Site icon Vistara News

RCB: ಆರ್​ಸಿಬಿ ಕಪ್​ ಗೆಲ್ಲುವುದು ನಿಶ್ಚಿತ; ಆದರೆ ಇಷ್ಟು ವರ್ಷ ಕಾಯಬೇಕು ಎಂದ ಎಐ

RCB

ಬೆಂಗಳೂರು: ಕನ್ನಡಿಗರ ಅತ್ಯಂತ ನೆಚ್ಚಿನ ತಂಡ ಆರ್​ಸಿಬಿ(RCB) ಐಪಿಎಲ್​ನಲ್ಲಿ(IPL 2024) ಅತ್ಯಂತ ಜನಪ್ರಿಯ ಫ್ರಾಂಚೈಸಿಗಳಲ್ಲಿ ಒಂದಾಗಿದೆ, ಅದರ ಭಾವೋದ್ರಿಕ್ತ ಅಭಿಮಾನಿ ಬಳಗ ತಂಡದ ಗುರುತಿಗೆ ಹೆಸರುವಾಸಿಯಾಗಿದೆ. ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಇದುವೆರೆಗೂ ಕಪ್​ ಗೆಲ್ಲದೇ ಇರುವುದು ದುರಾದೃಷ್ಟಕರ ಸಂಗತಿ. ಪ್ರತಿ ಬಾರಿ ಅಭಿಮಾನಿಗಳು ಈ ಸಲ ಕಪ್​ ನಮ್ದೇ ಎಂದು ಎಂದು ಹೇಳುತ್ತಲೇ ಬಂದು ಕೊನೆಗೆ ನಿರಾಸೆ ಅನುಭವಿಸುತ್ತಿದ್ದಾರೆ. ಈ ಬಾರಿಯೂ ತಂಡ ಅತ್ಯಂತ ಹೀನಾಯವಾಗಿ ಸೋಲುತ್ತಿದ್ದೆ. ಬೇಸರದಲ್ಲಿರುವ ಅಭಿಮಾನಿಗಳಿಗೆ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (Artificial Intelligence – ಎಐ) ಸಿಹಿ ಸುದ್ದಿಯೊಂದು ನೀಡಿದೆ. ತಂಡ ಯಾವಾಗ ಕಪ್​ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ (Artificial Intelligence) ಜಗತ್ತೇ ತೆರೆದುಕೊಳ್ಳುತ್ತಿದೆ. ಅದರಲ್ಲೂ, ಕೃತಕ ಬುದ್ಧಿಮತ್ತೆ ಆಧಾರಿತ ಚಾಟ್‌ಜಿಪಿಟಿಯಂತಹ ಚಾಟ್‌ಬಾಟ್‌ಗಳು (ChatBot) ಪ್ರಬಂಧ ಬರೆಯುವುದರಿಂದ ಹಿಡಿದು, ಕೋಡ್‌ ರಚನೆವರೆಗೆ ಛಾಪು ಮೂಡಿಸುತ್ತಿವೆ. ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಪ್ರಾಮುಖ್ಯತೆಯನ್ನು ಇದು ಸಾರುತ್ತಿದೆ. ಇದೀಗ ಆರ್​ಸಿಬಿ ಅಭಿಮಾನಿಗಳ ಕಪ್​ ಯಾವಾಗ ಎನ್ನುವ ಮಿಲಿಯನ್​ ಡಾಲರ್​ ಪ್ರಶ್ನೆಗೆ ಎಐ ಉತ್ತರಿಸಿದ್ದು, 2029ರಲ್ಲಿ ಆರ್​ಸಿಬಿ ಚೊಚ್ಚಲ ಕಪ್​ ಗೆಲ್ಲಲಿದೆ ಎಂದು ಹೇಳಿದೆ. ಈ ಭವಿಷ್ಯದ ಪ್ರಕಾರ ಆರ್​ಸಿಬಿ ಅಭಿಮಾನಿಗಳು ಕಪ್​ಗಾಗಿ ಇನ್ನೂ ಐದು ವರ್ಷಗಳ ಕಾಲ ಕಾಯಬೇಕಿದೆ.

ಈ ಬಾರಿ ಗುಜರಾತ್​ ಚಾಂಪಿಯನ್​


ಎಐ ಬಿಡುಗಡೆ ಮಾಡಿದ ಐಪಿಎಲ್​ ವಿಜೇತರ ಪಟ್ಟಿಯ ಪ್ರಕಾರ ಈ ಬಾರಿ ಗುಜರಾತ್​ ಟೈಟಾನ್ಸ್​ ತಂಡ ಚಾಂಪಿಯನ್​ ಆಗಲಿದೆ. 2043ರ ವರೆಗಿನ ವಿಜೇತರ ಪಟ್ಟಿಯನ್ನು ಎಐ ಪ್ರಕಟಿಸಿದೆ. ಆರ್​ಸಿಬಿ 2029ರ ಬಳಿಕ 2038ರಲ್ಲಿ ದ್ವಿತೀಯ ಕಪ್​ ಗೆಲ್ಲಲಿದೆ. ಡೆಲ್ಲಿ ತಂಡ ತನ್ನ ಚೊಚ್ಚಲ ಕಪ್​ 2030ರಲ್ಲಿ, ಪಂಜಾಬ್​ ಕಿಂಗ್ಸ್​ 2028ರಲ್ಲಿ, ಲಕ್ನೋ ಸೂಪರ್​ ಜೈಂಟ್ಸ್​ 2033ರಲ್ಲಿ ಗೆಲ್ಲಲಿದೆ.

ಇದನ್ನೂ ಓದಿ IPL 2024 Points Table: ಹೈದರಾಬಾದ್​ಗೆ​ ರೋಚಕ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಆರ್​ಸಿಬಿ ಕಳಪೆ ಪ್ರದರ್ಶನ


ಈ ಬಾರಿಯ ಟೂರ್ನಿ ಆರಂಭಕ್ಕೂ ಮುನ್ನ ಹೊಸ ಅಧ್ಯಾಯ ಎಂದು ಪಂದ್ಯವನ್ನಾಡಿದ ಆರ್​ಸಿಬಿ 5 ಪಂದ್ಯಗಳಲ್ಲಿ 4 ಸೋಲು ಕಂಡು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆದ್ದರೆ ಮಾತ್ರ ಪ್ಲೇ ಆಫ್​ಗೇರುವ ಸಾಧ್ಯತೆ ಇದೆ. ಇನ್ನೆಡರು ಸೋಲು ಕಂಡರೆ ಟೂರ್ನಿಯಿಂದ ಮೊದಲ ತಂಡವಾಗಿ ಹೊರಬೀಳುವುದು ಖಚಿತಗೊಳ್ಳಲಿದೆ. ವಿರಾಟ್​ ಕೊಹ್ಲಿಯನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಪ್ರತಿ ಪಂದ್ಯದಲ್ಲೂ ಕೊಹ್ಲಿಯದ್ದೂ ಏಕಾಂಗಿ ಹೋರಾಟ. ಈಗಾಗಲೇ ಅಭಿಮಾನಿಗಳು ಕೂಡ ಫ್ರಾಂಚೈಸಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ನಾಳೆ ಮುಂಬೈ ವಿರುದ್ಧ ಕಣಕ್ಕೆ


ಸತತ ಸೋಲಿನಿಂದ ಕಂಗೆಟ್ಟಿರುವ ಆರ್​ಸಿಬಿ ನಾಳೆ(ಗುರುವಾರ) ನಡೆಯುವ ಐಪಿಎಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ಆಡಲಿದೆ. ಈ ಪಂದ್ಯ ಮುಂಬಯಿಯ ವಾಂಖೆಡೆ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ. ಆರ್​ಸಿಬಿ ಈ ಪಂದ್ಯಕ್ಕೆ ತಂಡದ ಆಡುವ ಬಳಗದಲ್ಲಿ ಹಲವು ಬದಲಾವಣೆ ಮಾಡುವ ನಿರೀಕ್ಷೆ ಇದೆ.

Exit mobile version