ಕೋಲ್ಕತ್ತಾ: ಸತತ ಸೋಲಿನಿಂದ ಕಂಗೆಟ್ಟಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vS KKR) ತಂಡ ನಾಳೆ ನಡೆಯುವ ಐಪಿಎಲ್ನ(IPL 2024) ಡಬಲ್ ಹೆಡರ್ನ ಹಗಲು ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಗೋ ಗ್ರೀನ್ ಅಭಿಯಾನದ ಭಾಗವಾಗಿ ಆರ್‌ಸಿಬಿ ಈ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ(RCB Green Jersey) ಆಡಲಿದೆ. ಆರ್‌ಸಿಬಿ ಈ ಜೆರ್ಸಿಯಲ್ಲಿ ಆಡಿದ ಪಂದ್ಯಗಳಲ್ಲಿ ಎಷ್ಟು ಸೋಲು ಮತ್ತು ಗೆಲುವು ಕಂಡಿದೆ ಎನ್ನುವ ಮಾಹಿತಿ ಇಂತಿದೆ.
13 ಪಂದ್ಯಗಳಲ್ಲಿ ಕಣಕ್ಕೆ
ಆರ್‌ಸಿಬಿ ಈ ಜೆರ್ಸಿಯಲ್ಲಿ ಕಣಕ್ಕಿಳಿದ ಬಹುತೇಕ ಪಂದ್ಯದಲ್ಲಿ ಸೋಲು ಕಂಡಿದೆ. ಆರ್‌ಸಿಬಿ ಐಪಿಎಲ್‌ನಲ್ಲಿ ಹಸಿರು ಜೆರ್ಸಿಯಲ್ಲಿ ಇದುವರೆಗೆ ಒಟ್ಟು 13 ಪಂದ್ಯಗಳನ್ನು ಆಡಿದೆ. ಗೆದ್ದಿದ್ದು ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆದ್ದಿದೆ. ಇನ್ನುಳಿದ 8 ಪಂದ್ಯಗಳಲ್ಲಿ ಸೋಲನುಭವಿಸಿದೆ. ಒಂದು ಪಂದ್ಯ ಫಲಿತಾಂಶ ಕಂಡಿಲ್ಲ. ಅದರಲ್ಲೂ ಈ ಬಾರಿ ಆರ್‌ಸಿಬಿ ಆಡಿದ 7 ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಸಾಧಿಸಿದೆ. ಹೀಗಾಗಿ ಕೆಕೆಆರ್ ವಿರುದ್ಧ ಗೆಲುವು ಸಾಧಿಸೀತೇ, ಈ ಉಡುಗೆ ಆರ್‌ಸಿಬಿ ಪಾಲಿಗೆ ಅದೃಷ್ಟ ತಂದೀತೇ ಎಂಬುದು ಎಲ್ಲರ ನಿರೀಕ್ಷೆ.
“ಬಣ್ಣಗಳ ಬದಲಾವಣೆಯು ಅದೃಷ್ಟದಲ್ಲಿ ಬದಲಾವಣೆಯನ್ನು ತರುತ್ತದೆ ಎಂದು ಭಾವಿಸುತ್ತೇವೆ!” ಎಂದು ಬರೆದಿಕೊಂಡು ಮುಂದಿನ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ತಂಡ ಕಣಕ್ಕಿಳಿಯಲಿದೆ ಎನ್ನುವ ವಿಚಾರವನ್ನು ಫ್ರಾಂಚೈಸಿ ತನ್ನ ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ IPL 2024 : ಬಿಸಿಸಿಐ ನಿಯಮ ಉಲ್ಲಂಘನೆ; ಋತುರಾಜ್, ರಾಹುಲ್ಗೆ ದಂಡ
Hope change of colours brings change in fortunes! 💚
— Royal Challengers Bengaluru (@RCBTweets) April 18, 2024
See you on 21st in Kolkata, 12th Man Army. 🫡#PlayBold #ನಮ್ಮRCB #IPL2024 #KKRvRCB pic.twitter.com/VCiABRGNol
ಒಂದು ಬಾರಿ ನೀಲಿ ಜರ್ಸಿಯಲ್ಲಿ ಆಡಿತ್ತು
2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್‌ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ. ಆದರೆ 2021ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು ತಂಡವು ಒಂದು ಪಂದ್ಯದಲ್ಲಿ ನೀಲಿ ಜರ್ಸಿಯಲ್ಲಿ ಆಡಿತ್ತು. ಇದಕ್ಕೆ ಕಾರಣ ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಈ ನೀಲಿ ಜೆರ್ಸಿ ಧರಿಸಿ ಆಡಿತ್ತು.
Last year as part of our Go Green Initiative, we had promised to rejuvenate lakes in Bengaluru and help people in the surrounding land lead a better life. With the help of our partners and the authorities, we have lived the dream. 🐟🏞️🌳
— Royal Challengers Bengaluru (@RCBTweets) April 19, 2024
Here’s more on @bigbasket_com presents… pic.twitter.com/yZONZ8V3db
ಈ ಪಂದ್ಯ ನಿರ್ಣಾಯಕ
ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯದಿಂದಲೇ ಗೆಲುವಿನ ಅಭಿಯಾನ ಆರಂಭಿಸಬೇಕಿದೆ. ಆದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಕೆಕೆಆರ್ ವಿರುದ್ಧ ಸೋತರೆ ಆರ್‌ಸಿಬಿ ಈ ಬಾರಿಯ ಟೂರ್ನಿಯಿಂದ ಹೊರ ಬೀಳಲಿದೆ.