ಬೆಂಗಳೂರು: ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧ ನಾಳೆ ನಡೆಯುವ ಮಹತ್ವದ ಪಂದ್ಯದಲ್ಲಿ ಆರ್ಸಿಬಿ(Royal Challengers Bengaluru) ಕಣಕ್ಕಿಳಿಯಲು ಸಜ್ಜಾಗಿ ನಿಂತಿದ್ದರೂ ಕೂಡ ಪಂದ್ಯಕ್ಕೆ ಮಳೆ ಅನುವು ಮಾಡಿಕೊಡುವುದು ಬಹುತೇಖ ಅನುಮಾನ ಎನ್ನುವಂತಿದೆ. ಶುಕ್ರವಾರವೇ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ಇದೀಗ ಆರ್ಸಿಬಿ(RCB vs CSK) ಆಟಗಾರರು ಪಂದ್ಯದ ವೇಳೆ ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿದ ವಿಡಿಯೊವೊಂದು ಭಾರೀ ವೈರಲ್(viral video) ಆಗಿದೆ.
ಹವಾಮಾನ ಇಲಾಖೆ ಪಂದ್ಯ ನಡೆಯುವ ಶನಿವಾರದಂದು ಶೇ.70ರಷ್ಟು ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಪ್ಲೇ ಆಫ್ ಪ್ರವೇಶ ಪಡೆಯಬೇಕಿದ್ದರೆ ಆರ್ಸಿಬಿಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯ ಪಂದ್ಯ ರದ್ದಾದರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ. ಹೇಗಾದರೂ ಪಂದ್ಯದ ದಿನ ಮಳೆ ಬಾರದಿರಲಿ ಎಂದು ಆರ್ಸಿಬಿ ಆಟಗಾರರು ಡ್ರೆಸಿಂಗ್ ರೋಮ್ನಲ್ಲಿ ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ, ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ ಎಂದು ಕೃಷ್ಣ ನಾಮ ಜಪಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಸಲಿಗೆ ಆರ್ಸಿಬಿ ಆಟಗಾರರು ಮಳೆ ಬಾರದಂತೆ ಕೃಷ್ಣ ನಾಮ ಜಪಿಸಿಲ್ಲ. ಬದಲಾಗಿ ನೆಟ್ಟಿಗರು ಈ ವಿಡಿಯೊವನ್ನು ಎಡಿಟ್ ಮಾಡಿ ವೈರಲ್ ಮಾಡಿದ್ದಾರೆ. ಪ್ರತಿ ಪಂದ್ಯ ಗೆದ್ದಾಗ ಆರ್ಸಿಬಿ ಡ್ರೆಸ್ಸಿಂಗ್ ರೂಮ್ನಲ್ಲಿ ಸಂಭ್ರಮಿಸುತ್ತಾರೆ. ಈ ವಿಡಿಯೊಗೆ ಕೃಷ್ಣ ನಾಮ ಜಪವನ್ನು ಮತ್ತು ಹವಾಮಾನ ಇಲಾಖೆಯ ವರದಿಯ ಫೋಟೊವನ್ನು ಎಡಿಟ್ ಮಾಡಲಾಗಿದೆ.
ಇದನ್ನೂ ಓದಿ RCB vs CSK: ಅದೇ ದಿನ, ಅದೇ ವಾರ, ಮಳೆ ಭೀತಿ; ಇದೆಂಥಾ ಕಾಕತಾಳೀಯ! ಆರ್ಸಿಬಿಗೆ ಇದು ಅದೃಷ್ಟವಾ?
1. ಪಂದ್ಯದ ಸಮಯದಲ್ಲಿ ಬೆಂಗಳೂರಿನಲ್ಲಿ ಭಾರೀ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಪಂದ್ಯ ಮಳೆಯಿಂದ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ನೀಡಲಾಗುತ್ತದೆ.
2. ಆರ್ಸಿಬಿ-ಸಿಎಸ್ಕೆ ನಡುವಣ ಪಂದ್ಯದ ಅಂತಿಮ 5 ಓವರ್ಗಳ ಪಂದ್ಯದ ಆಯೋಜನೆಗೆ ಕಟ್ ಆಫ್ ಟೈಮ್ 10:56 PM. ಈ ವೇಳೆಗೆ ಪಂದ್ಯ ಆಯೋಜಿಸುವಂತಹ ಪರಿಸ್ಥಿತಿ ಇರದಿದ್ದರೆ ಪಂದ್ಯವನ್ನು ರದ್ದು ಎಂದು ನಿರ್ಧರಿಸಲಾಗುತ್ತದೆ.
3. ಒಂದು ವೇಳೆ ಮಳೆ ಬಂದು, ಉದಾಹರಣೆಗೆ ನಿಗದಿತ 10 ಓವರ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ತಂಡ 10 ಓವರ್ ಆಡಿ, 2ನೇ ಇನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ ತಂಡ 5 ಓವರ್ಗಳನ್ನು ಪೂರ್ತಿಗೊಳಿಸಿದರೆ ಮಾತ್ರ ಆಗ ಡಕ್ವರ್ತ್ ಲೂಯಿಸ್ ನಿಯಮ ಅನ್ವಯವಾಗುತ್ತದೆ.
4. ಪಂದ್ಯ ಆರಂಭಗೊಂಡ ಬಳಿಕ ಮಳೆ ಬಂದರೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಓವರ್ ಕಡಿತದೊಂದಿಗೆ ಟಾರ್ಗೆಟ್ ನೀಡಲಾಗುತ್ತದೆ. ಈ ಮೂಲಕ ಪಂದ್ಯವನ್ನು ಪೂರ್ಣಗೊಳಿಸಲಾಗುತ್ತದೆ.
5. ಒಂದೊಮ್ಮೆ ಮಳೆಯಿಂದಾಗಿ ಪಂದ್ಯ ರದ್ದಾದರೆ ಚೆನ್ನೈ ತಂಡ ಅಧಿಕೃತವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಏಕೆಂದರೆ ಈಗಾಗಲೇ ಚೆನ್ನೈ 14 ಅಂಕಗಳನ್ನು ಹೊಂದಿದ್ದು ಪಂದ್ಯ ರದ್ದಾದ ಕಾರಣ ಸಿಗುವ ಒಂದು ಅಂಕದಿಂದ ಒಟ್ಟು ಅಂಕ 15ಕ್ಕೇ ಏರಿಕೆಯಾಗುತ್ತದೆ. ಇನ್ನುಳಿದ ಯಾವುದೇ ತಂಡಕ್ಕೂ ಈ ಮೊತ್ತವನ್ನು ಮೀರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಚೆನ್ನೈಗೆ ಮಳೆ ವರದಾನವಾಗಲಿದೆ. ಆರ್ಸಿಬಿ ತಂಡವು 13 ಅಂಕಗಳೊಂದಿಗೆ ಐಪಿಎಲ್ನಿಂದ ಹೊರಬೀಳಲಿದೆ.