Site icon Vistara News

RCB vs CSK: ಆರ್​ಸಿಬಿ-ಚೆನ್ನೈ ತಂಡದ ಐಪಿಎಲ್​ ದಾಖಲೆ, ಪಿಚ್​ ರಿಪೋರ್ಟ್​ ಹೇಗಿದೆ?

RCB vs CSK

ಚೆನ್ನೈ: ಐಪಿಎಲ್(IPL 2024)​ ಟೂರ್ನಿಯ ಬದ್ಧ ಎದುರಾಳಿಗಳಾದ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB vs CSK) ತಂಡಗಳು ನಾಳೆ ನಡೆಯುವ 17ನೇ ಆವೃತ್ತಿಯ ಐಪಿಎಲ್​ ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ. ಈ ಪಂದ್ಯ ನೋಡಲು ಉಭಯ ತಂಡಗಳ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪಂದ್ಯದ ಪಿಚ್​ ರಿಪೋರ್ಟ್​, ಇತ್ತಂಡಗಳ ಐಪಿಎಲ್​ ಮುಖಾಮುಖಿ ಹೇಗಿದೆ ಎನ್ನುವ ಮಾಹಿತಿ ಇಂತಿದೆ.

ಮುಖಾಮುಖಿ


ಆರ್​ಸಿಬಿ ಮತ್ತು ಚೆನ್ನೈ ತಂಡ ಇದುವರೆಗೆ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 10 ಪಂದ್ಯ ಗೆದ್ದರೆ, ಚೆನ್ನೈ 20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಬಲಾಬಲದ ಲೆಕ್ಕಾಚಾರದಲ್ಲಿ ಚೆನ್ನೈ ತಂಡ ಬಲಿಷ್ಠವಾಗಿ ಗೋಚರಿಸಿದೆ. ಜತೆಗೆ ಈ ಬಾರಿ ಚೆನ್ನೈ ತಂಡದಲ್ಲಿ ಅನುಭವಿಗಳ ಪಡೆಯೇ ಕಂಡುಬಂದಿದೆ.

ಎಂ.ಎ. ಚಿದಂಬರಂ ಸ್ಟೇಡಿಯಂನ ಐಪಿಎಲ್​ ದಾಖಲೆ


ಚೆನ್ನೈನ(Chennai) ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ(MA Chidambaram Stadium) ಇದುವರೆಗೆ ಒಟ್ಟು 88 ಐಪಿಎಲ್​ ಪಂದ್ಯಗಳು ಏರ್ಪಡಿದೆ. ಇದರಲ್ಲಿ 47 ಬಾರಿ ಚೇಸಿಂಗ್​ ನಡೆಸಿದ ತಂಡ ಗೆದ್ದರೆ, 37 ಸಲ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಜಯಶಾಲಿಯಾಗಿದೆ. 4 ಪಂದ್ಯಗಳು ಫಲಿತಾಂಶ ಕಾಣದೆ ಅಂತ್ಯಕಂಡಿದೆ. ಈ ಸ್ಟೇಡಿಯಂನ ಗರಿಷ್ಠ ಮೊತ್ತ 263. ಕನಿಷ್ಠ ಮೊತ್ತ 82. ಈ ಎರಡು ದಾಖಲೆಗಳು ಇರುವುದು ಆರ್​ಸಿಬಿ ತಂಡದ ಪರವೇ ಎನ್ನುವುದು ವಿಶೇಷ.

ಇದನ್ನೂ ಓದಿ IPL 2024 Squads: ಐಪಿಎಲ್ 10 ತಂಡಗಳ ಸಂಪೂರ್ಣ ಆಟಗಾರರ ಪಟ್ಟಿ

ಪಿಚ್​ ರಿಪೋರ್ಟ್​


ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನ ಪಿಚ್​ ಸ್ಪಿನ್ ಸ್ನೇಹಿ ಜತೆಗೆ ಬ್ಯಾಟಿಂಗ್​ಗೂ ನೆರವಾಗಲಿದೆ. ಇಲ್ಲಿ ಆಡಿದ ಬಹುತೇಕ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿದೆ. 5 ಪಂದ್ಯಗಳಲ್ಲಿ 200ರನ್​ಗಳ ಗಡಿ ದಾಟಿದೆ. ಹೀಗಾಗಿ ಈ ಪಂದ್ಯದಲ್ಲಿಯೂ ದೊಡ್ಡ ಮೊತ್ತ ದಾಖಲಾಗುವ ಸಾಧ್ಯತೆ ಇದೆ. ಇಲ್ಲಿ ಧೋನಿ(ms dhoni) ಅವರು ಅತ್ಯಧಿಕ ಮೊತ್ತ ಗಳಿಸಿದ ದಾಖಲೆಯೂ ಹೊಂದಿದ್ದಾರೆ. ರವೀಂದ್ರ ಜಡೇಜಾ ಅತ್ಯಧಿಕ ವಿಕೆಟ್​ ಕಿತ್ತಿದ್ದಾರೆ.

ಉಭಯ ತಂಡಗಳು


ಚೆನ್ನೈ ಸೂಪರ್​ ಕಿಂಗ್ಸ್​(chennai super kings)

ಎಂ.ಎಸ್ ಧೋನಿ (ನಾಯಕ), ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜವರ್ಧನ್ ಹಂಗರ್ಗೇಕರ್, ದೀಪಕ್ ಚಹರ್, ಮಹೇಶ್ ದೀಕ್ಷಾನಾ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ. , ಮುಸ್ತಾಫಿಜುರ್ ರೆಹಮಾನ್, ಅವನೀಶ್ ರಾವ್ ಅರವೆಲ್ಲಿ. ಡೆವೊನ್ ಕಾನ್ವೇ (ಹೆಬ್ಬೆರಳಿನ ಗಾಯ – ಮೇ ತನಕ ಫಿಟ್ ಆಗುವ ನಿರೀಕ್ಷೆಯಿಲ್ಲ), ಮಥೀಶ ಪತಿರಾನ (ಮಂಡಿರಜ್ಜು ಗಾಯ).

ರಾಯಲ್​ ಚಾಲೆಂಜರ್ಸ್ ಬೆಂಗಳೂರು(royal challengers bangalore)

ಫಾಫ್ ಡು ಪ್ಲೆಸಿಸ್ (ನಾಯಕ), ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್, ವಿಜಯ್‌ಕುಮಾರ್ ವೈಶಾಕ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್, ಕ್ಯಾಮೆರಾನ್ ಗ್ರೀನ್, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಟಾಮ್ ಕರ್ರಾನ್, ಲಾಕಿ ಫರ್ಗುಸನ್, ಸ್ವಪ್ನಿಲ್ ಸಿಂಗ್, ಸೌರವ್ ಚೌಹಾಣ್.

Exit mobile version