ಬೆಂಗಳೂರು: ಲಕ್ನೋ ಸೂಪರ್ಜೈಂಟ್ಸ್ ವಿರುದ್ಧದ IPL-2022 ಪ್ಲೇಆಫ್ ಎಲಿಮಿನೇಟರ್ ಪಂದ್ಯದಲ್ಲಿ ಸೂಪರ್ ಶತಕದೊಂದಿಗೆ ರಜತ್ ಪಾಟಿದಾರ್ ಮಿಂಚಿದ್ದಾರೆ. 49 ಎಸೆತಗಳಲ್ಲಿ 11 ಫೋರ್, 6 ಸಿಕ್ಸರ್ಗಳಿಂದ ಸೆಂಚುರಿ ಗುರಿ ಮುಟ್ಟಿದ ಅವರು, ಒಟ್ಟು 54 ಎಸೆತಗಳಲ್ಲಿ 112 ರನ್ ಬಾರಿಸಿ ನಾಟೌಟ್ ಆಗಿ ನಿಂತು ಆರ್ಸಿಬಿ ಪರ ಹಲವು ದಾಖಲೆ ಬರೆದಿದ್ದಾರೆ.
- ಆರ್ಸಿಬಿ ಪರ ನಾಕೌಟ್ ಪಂದ್ಯದಲ್ಲಿ ಶತಕ ದಾಖಲಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ರಜತ್ ಮಾಡಿದ್ದಾರೆ.
- ಪ್ಲೇಆಫ್ ಮ್ಯಾಚ್ನಲ್ಲಿ ಆರ್ಸಿಬಿ ಪರ ಅತ್ಯಧಿಕ ರನ್ ಗಳಿಸಿದ ಆಟಗಾರ ರಜತ್ (54 ಎಸೆತಗಳಲ್ಲಿ 112). ಈ ಹಿಂದಿನ ಕ್ರಿಸ್ಗೇಲ್ (89 ರನ್) ದಾಖಲೆಯನ್ನು ಮುರಿದಿದ್ದಾರೆ.
- ಅನ್ಕ್ಯಾಪ್ಡ್ ಪ್ಲೇಯರ್(ರಾಷ್ಟ್ರೀಯ ತಂಡದಲ್ಲಿ ಈವರೆಗೆ ಆಡದ ಆಟಗಾರ) ಆಗಿ ಐಪಿಎಲ್ ಶತಕ ಸಾಧಿಸಿದ ನಾಲ್ಕನೇ ಆಟಗಾರನಾಗಿದ್ದಾರೆ. ಇದಕ್ಕೂ ಮೊದಲು ಪಾಲ್ ವಾಲ್ತಾಟಿ (120 ನಾಟೌಟ್, ಪಂಜಾಬ್ ಕಿಂಗ್ಸ್, 2011ರಲ್ಲಿ ಸಿಎಸ್ಕೆ ವಿರುದ್ಧ), ಮನೀಷ್ ಪಾಂಡೆ (114 ನಾಟೌಟ್, ಆರ್ಸಿಬಿ, 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ), ದೇವದತ್ ಪಡಿಕ್ಕಲ್(101 ನಾಟೌಟ್, ಆರ್ಸಿಬಿ, 2021ರಲ್ಲಿ ರಾಜಸ್ತಾನ್ ವಿರುದ್ಧ) ಸಾಧನೆ ಮಾಡಿದ್ದಾರೆ.
- ಅನ್ಕ್ಯಾಪ್ಡ್ ಪ್ಲೇಯರ್ ಆಗಿ ರಜತ್ ಪ್ಲೇಆಫ್ ಪಂದ್ಯದಲ್ಲಿ ಶತಕ ಸಾಧಿಸಿದ ಮೊದಲ ಆಟಗಾರನಾಗಿದ್ದು, ಒಟ್ಟಾರೆಯಾಗಿ ಪ್ಲೇಆಫ್ ಪಂದ್ಯದಲ್ಲಿ ಸೆಂಚುರಿ ಗುರಿ ಮುಟ್ಟಿದ 5ನೇ ಪ್ಲೇಯರ್ ಆಗಿದ್ದಾನೆ. ಈ ಹಿಂದೆ ಸೆಹ್ವಾಗ್, ಶೇನ್ ವಾಟ್ಸನ್, ವೃದ್ಧಿಮಾನ್ ಸಹಾ, ಮುರುಳಿ ವಿಜಯ್ ಇದನ್ನು ಸಾಧಿಸಿದ್ದಾರೆ.
- ಅನ್ಕ್ಯಾಪ್ಡ್ ಪ್ಲೇಯರ್ ಆಗಿ ಪ್ಲೇಆಫ್ನಲ್ಲಿ ಅತ್ಯಧಿಕ ರನ್ ಗಳಿಸಿದ 3ನೇ ಆಟಗಾರ. ಇದಕ್ಕೂ ಮೊದಲು ಮನಿಷ್ ಪಾಂಡೆ 94 ರನ್ (ಕೆಕೆಆರ್, 2014ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ), ಮನ್ವಿಂದರ್ ಬಿಸ್ಲಾ 89 ರನ್(ಕೆಕೆಆರ್, 2012ರಲ್ಲಿ ಸಿಎಸ್ಕೆ ವಿರುದ್ಧ) ಈ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ | IPL2022 | ಆರ್ಸಿಬಿ ಫೈನಲ್ ತಲುಪಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ!