Site icon Vistara News

Rcb vs Jailer: ಜೈಲರ್​ ವಿರುದ್ಧ ಗೆದ್ದ ಆರ್​ಸಿಬಿ; ಏನಿದು ವಿವಾದ?

No more RCB jersey in Jailer, Delhi High Court issues order

ಬೆಂಗಳೂರು: ಸೂಪರ್‌ ಸ್ಟಾರ್‌ ರಜನಿಕಾಂತ್‌ ಅವರ ʻಜೈಲರ್‌ʼ ಸಿನಿಮಾ (Rajinikanth starrer Jailer) ತಮಿಳುನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ಆಂಧ್ರ ಹಾಗೂ ಕೇರಳದಲ್ಲಿಯೂ ಅಬ್ಬರದ ಪ್ರದರ್ಶನವ ಕಾಣುತ್ತಾ ಗಳಿಯಯ ಓಟವನ್ನು ಮುಂದುವರಿಸಿದೆ. ಆದರೆ ಇದೀಗ ಚಿತ್ರ ತಂಡಕ್ಕೆ ದೆಹಲಿ ಹೈಕೋರ್ಟ್(Delhi High Court)​ ಮಾಸ್ಟರ್​ ಸ್ಟ್ರೋಕ್​ ನೀಡಿದೆ. ಸೆಪ್ಟೆಂಬರ್ 1 ರಿಂದ ಯಾವುದೇ ಥಿಯೇಟರ್‌ಗಳಲ್ಲಿ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Rcb vs Jailer) ತಂಡದ ಜೆರ್ಸಿಯನ್ನು(RCB jersey) ಹೊಂದಿರುವ ದೃಶ್ಯವನ್ನು ಪ್ರದರ್ಶಿಸದಂತೆ ನಿರ್ಮಾಪಕರಿಗೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

ದೆಹಲಿ ಕೋರ್ಟ್​ ಮೆಟ್ಟಿಲೇರಿದ್ದ ಆರ್​ಸಿಬಿ

ಜೈಲರ್ ಚಿತ್ರದ ಪಾತ್ರವೊಂದರಲ್ಲಿ ಆರ್​ಸಿಬಿ ಜೆರ್ಸಿಯನ್ನು ಬಳಸಲಾಗಿತ್ತು. ಆರ್​ಸಿಬಿ ಜೆರ್ಸಿ ಹಾಹಿದ ಈ ಪಾತ್ರದಾರಿ ಮಹಿಳೆಯ ಬಗ್ಗೆ ಅವಹೇಳನಕಾರಿ ಮತ್ತು ಮಹಿಳಾ ವಿರೋಧಿ ಹೇಳಿಯನ್ನು ನೀಡಿದ್ದಾರೆ. ಇದನ್ನು ಪ್ರಶ್ನಿಸಿ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಕೋರ್ಟ್ ಮೆಟ್ಟಿಲೇರಿತ್ತು. ನಮ್ಮ ಅನುಮತಿಯಿಲ್ಲದೆ ತಂಡದ ಜೆರ್ಸಿಯನ್ನು ಬಳಸಿ ಕೆಟ್ಟದಾಗಿ ಬಿಂಬಿಸಲಾಗಿದೆ. ಇದರಿಂದ ತಂಡದ ಘನತೆಗೆ ದಕ್ಕೆಯಾಗುತ್ತದೆ ಕೋರ್ಟ್​ಗೆ ಆರ್​ಸಿಬಿ ಫ್ರಾಂಚೈಸಿ ದೂರು ನೀಡಿತ್ತು.

ಆರ್​ಸಿಬಿ ನೀಡಿದ ದೂರಿನ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ. ಸಿಂಗ್ ಅವರು ಸೆಪ್ಟಂಬರ್​ ಒಂದರಿಂದ ಜೈಲರ್ ಚಿತ್ರದಿಂದ ಈ ದೃಶ್ಯವನ್ನು ತೆಗೆದು ಹಾಕುವಂತೆ ಸೂಚಿಸಿದ್ದಾರೆ. ಇದರ ಜತೆಗೆ ಟಿವಿ, ಸ್ಯಾಟ್​ಲೈಟ್ ಅಥವಾ ಒಟಿಟಿಯಲ್ಲಿ ಬಿಡುಗಡೆಯಾಗುವ ಮುನ್ನವೇ ಈ ದೃಶ್ಯವನ್ನು ಎಡಿಟ್ ಮಾಡಿ ಜೆರ್ಸಿಯನ್ನು ಬಳಸದಂತೆ ಆದೇಶಿಸಿದ್ದಾರೆ.

ಇದನ್ನೂ ಓದಿ Jailer OTT Rights: ʼಜೈಲರ್‌ʼ ಓಟಿಟಿ ಹಕ್ಕು ಮಾರಾಟದ ಮೊತ್ತ ಕೇಳಿ ಚಿತ್ರೋದ್ಯಮಿಗಳೇ ತಬ್ಬಿಬ್ಬು!

ಕೋರ್ಟ್ ಆದೇಶಕ್ಕೆ ತಲೆಬಾಗಿದ ನಿರ್ಮಾಪಕ

ದೆಹಲಿ ಹೈಕೋರ್ಟ್​ನ ಆದೇಶಕ್ಕೆ ಜೈಲರ್​ ನಿರ್ಮಾಪಕರು ಒಪ್ಪಿಗೆ ಸೂಚಿಸಿದ್ದು ಸದ್ಯ ಥಿಯೇಟರ್​ನಲ್ಲಿರುವ ಜೈಲರ್ ಚಿತ್ರದಿಂದ, ಸೆಪ್ಟೆಂಬರ್ 1 ರೊಳಗೆ ಬೆಂಗಳೂರು ತಂಡದ ಜೆರ್ಸಿ ಇರುವ ದೃಶ್ಯವನ್ನು ತೆಗೆದು ಹಾಕುವುದಾಗಿ ತಿಳಿಸಿದ್ದಾರೆ. ಜತೆಗೆ ನ್ಯಾಯಾಲಯದ ಸಂಪೂರ್ಣ ಶುಲ್ಕವನ್ನು ಫಿರ್ಯಾದಿದಾರರಿಗೆ ಮರುಪಾವತಿ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ.

ಇದು ರಜನಿಕಾಂತ್ ಅವರ 169ನೇ ಚಿತ್ರವಾಗಿದ್ದು, ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಕಂಡಿದೆ. ‘ಜೈಲರ್​’ ಸಿನಿಮಾದ ತೆರೆಹಿಂದೆ ಘಟಾನುಘಟಿ ತಂತ್ರಜ್ಞರು ಕೆಲಸ ಮಾಡುದ್ದಾರೆ. ದಳಪತಿ ವಿಜಯ್‌ ಅಭಿನಯದ ಬೀಸ್ಟ್‌ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳಿದ್ದ ಖ್ಯಾತ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್ ಅವರು ಈ ಚಿತ್ರದ ನಿರ್ದೇಶಕರು. ಜನಪ್ರಿಯ ಸಂಗೀತ ನಿರ್ದೇಶಕ ಅನಿರುದ್ಧ್​ ರವಿಚಂದರ್​ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಶಿವ ರಾಜ್‌ಕುಮಾರ್‌, ಮೋಹನ್‌ಲಾಲ್‌, ರಮ್ಯಾ ಕೃಷ್ಣನ್, ಜಾಕಿ ಶ್ರಾಫ್, ವಸಂತ್ ರವಿ, ಯೋಗಿ ಬಾಬು ಮತ್ತು ರೆಡಿಂಗ್ ಕಿಂಗ್ಸ್‌ಲಿ ಕೂಡ ಇದ್ದಾರೆ. ಕಾವಾಲಯ್ಯಾ ಹಾಡಿನಲ್ಲಿ ತಮನ್ನಾ ಭಾಟಿಯಾ ಅವರ ಆಕರ್ಷಕ ನೃತ್ಯವು ಈಗಾಗಲೇ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಈ ಹಾಡಿಗೆ ಹಲವು ನಟಿಯರು ಕೂಡ ಸ್ಟೆಪ್ಸ್​ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.

Exit mobile version