ನವ ದೆಹಲಿ: ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ (WPL 2024) ಮತ್ತೊಂದು ರೋಚಕ ಫಲಿತಾಂಶ ಮೂಡಿ ಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಒಂದು ರನ್ ರೋಚಕ ಗೆಲುವು ಸಾಧಿಸಿದರೆ, ಆರ್ಸಿಬಿ ಕೊನೇ ತನಕ ಹೋರಾಟಿ ವಿರೋಚಿತ ಸೋಲು ಅನುಭವಿಸಿದೆ. ಇದರೊಂದಿಗೆ ಬೆಂಗಳೂರು ತಂಡದ ಪ್ಲೇಆಫ್ ಹಾದಿ ಬಹುತೇಕ ಅಂತ್ಯವಾಗಿದೆ.
𝐃𝐞𝐥𝐡𝐢 𝐂𝐚𝐩𝐢𝐭𝐚𝐥𝐬 are the second team to qualify for the playoffs of WPL 2024. pic.twitter.com/p6fhSHybTv
— CricTracker (@Cricketracker) March 10, 2024
ಡೆಲ್ಲಿ ವಿರುದ್ಧ ಸತತ 4ನೇ ಸೋಲು ಕಂಡಿರುವ ಆರ್ಸಿಬಿ ನಿರಾಸೆ ಮೂಡಿಸಿದೆ. ಆದಾಗ್ಯೂ ಉಳಿದ ತಂಡಗಳ ಫಲಿತಾಂಶಗಳ ಪ್ರಕಾರ ಪ್ಲೇಆಫ್ಗೆ ಪ್ರವೇಶ ಪಡೆಯಬೇಕಾದರೆ ದೊಡ್ಡ ವಿಜಯ ಪಡೆಯಬೇಕಾಗಿದೆ. ಅದು ಮುಂಬೈ ಇಂಡಿಯನ್ಸ್ ವಿರುದ್ಧ. ಆರ್ಸಿಬಿಗೆ ಇನ್ನು ಒಂದು ಪಂದ್ಯ ಮಾತ್ರ ಬಾಕಿ ಇದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 181 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಆರ್ಸಿಬಿ ತನ್ನ ಪಾಲಿನ ಓವರ್ಗಳು ಮುಕ್ತಾಯಗೊಂಡಾಗ 7 ವಿಕೆಟ್ಗೆ 180 ರನ್ ಬಾರಿಸಿ ಸೋಲೊಪ್ಪಿಕೊಂಡಿತು.
Ellyse Perry and Sophie Molineux gaining momentum in the run-chase🤝#RCB 42/1 after 6 overs ‼️
— Women's Premier League (WPL) (@wplt20) March 10, 2024
Live 💻📱https://t.co/b7pHKEKY8l#TATAWPL | #DCvRCB pic.twitter.com/pwYUNgXvf7
ಡೆಲ್ಲಿ ಪರ ಶಫಾಲಿ ವರ್ಮಾ (23) ಎಂದಿನಂತೆ ಬಿರುಸಿನ ಬ್ಯಾಟಿಂಗ್ ನಡೆಸಿ ಕೆಲ ಹೊತ್ತು ಮನರಂಜನೆ ನೀಡಿದರು. ಓವರ್ವೊಂದರಲ್ಲಿ 4 ಬೌಂಡರಿ ಬಾರಿಸಿದ ಮೆಗ್ ಲ್ಯಾನಿಂಗ್ 29 ರನ್ ಗಳಿಸಿ ಔಟಾದರು. ಆರಂಭಿಕರು ಹಾಕಿಕೊಟ್ಟ ಉತ್ತಮ ರನ್ಗೆ ಮತ್ತಷ್ಟು ಕೊಡುಗೆ ನೀಡಿದ ಅಲಿಸ್ ಕ್ಯಾಪ್ಸಿ ಮತ್ತು ಜೆಮಿಮಾ ರೋಡ್ರಿಗಸ್ ಭರ್ಜರಿ ಬ್ಯಾಟಿಂಗ್ ನಡೆಸಿ 103 ರನ್ಗಳ ಪಾಲುದಾರಿಕೆ ನೀಡಿದರು. ಸೂಪರ್ ಫಾರ್ಮ್ನಲ್ಲಿರುವ ರೋಡ್ರಿಗಸ್ ಮತ್ತೊಂದು ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. 36 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 58 ರನ್ ಗಳಿಸಿದರು. ಆದರೆ ಕ್ಯಾಪ್ಸಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಅವರು 8 ಬೌಂಡರಿ ಸಹಿತ 48 ರನ್ ಗಳಿಸಿ ಔಟಾದರು.
ಇದನ್ನೂ ಓದಿ : French Open : ಸಾತ್ವಿಕ್- ಚಿರಾಗ್ಗೆ ಎರಡನೇ ಫ್ರೆಂಚ್ ಓಪನ್ ಪ್ರಶಸ್ತಿ
ಈ ಇಬ್ಬರನ್ನೂ ಶ್ರೇಯಾಂಕಾ ಪಾಟೀಲ್ ಔಟ್ ಮಾಡುವಲ್ಲಿ ಯಶಸ್ವಿಯಾದರು. ಮರಿಜಾನ್ನೆ ಕಪ್ ಅಜೇಯ 12 ಗಳಿಸಿದರು.
ಹೋರಾಡಿ ಸೋತ ಆರ್ಸಿಬಿ
ಈ ಸ್ಕೋರ್ ಬೆನ್ನಟ್ಟಿದ ಆರ್ಸಿಬಿಗೆ ಸ್ಮೃತಿ ಮಂಧಾನ (5) ಮತ್ತೆ ನಿರಾಸೆ ಮೂಡಿಸಿದರು. ಬಳಿಕ ಸೋಫಿ ಮೊಲಿನೆಕ್ಸ್ ಮತ್ತು ಎಲ್ಲಿಸ್ ಪೆರ್ರಿ ತಂಡವನ್ನು ಆಧರಿಸಿದರು. ಎರಡನೇ ವಿಕೆಟ್ಗೆ 80 ರನ್ಗಳ ಜೊತೆಯಾಟ ಆಡಿದರು. ಆದರೆ ಪೆರ್ರಿ 49 ರನ್ ಗಳಿಸಿದ್ದ ಅವಧಿಯಲ್ಲಿ ರನೌಟ್ ಆದರಯ, ಇದರ ಬೆನ್ನಲ್ಲೇ ಮೊಲಿನಿಕ್ಸ್ ಸಹ 33 ರನ್ ಗಳಿಸಿ ಔಟಾದರು.
Breakthrough ‼
— Women's Premier League (WPL) (@wplt20) March 10, 2024
Courtesy Shreyanka Patil, the 97 run stand is broken
Live 💻📱https://t.co/b7pHKEKqiN #TATAWPL | #DCvRCB pic.twitter.com/dx05nUkcba
ಆ ಬಳಿಕ ಕಣಕ್ಕಿಳಿದ ಸೋಫಿ ಡಿವೈನ್ ಮತ್ತು ರಿಚಾ ಘೋಷ್ ತಂಡದ ಗೆಲುವಿಗೆ ಹೋರಾಡಿದರು. ಡಿವೈನ್ 23 ರನ್ ಗಳಿಸಿ ಔಟಾದರು. ಈ ವೇಳೆ ಜಾರ್ಜಿಯಾ ವೇರ್ಹ್ಯಾಮ್ 12 ರನ್ ಗಳಿಸಿದರು. ಕೊನೆಯ ಓವರ್ನಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ಭರ್ಜರಿ ಎರಡು ಸಿಕ್ಸರ್ ಸಿಡಿಸಿದ ರಿಚಾ ಕೊನೆಯ ಎಸೆತದಲ್ಲಿ 2 ರನ್ ಕಲೆ ಹಾಕಲು ವಿಫಲರಾದರು.
29 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ 51 ರನ್ ಗಳಿಸಿದ ರಿಚಾ ಘೋಷ್, ಗೆಲುವಿಗೆ ಕೊನೆಯ ಎಸೆತದಲ್ಲಿ 2 ರನ್ ಗಳಿಸಬೇಕಿತ್ತು. ಆದರೆ ಬ್ಯಾಕ್ವರ್ಡ್ ಕಡೆಗೆ ಚೆಂಡನ್ನು ಬಾರಿಸಿ ಒಂದು ರನ್ ಕದಿಯಲು ಯತ್ನಿಸಿದರಾದರೂ ಕೇವಲ ಇಂಚುಗಳಲ್ಲಿ ರನೌಟ್ ಆದರು. ಪಂದ್ಯಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗದ್ದಕ್ಕೆ ರಿಚಾ ಘೋಷ್ ಕಣ್ಣೀರಿಟ್ಟರು. ಆರ್ಸಿಬಿ ತನ್ನ ಮುಂದಿನ ಪಂದ್ಯದಲ್ಲಿ ಮಾರ್ಚ್ 12ರಂದು ಮುಂಬೈ ತಂಡವನ್ನು ಎದುರಿಸಲಿದೆ.