫಿ ಡಿವೈನ್​ ಕೂಡ 4 ರನ್ ಬಾರಿಸಿ ನಿರ್ಗಮಿಸಿದರು. ಈ ವೇಳೆ ತಂಡದ ಮೊತ್ತ 39.

ರಿಚಾ, ಎಲಿಸ್ ಜತೆಯಾಟ

ಬೌಲಿಂಗ್​ನಲ್ಲಿ ಅಬ್ಬರಿಸಿದ್ದ ಎಲಿಸ್​ ಪೆರಿ ಬ್ಯಾಟಿಂಗ್​ನಲ್ಲೂ ಆರ್​ಸಿಬಿಗೆ ನೆರವಾದರು. 38 ಎಸೆತಕ್ಕೆ 5 ಫೊರ್​ ಹಾಗೂ 1 ಸಿಕ್ಸರ್ ಸಮೇತ 40 ರನ್ ಬಾರಿಸಿದರು. ರಿಚಾ ಕೂಡ ಮುಂಬೈ ಬೌಲರ್​ಗಳನ್ನು ಚೆಂಡಾಡಿದರು. ಹಿಂದಿನ ಪಂದ್ಯದಂತೆಯೇ 4 ಫೋರ್ ಹಾಗೂ 2 ಸಿಕ್ಸರ್​ ಸಹಿತ 28 ಎಸೆತಗಳಲ್ಲಿ 36 ರನ್ ಬಾರಿಸಿತು. ಈ ಜೋಡಿ ನಾಲ್ಕನೇ ವಿಕೆಟ್​ಗೆ 71 ರನ್ ಜತೆಯಾಟವಾಡಿ ಆರ್​ಸಿಬಿ ಗೆಲುವು ಸುಲಭವಾಗಿಸಿತು.

ಅದಕ್ಕಿಂತ ಮೊದಲು ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಮುಂಬಯಿ ಉತ್ತಮ ಆರಂಭ ಪಡೆಯಿತು ಹೀಲಿ ಮ್ಯಾಥ್ಯೂಸ್‌ ಮತ್ತು ಎಸ್‌ ಸಜನಾ 43 ರನ್‌ಗಳ ಜೊತೆಯಾಟವಾಡಿದರು. ಮ್ಯಾಥ್ಯೂಸ್‌ 26 ರನ್‌ ಗಳಿಸಿದರೆ, ಸಜನಾ 30 ರನ್‌ ಪೇರಿಸಿದರು. ಸಜನಾ ವಿಕೆಟ್‌ ಕಬಳಿಸುವುದರೊಂದಿಗೆ ಎಲ್ಲಿಸ್‌ ಪೆರ್ರಿ ಮಾರಕ ದಾಳಿ ಶುರುವಾಯ್ತು. ಮೇಲಿಂದ ಮೇಲೆ 6 ವಿಕೆಟ್‌ ಕಬಳಿಸುವ ಮೂಲಕ ಡಬ್ಲ್ಯೂಪಿಎಲ್‌ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದರು.

ಇದನ್ನೂ ಓದಿ : IPL 2024 : ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್ 5 ಬ್ಯಾಟರ್​​ಗಳು

ಪೆರ್ರಿ ಬೊಂಬಾಟ್‌ ದಾಖಲೆ

ಎಸ್‌ ಸಜನಾ ಅವರನ್ನು ಕ್ಲೀನ್‌ ಬೌಲ್ಡ್​​ ಮಾಡಿದ ಎಲಿಸ್​​ , ಬೆನ್ನಲ್ಲೇ ಮುಂಬಯಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರನ್ನು ಗೋಲ್ಡನ್‌ ಡಕ್‌ಗೆ ಪೆವಿಲಿಯನ್​ಗೆ ವಾಪಸ್ ಕಳುಹಿಸಿದರು . ಅಮೆಲಿಯಾ ಕೆರ್ (2), ಅಮನ್‌ಜೋತ್ ಕೌರ್ (4), ಪೂಜಾ ವಸ್ತ್ರಾಕರ್ (6) ಮತ್ತು ನ್ಯಾಟ್ ಸಿವರ್ ಬ್ರಂಟ್ (10) ಕೂಡಾ ಮೇಲಿಂದ ಮೇಲೆ ಔಟಾಗಿ ಪೆವಿಲಿಯನ್‌ ಸೇರಿಕೊಂಡರು. ಕೊನೆಯಲ್ಲಿ ಪ್ರಿಯಾಂಕ ಬಾಲಾ ಅಜೇಯ 19 ರನ್‌ ಗಳಿಸಿ ತಂಡದ ಮೊತ್ತ 100 ಗಡಿ ದಾಟುವಂತೆ ನೋಡಿಕೊಂಡರು.

Exit mobile version