Site icon Vistara News

WPL 2023 : ಮುಂಬಯಿ ಇಂಡಿಯನ್ಸ್​ ತಂಡಕ್ಕೆ156 ರನ್​ ಗೆಲುವಿನ ಗುರಿಯನ್ನೊಡ್ಡಿದ ಆರ್​ಸಿಬಿ ಮಹಿಳೆಯರು

RCB women set a target of 156 runs for Mumbai Indians

#image_title

ಮುಂಬಯಿ: ಅಗ್ರಕ್ರಮಾಂಕದ ಆಟಗಾರ್ತಿಯರ ವೈಫಲ್ಯದ ಹೊರತಾಗಿಯೂ ಕೆಳ ಕ್ರಮಾಂಕದ ಬ್ಯಾಟರ್​ಗಳ ಸಂದರ್ಭೋಚಿತ ಬ್ಯಾಟಿಂಗ್​ ನೆರವು ಪಡೆದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಮಹಿಳೆಯರ ಪ್ರೀಮಿಯರ್​ ಲೀಗ್​​ನ (WPL 2023) ತನ್ನ ಎರಡನೇ ಪಂದ್ಯದಲ್ಲಿ ಎದುರಾಳಿ ಮುಂಬಯಿ ಇಂಡಿಯನ್ಸ್​ ತಂಡಕ್ಕೆ. 156 ರನ್​ ಗೆಲುವಿನ ಗುರಿಯನ್ನೊಡ್ಡಿದೆ. 28 ರನ್ ಬಾರಿಸಿ ರಿಚಾ ಘೋಷ್​ ಗರಿಷ್ಠ ಸ್ಕೋರರ್​ ಎನಿಸಿಕೊಂಡರು.

ಬ್ರಬೋರ್ನ್​ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಆರ್​​ಸಿಬಿ ನಾಯಕಿ ಸ್ಮೃತಿ ಮಂಧಾನಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆರ್​ಸಿಬಿ ಆಟಗಾರರು ಸಮರ್ಥ ಪ್ರದರ್ಶನ ನೀಡಲು ವಿಫಲಗೊಂಡು 18.4 ಓವರ್​ಗಳಲ್ಲಿ 155 ರನ್​ಗಳಿಗೆ ಆಲ್ಔಟ್​ ಅಯಿತು. ಮಂಬಯಿ ಬೌಲರ್​ಗಳಾದ ಸೈಕಾ ಇಶಾಖ್​ (26 ರನ್​ಗಳಿಗೆ 2 ವಿಕೆಟ್​) ಹಾಗೂ ಹೇಲಿ ಮ್ಯಾಥ್ಯೂಸ್​ (28 ರನ್​ಗಳಿಗೆ 3 ವಿಕೆಟ್) ಹಾಗೂ ಅಮೇಲಿಯಾ ಕೆರ್​ (30 ರನ್​ಗಳಿಗೆ 2 ವಿಕೆಟ್​) ಬೌಲಿಂಗ್​ ದಾಳಿಗೆ ಆರ್​ಸಿಬಿ ಪಡೆ ತತ್ತರಿಸಿತು.

ಇದನ್ನೂ ಓದಿ : WPL 2023 : ಬಟರ್​ ಚಿಕನ್ ಆಸೆಗೆ ಮ್ಯಾಚ್ ಗೆಲ್ಲಿಸಿದ್ದ ಗ್ರೇಸ್​ ಹ್ಯಾರಿಸ್​!

ಬ್ಯಾಟಿಂಗ್ ಆರಂಭಿಸಿದ ಆರ್​ಸಿಬಿ ಪರ ಸ್ಮೃತಿ ಮಂಧಾನಾ (23) ಹಾಗೂ ಸೋಫಿ ಡಿವೈನ್​ (16) ಮೊದಲ ವಿಕೆಟ್​ಗೆ 39 ರನ್​ ಬಾರಿಸಿ ವಿಶ್ವಾಸ ಮೂಡಿಸಿದರು. ಆದರೆ, ಆ ಬಳಿಕ ಸತತವಾಗಿ ವಿಕೆಟ್ ಕಳೆದುಕೊಂಡು 43 ರನ್​ಗೆ 4 ವಿಕೆಟ್ ನಷ್ಟ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ಬಳಿಕ ಆಡಲು ಇಳಿದ ರಿಚಾ ಘೋಷ್​ (28), ಕನಿಕಾ ಅಹುಜಾ (22), ಶ್ರೇಯಾಂಕಾ ಪಾಟೀಲ್​ (23) ಹಾಗೂ ಮೇಗನ್​ ಶೂಟ್​ (20) ಕನಿಷ್ಠ ಮೊತ್ತಕ್ಕೆ ತಂಡ ಆಲ್​ಔಟ್​ ಆಗದಂತೆ ನೋಡಿಕೊಂಡಿತು. ಅದಕ್ಕಿಂತ ಮೊದಲ ಎಲಿಸ್​ ಪೆರಿ 13 ರನ್​ಗಳಿಗೆ ವಿಕೆಟ್​ ಒಪ್ಪಿಸಿದರು.

Exit mobile version