Site icon Vistara News

RCB: ಎಲಿಮಿನೇಟರ್​ ಪಂದ್ಯದಲ್ಲಿ ಆರ್​ಸಿಬಿ ಸೋಲಿಗೆ ವಿಜಯ್​ ಮಲ್ಯ ಕಾರಣವಂತೆ!

RCB

RCB: Vijay Mallya is the reason for RCB's defeat in the eliminator match!

ಬೆಂಗಳೂರು: ಬುಧವಾರ ರಾತ್ರಿ ನಡೆದ ಐಪಿಎಲ್​ನ(IPL 2024) ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡ ರಾಜಸ್ಥಾನ್​(Rajasthan Royals) ವಿರುದ್ಧ 4 ವಿಕೆಟ್​ ಅಂತರದ ಸೋಲು ಕಾಣುವ ಮೂಲಕ ಟೂರ್ನಿಯಿಂದ ಹೊರಬಿದ್ದಿದೆ. ಈ ಸೋಲಿಗೆ ತಂಡದ ಮಾಜಿ ಮಾಲಿಕ ವಿಜಯ್​ ಮಲ್ಯ(Vijay Mallya) ಎಂದು ನೆಟ್ಟಿಗರು ಟ್ರೋಲ್​ ಮಾಡಿದ್ದಾರೆ.

ಹೌದು, ಆರ್​ಸಿಬಿ ತಂಡ ಆರಂಭಿಕ ಹಂತದಲ್ಲಿ ಸತತವಾಗಿ ಸೋಲಿಗೆ ಸಿಲುಕಿ ಇನ್ನೇನು ಟೂರ್ನಿಯಿಂದ ಹೊರಬೀಳುತ್ತದೆ ಎನ್ನುವಷ್ಟರಲ್ಲಿ ಪುಟಿದೆದ್ದು ಸತತವಾಗಿ 6 ಪಂದ್ಯ ಗೆದ್ದು ಅಚ್ಚರಿ ಎಂಬಂತೆ ಪ್ಲೇ ಆಫ್​ ಪ್ರವೇಶಿಸಿತ್ತು. ಇದೇ ಖುಷಿಯಲ್ಲಿ ವಿಜಯ್​ ಮಲ್ಯ ತಂಡಕ್ಕೆ ಶುಭ ಹಾರೈಸಿದ್ದರು.

“ಆರ್​ಸಿಬಿ ಪ್ಲೇ ಆಫ್​ಗೆ ಎಂಟ್ರಿ ಕೊಟ್ಟಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ತಂಡಕ್ಕೆ ಹೃದಯ ಪೂರಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸತತ ಸೋಲುಗಳಿಂದ ಗೆಲುವಿನ ಟ್ರ್ಯಾಕ್​ಗೆ ಮರಳಿರುವುದು ಅದ್ಭುತ. ಟ್ರೋಫಿ ಗೆಲ್ಲುವ ಕಡೆಗೆ ಆರ್​ಸಿಬಿ ಇನ್ನಷ್ಟು ಆಕ್ರಮಣಕಾರಿಯಾಗಿ ಆಡಬೇಕು” ಎಂದು ಮುಂದಿನ ಪಂದ್ಯಗಳಿಗೂ ಶುಭ ಹಾರೈಸಿದ್ದರು.

ಎಲಿಮಿನೇಟರ್​ ಪಂದ್ಯ ಆರಂಭಕ್ಕೂ ಕೂಡ ಮಲ್ಯ ಟ್ವೀಟ್​ ಮೂಲಕ ಶುಭ ಹಾರೈಸಿ, ‘ನಾನು ಆರ್‌ಸಿಬಿ ಫ್ರಾಂಚೈಸಿಗಾಗಿ ಬಿಡ್ ಮಾಡಿದಾಗ, ವಿರಾಟ್‌ ಕೊಹ್ಲಿಗೆ ಬಿಡ್ ಮಾಡಿದಾಗ, ನಾನು ಇದಕ್ಕಿಂತ ಉತ್ತಮ ಆಯ್ಕೆಗಳನ್ನು ಮಾಡಲು ಸಾಧ್ಯವಿಲ್ಲ ಎಂದು ನನ್ನ ಆಂತರಾತ್ಮ ಹೇಳಿತ್ತು. ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲಲು ಆರ್‌ಸಿಬಿಗೆ ಉತ್ತಮ ಅವಕಾಶವಿದೆ ಎಂದು ನನ್ನ ಮನಸ್ಸು ಹೇಳುತ್ತಿದೆ. ತಂಡಕ್ಕೆ ಶುಭವಾಗಲಿ’ ಎಂದು ಹಾರೈಸಿದ್ದರು.

ಇದನ್ನೂ ಓದಿ Virat Kohli: ಅಂದು ವಿಶ್ವಕಪ್​ನಲ್ಲಿ, ಇಂದು ಐಪಿಎಲ್​ನಲ್ಲಿ ವಿಕೆಟ್​ ಬೇಲ್ಸ್​ ಹಾರಿಸಿ ಬೇಸರದಿಂದ ಮೈದಾನ ತೊರೆದ ಕೊಹ್ಲಿ

ಇದೀಗ ನೆಟ್ಟಿಗರು ಮಲ್ಯ ಶುಭ ಹಾರೈಕೆಯಿಂದಲೇ ಆರ್​ಸಿಬಿ ಸೋಲು ಕಂಡಿದೆ ಎಂದು ಹೇಳಲಾರಂಭಿಸಿದ್ದಾರೆ. ಮಲ್ಯ ಹಾರೈಕೆಗೂ ಮುನ್ನ ಆರ್​​ಸಿಬಿ ಉತ್ತಮವಾಗಿ ಆಡುತ್ತಿತ್ತು. ಮಲ್ಯ ಹಾರೈಕೆಯಿಂದ ಆರ್​ಸಿಬಿ ಆಟಗಾರರಿಗೆ ಹಳೆಯ ಪಾರ್ಟಿಗಳು ನೆನೆಪಿಗೆ ಬಂದಿರಬೇಕು ಇದೇ ಗುಂಗಿನಲ್ಲಿ ಪಂದ್ಯ ಸೋತುರು ಎಂದು ಕಾಲೆಳೆದಿದ್ದಾರೆ. ಮಲ್ಯ ಅವರು ಆರ್​ಸಿಬಿಯ ಮಾಲಿಕರಾಗಿದ್ದಾಗ ಪಂದ್ಯ ಗೆದ್ದ ಬಳಿಕ ಆಟಗಾರರಿಗೆ ಫುಲ್​ ಪಾರ್ಟಿ ನೀಡುತ್ತಿದ್ದರು. ಶುಭ ಹಾರೈಸದೇ ಇದ್ದಿದ್ದರೆ ಆಟಗಾರರಿಗೆ ಹಳೆಯ ನೆನಪು ಮತ್ತೆ ಮರುಕಳಿಸುತ್ತಿರಲ್ಲಿ. ಜತೆಗೆ ಪಂದ್ಯವನ್ನೂ ಕೂಡ ಗೆಲ್ಲುತ್ತಿದ್ದರು ಎಂದು ಕಮೆಂಟ್​ ಮಾಡಿದ್ದಾರೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಆಟಗಾರ ತುಷಾರ್‌ ದೇಶ್‌ಪಾಂಡೆ ಕೂಡ ಆರ್‌ಸಿಬಿಯನ್ನು ಟ್ರೋಲ್​ ಮಾಡಿದ್ದಾರೆ.

ಚೆನ್ನೈ ಸೂಪರ್​ ಕಿಂಗ್ಸ್​ನ ಫ್ಯಾನ್ಸ್ ಪೇಜ್‌ವೊಂದು ಬೆಂಗಳೂರು ದಂಡು ರೈಲ್ವೇ ನಿಲ್ದಾಣದ (Bangalore cant) ಫೋಟೋವನ್ನು ಹಂಚಿಕೊಂಡಿದೆ. ಈ ಮೂಲಕ ಬೆಂಗಳೂರು ತಂಡದಿಂದ ಕಪ್‌ ಗೆಲ್ಲಲು ಸಾಧ್ಯವಿಲ್ಲ ಎಂಬರ್ಥದಲ್ಲಿ ಈ ಮೀಮ್ಸ್ ಅನ್ನು ಸಿಎಸ್‌ಕೆ ಫ್ಯಾನ್ ಪೇಜ್‌ ಹಂಚಿಕೊಂಡಿದೆ. ಈ ಮೀಮ್ಸ್‌ ಅನ್ನು ತುಷಾರ್‌ ದೇಶ್‌ಪಾಂಡೆ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯ ಸ್ಟೋರಿಯನ್ನು ಹಂಚಿಕೊಂಡಿದ್ದಾರೆ.

Exit mobile version