Site icon Vistara News

WPL 2024 : ಡಬ್ಲ್ಯುಪಿಎಲ್​ ಟ್ರೋಫಿ ಗೆದ್ದು ಆರ್​ಸಿಬಿ ಮರ್ಯಾದೆ ಉಳಿಸಿದ ಹೆಣ್ಮಕ್ಕಳು!

RCB Team Champion

ನವ ದೆಹಲಿ : ಆರ್​ಸಿಬಿ ತಂಡದ ಮರ್ಯಾದೆ ಉಳಿಸಲು ಕೊನೆಗೂ ಹೆಣ್ಮಕ್ಕಳೇ ಬರಬೇಕಾಯಿತು. ಮಹಿಳೆಯರ ಪ್ರೀಮಿಯರ್​ ಲೀಗ್​ನ ಎರಡನೇ ಆವೃತ್ತಿಯಲ್ಲಿ ಸ್ಮೃತಿ ಮಂಧಾನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಲ್ಲಿನ ಅರುಣ್ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಇದರೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮತ್ತೊಂದು ಬಾರಿ ನಿರಾಸೆ ಎದುರಿಸಿತು. ಕಳೆದ ಬಾರಿಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂಬಯಿ ವಿರುದ್ಧ ಸೋತು ರನ್ನರ್​ ಅಪ್​ ಸ್ಥಾನ ಪಡೆದುಕೊಂಡಿತು.

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 18.3 ಓವರ್​ಗಳಲ್ಲಿ 113 ರನ್​ಗಳಿಗೆ ಆಲ್​ಔಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್​ಸಿಬಿ ತಂಡ 19.3 ಓವರ್​ಗಳಲ್ಲಿ 2 ವಿಕೆಟ್​ ಕಳೆದುಕೊಂಡು 115 ರನ್ ಬಾರಿಸಿ 8 ವಿಕೆಟ್​ ವಿಜಯ ಸಾಧಿಸಿತು.

ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್​ಸಿಬಿ ತಂಡ ಉತ್ತಮ ಆರಂಭ ಪಡೆದ ಹೊರತಾಗಿಯೂ ಸರಾಸರಿ ರನ್​ಗಳನ್ನು ಉಳಿಸಿಕೊಳ್ಳುವಲ್ಲಿ ವಿಫಲಗೊಂಡಿತು. ಆದಾಗ್ಯೂ ನಿಧಾನವಾಗಿ ರನ್​ ಪೇರಿಸಿ ಗೆಲುವು ಸಾಧಿಸಿದರು.

ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಭರ್ಜರಿ ಆರಂಭ ಪಡೆಯಿತು. ಕೇವಲ 71. ಓವರ್​ಗಳಲ್ಲಿ 64 ರನ್ ಬಾರಿಸಿತು. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ 27 ಎಸೆಗಳಲ್ಲಿ 44 ರನ್ ಬಾರಿಸಿ ಮಿಂಚಿದರು. ಆದರೆ, ಅಬ್ಬರದ ಆಟ ಮುಂದುವರಿಸಲು ಹೋದ ಅವರು ಮೊಲಿನೆಕ್ಸ್ ಎಸೆತಕ್ಕೆ ಶ್ರೇಯಾಂಕ ಪಾಟೀಲ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆ ಬಳಿಕ ಡೆಲ್ಲಿ ಸತತವಾಗಿ ಎರಡು ವಿಕೆಟ್​ಗಳನ್ನು ಕಳೆದುಕೊಂಡಿತು. ಉತ್ತಮ ಫಾರ್ಮ್​ನಲ್ಲಿದ್ದ ಜೆಮಿಮಾ ರೋಡ್ರಿಗಸ್​ ಹಾಗೂ ಅಲೈಸ್​ ಕಾಪ್ಸಿ ಶೂನ್ಯಕ್ಕೆ ಔಟಾದರು. ಮೊಲಿನೆಕ್ಸ್ ಒಂದೇ ಓವರ್​ನಲ್ಲಿ 3 ವಿಕೆಟ್​ ಪಡೆಯುವ ಮೂಲಕ ಡೆಲ್ಇಯ ಅಬ್ಬರ ಕಡಿಮೆ ಮಾಡಿದರು.

ಇದನ್ನೂ ಓದಿ: Jofra Archer : ಆರ್​ಸಿಬಿ ಪರ ಆಡಲಿದ್ದಾರಾ ಜೋಪ್ರಾ ಆರ್ಚರ್; ಇಲ್ಲಿದೆ ದೊಡ್ಡ ಅಪ್​ಡೇಟ್​​

ಬಳಿಕ ಮರಿಜ್ನೆ ಕಾಪ್​ (8) ಹಾಗೂ ಜೆಸ್ ಜೊನಾಸೆನ್​ 3 ರನ್ ಬಾರಿಸಿದರು. ರಾಧಾ ಯಾದವ್​ ನಂತರದಲ್ಲಿ 9 ಎಸೆತಕ್ಕೆ 12 ರನ್ ಬಾರಿಸಿದರು. ಮಿನ್ನು ಮಣಿ 5 ಹಾಗೂ ಅರುಂಧತಿ ರೆಡ್ಡಿ 10, ಶಿಖಾ ಪಾಂಡೆ 5 ರನ್ ಬಾರಿಸಿದರು. ಆರ್​ಸಿಬಿ ಪರ ಶ್ರೇಯಾಂಕ ಪಾಟೀಲ್​ 12 ರನ್ ನೀಡಿ 4 ವಿಕೆಟ್​ ಕಬಳಿಸಿದರೆ ಸೋಫಿ ಮೊಲಿನೆಕ್ಸ್​ 20 ರನ್​ ನೀಡಿ 3 ವಿಕೆಟ್​ ತಮ್ಮದಾಗಿಸಿಕೊಂಡರು. ಆಶಾ ಶೋಭನಾ ಕೂಡ 14 ರನ್​ಗೆ 2 ವಿಕೆಟ್​ ಉರುಳಿಸಿದರು.

Exit mobile version