Site icon Vistara News

IPL 2024 : ಹರಾಜಿನಲ್ಲಿ ಬೇಡಿಕೆ ಪಡೆಯಲಿರುವ ಆರ್​ಸಿಬಿಯ ಮೂವರು ಮಾಜಿ ಆಟಗಾರರು ಇವರು

RCB Team

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ದೊಡ್ಡ ಅಭಿಮಾನಿ ಬಳಗವನ್ನು ಹೊಂದಿವೆ. ನಗದು ಸಮೃದ್ಧ ಟಿ 20 ಲೀಗ್​ನಲ್ಲಿ ಬೆಂಗಳೂರು ತಂಡ 15 ವರ್ಷಗಳಿಂದ ಗುಣಮಟ್ಟದ ಕ್ರಿಕೆಟ್ ಆಡಿದೆ. ಆದರೆ ಮುಂಬೈ ಚಾಲೆಂಜರ್ಸ್ ಬಳಗ ಇನ್ನೂ ಬಾರಿಗೆ ಟ್ರೋಫಿಯನ್ನು ಎತ್ತಿಲ್ಲ.

2023 ರಲ್ಲಿ ಆರ್​ಸಿಬಿಯಯ ಅಭಿಯಾನವು ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೌಂಡ್ ರಾಬಿನ್ ಹಂತದಲ್ಲಿ ಗುಜರಾತ್​ ಜೈಂಟ್ಸ್ ವಿರುದ್ಧದ ಆರು ವಿಕೆಟ್​ಗಳ ಸೋಲಿನೊಂದಿಗೆ ಕೊನೆಗೊಂಡಿತ್ತು. ಆದಾಗ್ಯೂ 2024ರ ಐಪಿಎಲ್ ಹರಾಜಿಗೆ ಮುಂಚಿತವಾಗಿ ಈ ತಂಡ ಮೂವರು ಆಟಗಾರರನ್ನು ಬಿಡುಗಡೆ ಮಾಡಿತ್ತು. ಈ ಆಟಗಾರರು ಡಿಸೆಂಬರ್ 19ರಂದು ಭಾರಿ ಬೆಲೆ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ. ಈ ವರ್ಷ, ಚಾಲೆಂಜರ್ಸ್ ತಮ್ಮ ತಂಡದಿಂದ 11 ಆಟಗಾರರನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಕೆಲವು ಆರ್ಸಿಬಿ ದಿಗ್ಗಜರ ಖ್ಯಾತಿ ಮತ್ತು ಪ್ರದರ್ಶನವನ್ನು ಗಮನಿಸಿದರೆ ಅವರಿಗೆ ಮುಂಬೈ ಇಂಡಿಯನ್ಸ್​ ತಂಡವೇ ಗಾಳ ಹಾಕಬಹುದು ಎನ್ನಲಾಗಿದೆ.

ಮೈಕೆಲ್ ಬ್ರೇಸ್ವೆಲ್

ಮೈಕೆಲ್ ಬ್ರೇಸ್ವೆಲ್ ತಮ್ಮ ಚೊಚ್ಚಲ ಐಪಿಎಲ್ ಋತುವಿನಲ್ಲಿ ಆರ್​ಸಿಬಿಗೆ ತಮ್ಮ ಸೇವೆಗಳನ್ನು ನೀಡಿದ್ದಾರೆ . ಆದರೆ ಆಲ್​ರೌಂಡ ಡರ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಆತ್ಮವಿಶ್ವಾಸ ತೋರಿಸಿರಲಿಲ್ಲ. ಇದು ಅವರನ್ನು 2024 ರ ಬೆಂಗಳೂರು ತಂಡದಿಂದ ಹೊರಗಿಡಲು ಕಾರಣವಾಯಿತು. 2023ರ ಆವೃತ್ತಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಕೇವಲ 58 ರನ್ ಹಾಗೂ 6 ವಿಕೆಟ್ ಕಬಳಿಸಿದ್ದರು. ಆದರೂ , ಮುಂಬರುವ ಹರಾಜಿನಲ್ಲಿ, ಕಿವೀಸ್ ಆಲ್​ರೌಂಡರ್​ಗೆ ಬೇಡಿಕೆ ಇರಬಹುದು. ಯಾಕೆಂದರೆ ಅವರಿಗೆ ಚೆಂಡಿನ ಜೊತೆಗೆ, ಅವರು ತಮ್ಮ ಬ್ಯಾಟ್​ ಮುಲಕ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇದೆ. ಬ್ರೇಸ್ವೆಲ್ ಅವರ ಬೌಲಿಂಗ್ ದಾಖಲೆಯು ಟಿ 20 ಅಂತರರಾಷ್ಟ್ರೀಯ (ಟಿ 20 ಐ) ನಲ್ಲಿ ಪ್ರಭಾವಶಾಲಿಯಾಗಿದೆ. 16 ಪಂದ್ಯಗಳಲ್ಲಿ 5.36ರ ಸರಾಸರಿಯಲ್ಲಿ 21 ವಿಕೆಟ್ ಕಬಳಿಸಿದ್ದಾರೆ.

ವನಿಂದು ಹಸರಂಗ

ಮುಂಬರುವ ಐಪಿಎಲ್ ಹರಾಜಿಗೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಸಲುವಾಗಿ ವನಿಂದು ಹಸರಂಗ ಅವರನ್ನು ಆರ್​​ಸಿಬಿ ಉಳಿಸಿಕೊಳ್ಳಲಿಲ್ಲ. 2022 ರ ಐಪಿಎಲ್​​ನಲ್ಲಿ ಶ್ರೀಲಂಕಾದ ಸ್ಪಿನ್ನರ್ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದರ. 16 ಪಂದ್ಯಗಳಲ್ಲಿ 7.54 ಎಕಾನಮಿಯಲ್ಲಿ 26 ವಿಕೆಟ್​ ಉರುಳಿಸಿದ್ದಾರೆ. ಈ ಸಂಖ್ಯೆಗಳೊಂದಿಗೆ ಅವರು ಆವೃತ್ತಿಯಲ್ಲಿ ಎರಡನೇ ಗರಿಷ್ಠ ವಿಕೆಟ್​ ಗಳಿಕೆದಾರ.

2023ರಲ್ಲಿ, ಅವರು ಚೆಂಡಿನೊಂದಿಗೆ ದೊಡ್ಡ ಸಾಧನೆ ಮಾಡಲು ವಿಫಲರಾದರು. ಆದಾಗ್ಯೂ, ಮುಂಬರುವ ಹರಾಜಿನಲ್ಲಿ ಅವರ ಹೆಸರು ಭಾರಿ ಮೊತ್ತವನ್ನು ಪಡೆಯುವ ನೆಚ್ಚಿನ ಆಟಗಾರರಲ್ಲಿ ಒಬ್ಬರು. ತಮ್ಮ ಸ್ಪಿನ್ ದಾಳಿಯನ್ನು ಬಲಪಡಿಸಲು ಬೇರೆ ತಂಡಗಳು ಅವರಿಗಾಗಿ ಹೂಡಿಕೆ ಮಾಡಬಹುದು.

ಜೋಶ್ ಹೇಜಲ್​ವುಡ್​

ಕಳೆದ ಎರಡು ಋತುಗಳಲ್ಲಿ ತಮ್ಮ ವೇಗದ ಬೌಲಿಂಗ್ ಘಟಕವನ್ನು ಮುನ್ನಡೆಸಿದ್ದ ಜೋಶ್ ಹೇಜಲ್ವುಡ್ ಅವರನ್ನು ಆರ್​​ಸಿ ಬಿ ಬಿಡುಗಡೆ ಮಾಡಿದೆ. ಆಸ್ಟ್ರೇಲಿಯಾದ ವೇಗದ ಬೌಲರ್ ಇತ್ತೀಚೆಗೆ 2023 ರ ವಿಶ್ವಕಪ್​ನಲ್ಲಿ ತಮ್ಮ ರಾಷ್ಟ್ರೀಯ ತಂಡಕ್ಕೆ ಉತ್ತಮ ಕೊಡುಗೆ ಕೊಟ್ಟಿದ್ದಾರೆ. ಮುಂಬರುವ ಹರಾಜಿನಲ್ಲಿ ಲಾಭದಾಯಕ ಮೊತ್ತ ಪಡೆಯುವ ಹೆಚ್ಚಿನ ಸಾಧ್ಯತೆಗಳಿವೆ.

2023 ರ ಐಪಿಎಲ್​ನಲ್ಲಿ ಅವರು ಚಾಲೆಂಜರ್ಸ್ ಪರ ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ. 8.44 ಎಕಾನಮಿಯಲ್ಲಿ ಕೇವಲ ಮೂರು ವಿಕೆಟ್​್ ಪಡೆದರು. ಶಿಸ್ತುಬದ್ಧ ವೇಗದ ಬೌಲಿಂಗ್​​ಗೆ ಹೆಸರುವಾಸಿಯಾದ ಹೇಜಲ್ವುಡ್ ಮೇಲೆ ಉತ್ತಮ ಹಣವನ್ನು ಖರ್ಚು ಮಾಡಬಹುದು. 32 ವರ್ಷದ ಆಸೀಸ್ ಆಟಗಾರ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ 27 ಪಂದ್ಯಗಳಲ್ಲಿ 8.06 ಎಕಾನಮಿಯಲ್ಲಿ 35 ವಿಕೆಟ್​​ ಪಡೆದಿದ್ದಾರೆ.

Exit mobile version