Site icon Vistara News

IPL 2023 : ಮೈಕೆಲ್​ ಬ್ರೇಸ್​ವೆಲ್​ ಜತೆ ಮಾತುಕತೆ ನಡೆಸಿದ ಆರ್​ಸಿಬಿ

Michael Bracewell of New Zealand joined the RCB team

#image_title

ಬೆಂಗಳೂರು: ಐಪಿಎಲ್​ 15 ಆವೃತ್ತಿ ಮುಕ್ತಾಯಗೊಂಡರೂ ಒಂದೇ ಒಂದು ಟ್ರೋಫಿ ಗೆಲ್ಲಲು ಸಾಧ್ಯವಾಗದ ಆರ್​ಸಿಬಿಗೆ ಈ ಬಾರಿಯೂ ಅದೃಷ್ಟ ಕೈಕೊಡುವ ಸಾಧ್ಯತೆಗಳಿವೆ. ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವ ಹೊರತಾಗಿಯೂ ಆಟಗಾರರ ಗಾಯದ ಆತಂಕ ತಂಡಕ್ಕೆ ಎದುರಾಗಿದೆ. ಈ ಸಾಲಿಗೆ ಹೊಸ ಸೇರ್ಪಡೆ ವಿಲ್​ ಜ್ಯಾಕ್​. ಮಾಂಸಖಂಡಗಳ ನೋವಿಗೆ ಒಳಗಾಗಿರುವ ಬ್ರೇಸ್​ ವೆಲ್​ ಮುಂದಿನ ಕೆಲವು ತಿಂಗಳ ಕಾಲ ಆಡುವುದು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ನ್ಯೂಜಿಲ್ಯಾಂಡ್​ನ ಆಲ್​ರೌಂಡರ್​ ಮೈಕೆಲ್ ಬ್ರೆಸ್​ವೆಲ್​ ಮಾತುಕತೆ ನಡೆಸುತ್ತಿದ್ದಾರೆ.

ಇಂಗ್ಲೆಂಡ್​ ತಂಡ ಬಾಂಗ್ಲಾದೇಶ ಪ್ರವಾಸಕ್ಕೆ ಹೋಗಿದ್ದ ವೇಳೆ ವಿಲ್​ ಜ್ಯಾಕ್​ ಗಾಯದ ಸಮಸ್ಯೆಗೆ ಒಳಗಾಗಿದ್ದಾರೆ. ಅವರು ಐಪಿಎಲ್​ ಟೂರ್ನಿಯಲ್ಲಿ ಆಡುವುದು ಸಾಧ್ಯವೇ ಇಲ್ಲ ಎಂದು ಹೇಳಲಾಗುತ್ತಿದೆ. ವಿಲ್ ಜ್ಯಾಕ್​ ಅವರನ್ನು 3.2 ಕೋಟಿ ರೂಪಾಯಿಗೆ ಮಿನಿ ಹರಾಜಿನಲ್ಲಿ ಆರ್​ಸಿಬಿ ತಂಡ ತನ್ನದಾಗಿಸಿಕೊಂಡಿತು. ಅವರನ್ನು ಗಾಯದ ಸಮಸ್ಯೆಗೆ ಒಳಗಾಗಿರುವ ಆಸ್ಟ್ರೇಲಿಯಾ ಆಟಗಾರ ಗ್ಲೆನ್​ ಮ್ಯಾಕ್ಸ್​ ವೆಲ್​ ಅವರಿಗೆ ಪರ್ಯಾಯ ಎಂದೂ ಹೇಳಲಾಗಿತ್ತು. ಆದರೆ ಅವರ ಅಲಭ್ಯತೆಯಿಂದಾಗಿ ಬ್ರೇಸ್​ವೆಲ್ ಜತೆ ಮಾತುಕತೆ ಆರಂಭಿಸಿದ್ದಾರೆ.

ಇದನ್ನೂ ಓದಿ : WPL 2023 : ಆರ್​ಸಿಬಿ ಮಹಿಳಾ ತಂಡದ ಕ್ಯಾಂಪ್​ಗೆ ಭೇಟಿ ನೀಡಿ ಸಲಹೆ ಕೊಟ್ಟ ವಿರಾಟ್​ ಕೊಹ್ಲಿ

ಬ್ರೇಸ್​ವೆಲ್ ಅವರನ್ನು ಕಳೆದ ಐಪಿಎಲ್ ಹರಾಜಿನಲ್ಲಿ ಯಾವುದೇ ತಂಡ ಖರೀದಿ ಮಾಡಿರಲಿಲ್ಲ. ಅವರ ಮೂಲಬೆಲೆ ಒಂದು ಕೋಟಿ ರೂಪಾಯಿಯಾಗಿದ್ದ ಕಾರಣ ಅನ್​ಸೋಲ್ಡ್​ ಅಗಿದ್ದರು. ಇದೀಗ ಅವರನ್ನು ತಂಡಕ್ಕೆ ತರುವ ಪ್ರಯತ್ನ ಮಾಡುತ್ತಿದೆ ಆರ್​ಸಿಬಿ.

Exit mobile version