ಮುಂಬಯಿ: ಡಬ್ಲ್ಯುಪಿಎಲ್ನ (WPL 2023) ಎಂಟನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಟಾಸ್ ಗೆದ್ದಿರುವ ಆರ್ಸಿಬಿ ಬಳಗ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸ್ಮೃತಿ ಮಂಧಾನಾ ನೇತೃತ್ವದ ಆರ್ಸಿಬಿ ತಂಡ ತನ್ನ ಮೊದಲ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಕಾರಣ ಈ ಪಂದ್ಯದಲ್ಲಿ ಗೆದ್ದೇ ಗೆಲ್ಲಬೇಕೆಂಬ ಅನಿವಾರ್ಯತೆಗೆ ಒಳಗಾಗಿದೆ. ಪ್ರಮುಖವಾಗಿ ಬೌಲಿಂಗ್ ವಿಭಾಗ ಹೆಚ್ಚು ಬಲಿಷ್ಠವಾಗಬೇಕಾಗಿದೆ.
ಬ್ರಬೋರ್ನ್ ಪಿಚ್ ಬ್ಯಾಟಿಂಗ್ಗೆ ನೆರವಾಗಲಿರುವ ಕಾರಣ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದೆ ಎಂದು ಸ್ಮೃತಿ ಮಂಧಾನಾ ಹೇಳಿದ್ದಾರೆ. ದೊಡ್ಡ ಮೊತ್ತದ ಸ್ಕೋರ್ ಬಾರಿಸಿ ಜಯಿಸುವುದೇ ನನ್ನ ಉದ್ದೇಶ ಎಂಬುದಾಗಿ ಅವರು ಹೇಳಿದ್ದಾರೆ. ಇದೇ ವೇಳೆ ಯುಪಿ ತಂಡದ ನಾಯಕಿ ಅಲಿಸಾ ಹೀಲಿ, ನಾನು ಟಾಸ್ ಗೆದ್ದರೂ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ತಿದ್ದೆ ಎಂದು ನುಡಿದಿದ್ದಾರೆ. ಆರ್ಸಿಬಿ ತಂಡದಲ್ಲಿ ಮೂರು ಬದಲಾವಣೆಗಳಾಗಲಿವೆ. ಇದೇ ವೇಳೆ ಯುಪಿ ತಂಡಕ್ಕೆ ಗ್ರೇಸ್ ಹ್ಯಾರಿಸ್ ವಾಪಸಾಗಿದ್ದ ಶಬ್ನಮ್ ಇಸ್ಮಾಯಿಲ್ ತಂಡದಿಂದ ಹೊರಕ್ಕೆ ಉಳಿದಿದ್ದಾರೆ.
ಇದನ್ನೂ ಓದಿ : WPL 2023 : ಮುಂಬಯಿ ಇಂಡಿಯನ್ಸ್ ಅಜೇಯ, ಡೆಲ್ಲಿ ವಿರುದ್ಧ 8 ವಿಕೆಟ್ ಭರ್ಜರಿ ಜಯ
ತಂಡಗಳು ಇಲ್ಲಿವೆ
ಆರ್ಸಿಬಿ: ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರಿಚಾ ಘೋಷ್ (ವಿಕೆಟ್ಕೀಪರ್), ಹೇದರ್ ನೈಟ್, ಕನಿಕಾ ಅಹುಜಾ, ಶ್ರೇಯಾಂಕ ಪಾಟೀಲ್, ಎರಿನ್ ಬರ್ನ್ಸ್, ಕೋಮಲ್ ಜಂಜಾದ್, ರೇಣುಕಾ ಸಿಂಗ್ ಠಾಕೂರ್, ಸಹನಾ ಪವಾರ್.
ಯುಪಿ ವಾರಿಯರ್ಸ್: ಅಲಿಸಾ ಹೀಲಿ (ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಗ್ರಾತ್, ದೀಪ್ತಿ ಶರ್ಮಾ, ಗ್ರೇಸ್ ಹ್ಯಾರಿಸ್, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್.