Site icon Vistara News

RCB vs SRH: ಆದೇ ರಾಗ ಅದೇ ಹಾಡಿನಿಂದ ಹೊರ ಬರಬೇಕಿದೆ ಆರ್​ಸಿಬಿ

RCB vs SRH

ಬೆಂಗಳೂರು: ಸೋಮವಾರದ ಐಪಿಎಲ್​ ಪಂದ್ಯದಲ್ಲಿ ಸೋಲಿನಿಂದ ಕಂಗೆಟ್ಟಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB vs SRH) ಮತ್ತು ಬಲಿಷ್ಠ ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ತಂಡಗಳು ಮುಖಾಮುಖಿಯಾಗಿದೆ. ಪ್ಲೇ ಆಫ್ ಪ್ರವೇಶ ಜೀವಂತವಿರಿಸುವ ನಿಟ್ಟಿನಲ್ಲಿ ಆರ್​ಸಿಬಿಗೆ(Royal Challengers Bengaluru) ಈ ಪಂದ್ಯ ಮಸ್ಟ್​ ವಿನ್​ ಗೇಮ್​.

ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಬೌಲಿಂಗ್‌ ಪಡೆಯಂತೂ ಸಂಪೂರ್ಣ ಮೊನಚು ಕಳೆದುಕೊಂಡಿದೆ. ಇದು, ಸಹಜವಾಗಿ ಆರ್‌ಸಿಬಿಯನ್ನು ಸೋಲಿನ ಸುಳಿಗೆ ತಳ್ಳಿದೆ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟವೇ ಬರುತ್ತಿಲ್ಲ. ಕೊಹ್ಲಿ ಮಿಂಚಿರುವ ಪಂದ್ಯಗಳಲ್ಲಿ ನಾಯಕ ಡು ಪ್ಲೆಸಿಸ್​ ಮತ್ತು ಇರತ ಆಟಗಾರರು ಮಿಂಚುತ್ತಿಲ್ಲ.​ ಕೊಹ್ಲಿ ಆಡಿರುವ 3 ಪಂದ್ಯದಲ್ಲಿ ಒಂದು ಶತಕವೂ ಸೇರಿದಂತೆ 319 ರನ್‌ ಬಾರಿಸಿದ್ದಾರೆ. ತಂಡದಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​, ಕ್ಯಾಮರೂನ್​ ಗ್ರೀನ್​, ಮೊಹಮ್ಮದ್​ ಸಿರಾಜ್​ ಇಂತಹ ತಾರಾ ಆಟಗಾರರಿದ್ದರೂ ಇವರ ಆಟ ಗೆಲುವಾಗಿ ಪರಿವರ್ತನೆಯಾಗುತ್ತಿಲ್ಲ.

ಸದ್ಯದ ಪರಿಸ್ಥಿತಿಯಲ್ಲಿ ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 6 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 8 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ.

ಇದನ್ನೂ ಓದಿ IPL 2024: ನೆಚ್ಚಿನ ವಾಂಖೆಡೆ ಸ್ಟೇಡಿಯಂನಲ್ಲಿ ಕೊನೆಯ ಪಂದ್ಯವನ್ನಾಡಲು ಸಜ್ಜಾದ ಧೋನಿ

ನಂಬಿಕೆ ಕಳೆದುಕೊಂಡ ಅಭಿಮಾನಿಗಳು


ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್​ ಕೊಹ್ಲಿ iದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಹೇಳುವು ಮೂಲಕ ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಇದೀಗ ಸತತ ಸೋಲಿನಿಂದ ಸಾಮಾಜಿಕ ಜಾಲತಾಣದಲ್ಲಿ ಮುಗಿದು ಹೋದ ಅಧ್ಯಾಯ ಅಂತ ಅಭಿಮಾನಿಗಳು ವ್ಯಂಗ್ಯವಾಗಿ ಹೇಳತೊಡಗಿದ್ದಾರೆ. ತವರಿನಲ್ಲಿ ಈ ಪಂದ್ಯ ನಡೆಯುತ್ತಿದ್ದರೂ ಕೂಡ ಆರ್​ಸಿಬಿ ಮೇಲೆ ಸ್ವತಃ ಅಭಿಮಾನಿಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಈಗಾಗಲೇ ತವರಿನಲ್ಲಿ ಆಡಿದ 2 ಪಂದ್ಯಗಳಲ್ಲಿ ಸೋಲು ಕಂಡಿತ್ತು.

ಹೈದರಾಬಾದ್​ ಬಲಿಷ್ಠ


ಹೇಳಿ ಕೇಳಿ ಚಿನ್ನಸ್ವಾಮಿ ಮೈದಾನದಲ್ಲಿ ರನ್​ ಮಳೆಯೇ ಹರಿಯುತ್ತದೆ. 277 ರನ್​ ಐಪಿಎಲ್​ನಲ್ಲಿ ದಾಖಲೆ ಬರೆದಿರುವ, ಬಲಿಷ್ಠ ಬ್ಯಾಟಿಂಗ್​ ಲೈನ್​ ಅಪ್​ ಹೊಂದಿರುವ ಹೈದರಾಬಾದ್​ಗೆ ಇದು ಹೇಳಿ ಮಾಡಿಸಿದ ಸ್ಟೇಡಿಯಂ. ಅದರಲ್ಲೂ ಕಳಪೆ ಬೌಲಿಂಗ್​ ಹೊಂದಿರುವ ಆರ್​ಸಿಬಿ ವಿರುದ್ಧ ಮೊದಲ ಬ್ಯಾಟಿಂಗ್​ ನಡೆಸಿದರೆ 300 ರನ್​ ಬಾರಿಸುವ ಸಾಮರ್ಥವೂ ತಂಡಕ್ಕಿದೆ.

25 ವರ್ಷದ ಎಡಗೈ ದಾಂಡಿಗ ಅಭಿಷೇಕ್​ ಶರ್ಮ, ಟ್ರಾವಿಸ್​ ಹೆಡ್​​ ಜಿದ್ದಿಗೆ ಬಿದ್ದವತರಂತೆ ಬ್ಯಾಟ್​ ಬೀಸಿ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಹೆನ್ರಿಚ್​ ಕ್ಲಾಸೆನ್​, ಐಡೆನ್​ ಮಾರ್ಕ್ರಮ್​ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ನಾಯಕ ಪ್ಯಾಟ್​ ಕಮಿನ್ಸ್​, ಭುವನೇಶ್ವರ್​ ಕುಮಾರ್​, ಟಿ. ನಟರಾಜನ್​ ಎದುರಾಳಿಗಳನ್ನು ಕಟ್ಟಿ ಹಾಕುವಲ್ಲಿ ಸಮರ್ಥರಿದ್ದಾರೆ. ಜಯ್​ದೇವ್​ ಉನಾದ್ಕತ್​ ಮಾತ್ರ ಕೊಂಚ ದುಬಾರಿಯಾಗುತ್ತಿದ್ದಾರೆ.

Exit mobile version