ಬೆಂಗಳೂರು: ಐಪಿಎಲ್ (IPL 2024) ನ 17 ನೇ ಆವೃತ್ತಿ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಆರ್ಸಿಬಿ (Royal Challengers Bangalore) ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ಸಿಬಿ ಅನ್ಬಾಕ್ಸ್ (RCB UNBOX) ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ವಿಶೇಷ ಕಾರ್ಯಕ್ರಮಗಳು ನಡೆದವು. ಇದೇ ವೇಳೆ ತಂಡಕ್ಕೆ ಹೊಸ ಹೆಸರನ್ನೂ ಇಡಲಾಗಿದೆ. ಅಂದರೆ ಇನ್ನು ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗ್ಳೂರ್ (Royal Challengers Bangalore) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಆಗಿ ಬದಲಾವಣೆಯಾಗಿದೆ.
The City we love, the Heritage we embrace, and this is the time for our ಹೊಸ ಅಧ್ಯಾಯ.
— Royal Challengers Bangalore (@RCBTweets) March 19, 2024
PRESENTING TO YOU, ROYAL CHALLENGERS BENGALURU, ನಿಮ್ಮ ತಂಡ, ನಿಮ್ಮ RCB!#PlayBold #ನಮ್ಮRCB #RCBUnbox pic.twitter.com/harurFXclC
“ನಾವು ಪ್ರೀತಿಸುವ ನಗರ, ನಾವು ಅಪ್ಪಿಕೊಳ್ಳುವ ಪರಂಪರೆ ಮತ್ತು ಇದು ಹೊಸ ಅಧ್ಯಾಯ ಆರಂಭವಾಗುವ ಸಮಯ. ನಿಮಗಿದೋ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಅರ್ಪಣೆ. ನಿಮ್ಮ ತಂಡ, ನಿಮ್ಮ ಆರ್ಸಿಬಿ “ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಲಾಗಿದೆ.
ಕಾರ್ಯಕ್ರಮದಲ್ಲಿ ಎರಡು ದಿನದ ಹಿಂದೆ ಡಬ್ಲ್ಯುಪಿಎಲ್ ಚಾಂಪಿಯನ್ (WPL 2024) ಪಟ್ಟ ಅಲಂಕರಿಸಿದ ಮಹಿಳೆಯರ ತಂಡವೂ ಆಗಮಿಸಿತ್ತು. ಅಂತೆಯೇ ತಂಡ ಸ್ಟೇಡಿಯಮ್ಗೆ ಆಗಮಿಸುತ್ತಿದ್ದಂತೆ ಪುರುಷರ ತಂಡದ ಆಟಗಾರರು ವಿಶೇಷ ಗೌರವ ಸಲ್ಲಿಸಿದ್ದಾರೆ. ಸ್ಮೃತಿ ಮಂದಾನ ನೇತೃತ್ವದ ತಂಡ ಚಿನ್ನಸ್ವಾಮಿಗೆ ಪ್ರವೇಶ ಪಡೆದ ತಕ್ಷಣ ಪ್ರೇಕ್ಷಕರ ಸಂಭ್ರಮ ಮುಗಿಲು ಮುಟ್ಟಿತು. ಈ ವೇಳೆ ಪುರುಷರ ತಂಡ ವಿಶೇಷ ಗೌರವ ನೀಡಿತು.
ಆರ್ಸಿಬಿ ಅನ್ಬಾಕ್ಸ್ ಈವೆಂಟ್ ಟೂರ್ನಿ ಆರಂಭಕ್ಕೆ ಮೊದಲು ಅಭಿಮಾನಿಗಳೊಂದಿಗಿನ ಸಂಪರ್ಕವಾಗಿದೆ. ಬೆಂಗಳೂರಿನಿಂದ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದರಲ್ಲಿ ಪಾಲ್ಗೊಂಡಿದ್ದರು. ಸಂಗೀತ ಉದ್ಯಮದ ಹಲವಾರು ವ್ಯಕ್ತಿಗಳು ವೇದಿಕೆಯನ್ನು ಅಲಂಕರಿಸಿದ್ದರು.
ಇದನ್ನೂ ಓದಿ: Wanindu Hasaranga : ಲಂಕಾದ ಸ್ಪಿನ್ ಬೌಲರ್ಗೆ ನಿಷೇಧ ಹೇರಿದ ಐಸಿಸಿ
ನಾರ್ವೇಜಿಯನ್ ಡಿಜೆ ಮತ್ತು ಸಂಗೀತಗಾರ ಅಲನ್ ವಾಕರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ನೊಂದಿಗೆ ಕೈಜೋಡಿಸಿ 2024ರ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಋತುವಿಗೆ ಮುಂಚಿತವಾಗಿ ವಿಶೇಷ ಗೀತೆಯನ್ನು ಬಿಡುಗಡೆ ಮಾಡಿದರು.
‘ಟೀಮ್ ಸೈಡ್ ಎಫ್ಟಿ ಆರ್ಸಿಬಿ’ ಎಂಬ ಶೀರ್ಷಿಕೆಯ ಈ ಹಾಡಿನಲ್ಲಿ ನಾರ್ವೇಜಿಯನ್ ಪಾಪ್ ಕಲಾವಿದ ಸೋಫಿಲೌಡ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ಅದ್ಭುತ ಅನುಭವವನ್ನು ನೀಡುವ ಭರವಸೆ ನೀಡಿದ್ದಾರೆ. ಇಂಗ್ಲಿಷ್, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಎಲೆಕ್ಟ್ರೋ-ಹೌಸ್ ಬೀಟ್ಸ್ ಮತ್ತು ಬಹುಭಾಷಾ ಸಾಹಿತ್ಯದ ಸಮ್ಮಿಳನದೊಂದಿಗೆ ಈ ಹಾಡು ಭಾರತದಾದ್ಯಂತ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳ ಮನ ಸೆಳೆಯುವ ನಿರೀಕ್ಷೆ ಇದೆ.
ಹೊಸ ಜೆರ್ಸಿ ಬಿಡುಗಡೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಂಗಳವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ಸಿಬಿ ಅನ್ಬಾಕ್ಸ್ ಈವೆಂಟ್ನಲ್ಲಿ ಐಪಿಎಲ್ 2024 ಕ್ಕೆ ಮುಂಚಿತವಾಗಿ ತಮ್ಮ ಹೊಸ ಜರ್ಸಿಯನ್ನು ಅನಾವರಣಗೊಳಿಸಿತು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಸ್ಮೃತಿ ಮಂದಾನ ಅವರು ಆರ್ಸಿಬಿಯ ಹೊಸ ಮ್ಯಾಚ್ ಕಿಟ್ ಅನ್ನು ಉಡುಗೊರೆಯಾಗಿ ನೀಡುತ್ತಿದ್ದಂತೆ ಪ್ರಸಿದ್ಧ ಡಿಜೆ ಮತ್ತು ಸಂಗೀತ ನಿರ್ಮಾಪಕ ಅಲನ್ ವಾಕರ್ ಕೂಡ ಸಮಾರಂಭದಲ್ಲಿ ಹಾಜರಿದ್ದರು.
ಹಿಂದಿನ ಋತುವಿಗೆ ಹೋಲಿಸಿದರೆ, ಜರ್ಸಿಯ ಮೇಲಿನ ಅರ್ಧವನ್ನು ಕಪ್ಪು ಬಣ್ಣದಿಂದ ನೀಲಿ ಬಣ್ಣಕ್ಕೆ ಬದಲಾಯಿಸಲಾಗಿದೆ., ಆರ್ಸಿಬಿಯ ಬಣ್ಣಗಳಿಗೆ ಹೊಸ ವಿನ್ಯಾಸವನ್ನು ಸೇರಿಸಲಾಗಿದೆ. ವಿಶೇಷವೆಂದರೆ, ರಘು ದೀಕ್ಷಿತ್, ನೀತಿ ಮೋಹನ್, ಅಲನ್ ವಾಕರ್ ಮತ್ತು ಇತರ ಹಲವಾರು ಕಲಾವಿದರ ಪ್ರದರ್ಶನಗಳೊಂದಿಗೆ ಫ್ರ್ಯಾಂಚೈಸ್ ಅಭಿಮಾನಿಗಳಿಗಾಗಿ ಸಮಾರಂಭವೊಂದನ್ನು ಆಯೋಜಿಸಿತ್ತು.