Site icon Vistara News

RCB vs CSK: ಟಾಸ್​ ಗೆದ್ದ ಆರ್​ಸಿಬಿಯಿಂದ ಬ್ಯಾಟಿಂಗ್​ ಆಯ್ಕೆ

Chennai Super Kings vs Royal Challengers Bengaluru

ಚೆನ್ನೈ: ಲೋಕಸಭೆ ಚುನಾವಣೆಗೆ ಅಖಾಡ ಸಿದ್ಧಗೊಳ್ಳುತ್ತಿರುವಾಗಲೇ ದೇಶದೆಲ್ಲೆಡೆ 17ನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌(IPL 2024)ಗೆ ಅದ್ಧೂರಿ ಉದ್ಘಾಟನಾ ಸಮಾರಂಭದೊಂದಿಗೆ ವಿಧ್ಯುಕ್ತ ಚಾಲನೆ ಸಿಕ್ಕಿದೆ. ಇನ್ನೆರಡು ತಿಂಗಳುಗಳ ಕಾಲ ಕ್ರಿಕೆಟ್‌ ಅಭಿಮಾನಿಗಳಿಗೆ ಭರ್ಜರಿ ರಸದೌತನ ಒದಗಿಸಲಿದೆ. ಉದ್ಘಾಟನ ಪಂದ್ಯದಲ್ಲಿ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್​ (RCB vs CSK) ಬೌಲಿಂಗ್​ ಆಹ್ವಾನ ಪಡೆದಿದೆ.

ಪಿಚ್​ ರಿಪೋರ್ಟ್​


ಚೆನ್ನೈಯ ಎಂ.ಎ. ಚಿದಂಬರಂ ಸ್ಟೇಡಿಯಂನ ಪಿಚ್​ ಸ್ಪಿನ್ ಸ್ನೇಹಿ ಜತೆಗೆ ಬ್ಯಾಟಿಂಗ್​ಗೂ ನೆರವಾಗಲಿದೆ. ಇಲ್ಲಿ ಆಡಿದ ನಾಲ್ಕು ಪಂದ್ಯಗಳಲ್ಲಿ 200ರನ್​ಗಳ ಗಡಿ ದಾಟಿದೆ. ಇಲ್ಲಿ ಧೋನಿ(ms dhoni) ಅವರು ಅತ್ಯಧಿಕ ಮೊತ್ತ ಗಳಿಸಿದ ದಾಖಲೆಯೂ ಹೊಂದಿದ್ದಾರೆ. ರವೀಂದ್ರ ಜಡೇಜಾ ಅತ್ಯಧಿಕ ವಿಕೆಟ್​ ಕಿತ್ತಿದ್ದಾರೆ.

ಚೆನ್ನೈನ(Chennai) ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ(MA Chidambaram Stadium) ಇದುವರೆಗೆ ಒಟ್ಟು 88 ಐಪಿಎಲ್​ ಪಂದ್ಯಗಳು ಏರ್ಪಡಿದೆ. ಇದರಲ್ಲಿ 47 ಬಾರಿ ಚೇಸಿಂಗ್​ ನಡೆಸಿದ ತಂಡ ಗೆದ್ದರೆ, 37 ಸಲ ಮೊದಲು ಬ್ಯಾಟಿಂಗ್​ ನಡೆಸಿದ ತಂಡ ಜಯಶಾಲಿಯಾಗಿದೆ. 4 ಪಂದ್ಯಗಳು ಫಲಿತಾಂಶ ಕಾಣದೆ ಅಂತ್ಯಕಂಡಿದೆ. ಈ ಸ್ಟೇಡಿಯಂನ ಗರಿಷ್ಠ ಮೊತ್ತ 263. ಕನಿಷ್ಠ ಮೊತ್ತ 82. ಈ ಎರಡು ದಾಖಲೆಗಳು ಇರುವುದು ಆರ್​ಸಿಬಿ ತಂಡದ ಪರವೇ ಎನ್ನುವುದು ವಿಶೇಷ.

ಮುಖಾಮುಖಿ


ಆರ್​ಸಿಬಿ ಮತ್ತು ಚೆನ್ನೈ ತಂಡ ಇದುವರೆಗೆ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 10 ಪಂದ್ಯ ಗೆದ್ದರೆ, ಚೆನ್ನೈ 20 ಪಂದ್ಯಗಳಲ್ಲಿ ಗೆಲುವು ದಾಖಲಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಬಲಾಬಲದ ಲೆಕ್ಕಾಚಾರದಲ್ಲಿ ಚೆನ್ನೈ ತಂಡ ಬಲಿಷ್ಠವಾಗಿ ಗೋಚರಿಸಿದೆ. ಜತೆಗೆ ಈ ಬಾರಿ ಚೆನ್ನೈ ತಂಡದಲ್ಲಿ ಅನುಭವಿಗಳ ಪಡೆಯೇ ಕಂಡುಬಂದಿದೆ.

ಅದ್ಧೂರಿ ಉದ್ಘಾಟನಾ ಸಮಾರಂಭ

ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ವರ್ಣರಂಜಿತ ಚಾಲನೆ(IPL 2024 Opening Ceremony Live) ಸಿಕ್ಕಿದೆ. ಬಾಲಿವುಡ್‌ ತಾರೆಯರಾದ ಅಕ್ಷಯ್‌ ಕುಮಾರ್‌(Akshay Kumar), ಟೈಗರ್‌ ಶ್ರಾಫ್(Tiger Shroff) ನೃತ್ಯದ ಮೂಲಕ ರಂಚಿಸಿದರೆ, ಆಸ್ಕರ್‌ ವಿಜೇತ ಎ.ಆರ್​ ರೆಹಮಾನ್​(AR Rahman), ಖ್ಯಾತ ಗಾಯಕ ಸೋನು ನಿಗಮ್‌(Sonu Nigam) ದೇಶಭಕ್ತಿ ಗೀತೆಗಳನ್ನು ಹಾಡಿ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಯುಂತೆ ಮಾಡಿದರು. ಇದರ ಜತೆಗೆ ಸ್ವೀಡನ್‌ನ ಡಿಜೆ, ಆಕ್ಸ್‌ವೆಲ್‌ ಪಾಪ್‌ ಗಾಯನ ಕಣ್ಮನಸೆಳೆಯಿತು

ಉಭಯ ತಂಡಗಳು

ಆರ್‌ಸಿಬಿ: ಫಾಫ್​ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ರಜತ್‌ ಪಾಟೀದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮರೂನ್‌ ಗ್ರೀನ್‌, ದಿನೇಶ್‌ ಕಾರ್ತಿಕ್‌, ಅನುಜ್ ರಾವತ್, ಮೊಹಮ್ಮದ್‌ ಸಿರಾಜ್‌, ಕರ್ಣ ಶರ್ಮ, ಅಲ್ಜಾರಿ ಜೋಸೆಫ್,ಮಯಾಂಕ್ ದಾಗರ್.

ಚೆನ್ನೈ: ಋತುರಾಜ್‌ ಗಾಯಕ್ವಾಡ್‌ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ(ವಿಕೆಟ್​ ಕೀಪರ್​), ದೀಪಕ್ ಚಾಹರ್, ಮಹೇಶ್ ತೀಕ್ಷಣ, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ.

Exit mobile version