Site icon Vistara News

IPL 2024 : ಆರ್​ಸಿಬಿ ತಂಡದ ವೀಕ್​ನೆಸ್​ ಬಹಿರಂಗ ಮಾಡಿದ ಎಬಿಡಿ ವಿಲಿಯರ್ಸ್​​

Royal Challengers Bangalore

ಬೆಂಗಳೂರು: ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಐಪಿಎಲ್ 2024 ರ (IPL 2024 ) ಹರಾಜಿಗೆ ಮುಂಚಿತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಕೆಲವು ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡುವ ಮೂಲಕ ದೊಡ್ಡ ಹೆಜ್ಜೆ ಇಟ್ಟಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ಆಟಗಾರರನ್ನು ಉಳಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ತೆಗೆದುಕೊಂಡು ನಿರ್ಧಾರಗಳು ಅಭಿಮಾನಿಗಳು ಮತ್ತು ತಜ್ಞರಲ್ಲಿ ಸಾಕಷ್ಟು ಆಸಕ್ತಿ ಹುಟ್ಟುಹಾಕಿದೆ. ಆಸ್ಟ್ರೇಲಿಯಾದ ಅನುಭವಿ ಬೌಲರ್ ಜೋಶ್ ಹೇಜಲ್​​ವುಡ್​ ಮತ್ತು ಶ್ರೀಲಂಕಾದ ಪ್ರತಿಭಾನ್ವಿತ ಸ್ಪಿನ್ನರ್ ವನಿಂದು ಹಸರಂಗ ಅವರನ್ನು ಬಿಡುಗಡೆ ಮಾಡಿರುವುದು ಚರ್ಚೆಯ ಗಮನಾರ್ಹ ಅಂಶವಾಗಿದೆ.

ಐಪಿಎಲ್ 2024 ರಲ್ಲಿ ಆರ್​ಸಿಬಿ ಬೌಲಿಂಗ್ ಮೇಲೆ ಇದು ಹೇಗೆ ಪರಿಣಾಮ ಬೀರಬಹುದು ಎಂಬುದರ ಕುರಿತು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಮತ್ತು ಆರ್​ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಅವರು ಹಸರಂಗ, ಹರ್ಷಲ್ ಪಟೇಲ್ ಮತ್ತು ಹೇಜಲ್​ವುಡ್​ ಅವರ ಬಿಡುಗಡೆಯ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸಿದ್ದಾರೆ. ಪಂದ್ಯಗಳನ್ನು ಗೆಲ್ಲುವಲ್ಲಿ ಅವರ ಮಹತ್ವದ ಪಾತ್ರಗಳನ್ನು ಎತ್ತಿ ತೋರಿಸಿದ್ದಾರೆ.

ಬೌಲಿಂಗ್ ಸಮಸ್ಯೆ

ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್​​ನಲ್ಲಿ ಮಾತನಾಡಿ “ಆರ್​ಸಿಬಿಯ ಬೌಲಿಂಗ್​ ಚಿಂತೆಗೀಡು ಮಾಡುವ ವಿಷಯವಾಗಿದೆ. ಅಲ್ಲಿ ಮೊಹಮ್ಮದ್ ಸಿರಾಜ್, ರೀಸ್ ಟಾಪ್ಲೆ ಅವರಂಥ ಕೆಲವು ಅನುಭವಿಗಳಿದ್ದಾರೆ. ಆದರೆ ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ನೋಡಿದರೆ, ವನಿಂದು ಹಸರಂಗ, ಹರ್ಷಲ್ ಪಟೇಲ್ ಮತ್ತು ಜೋಶ್ ಹೇಜಲ್ವುಡ್ ಅವರನ್ನು ಬಿಟ್ಟಿರುವುದು ಕಾಳಜಿಯ ಸಂಗತಿ ಎಂದು ಹೇಳಿದ್ದಾರೆ.

ಬೌಲಿಂಗ್ ಲೈನ್ಅಪ್​​ ನ್ನು ನಿಯಂತ್ರಿಸುವಲ್ಲಿ ಹೇಜಲ್ವುಡ್ ಅವರ ಕೌಶಲ್ಯವನ್ನು ಡಿವಿಲಿಯರ್ಸ್ ಗಮನಸೆಳೆದರು. ಈ ನಿರ್ಗಮನಗಳು ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್​ಸಿಬಿಯ ಬೌಲಿಂಗ್ ಶಕ್ತಿಯ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : KL Rahul : ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾರತ ತಂಡಕ್ಕೆ ಕನ್ನಡಿಗ ನಾಯಕ

ಆ ಮೂವರು ಕಳೆದ ಎರಡು ಋತುಗಳಲ್ಲಿ ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ವಿಶೇಷವಾಗಿ ಹೇಜಲ್ವುಡ್ ಅವರು ಆ ಬೌಲಿಂಗ್ ಲೈನ್ಅಪ್​​ ನಿಯಂತ್ರಿಸಲು ವಿಭಿನ್ನ ಮಾರ್ಗ ಹೊಂದಿದ್ದರು. ಆರ್​ಸಿಬಿಯ ಬೌಲಿಂಗ್ ಹಲವು ವರ್ಷಗಳಿಂದ ದೌರ್ಬಲ್ಯದ ಕ್ಷೇತ್ರವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಹೌದು, ಕೆಲವೊಂದು ಬಾರಿ ಬ್ಯಾಟರ್​ಗಳಿಗೆ ಚಿಂತೆಗೀಡಾಗುವ ಸಂಗತಿಯಾಗಿತ್ತು ಎಂಬುದಾಗಿ ವಿಲಿಯರ್ಸ್​ ಹೇಳಿದ್ದಾರೆ.

ತಂಡವು ಜತೆಯಾಗಿ ಕೆಲಸ ಮಾಡಬೇಕು. ಪರಸ್ಪರ ಅರ್ಥಮಾಡಿಕೊಳ್ಳಬೇಕು. ಆಗಾಗ್ಗೆ ಕ್ಷುಲ್ಲಕ ತಪ್ಪುಗಳನ್ನು ಮಾಡುವುದನ್ನು ನಿಲ್ಲಿಸಬೇಕು. ಶಿಸ್ತು ಬದ್ಧವಾಗಿ ಒತ್ತಡವನ್ನು ನಿಯಂತ್ರಿಸುವ ಕೆಲಸ ಮಾಡಬೇಕು. ಯಾಕೆಂದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವುದು ಕಷ್ಟ ಎಂಬುದಾಗಿ ವಿಲಿಯರ್ಸ್ ಹೇಳಿದ್ದಾರೆ.

ಮುಂಬರುವ ಐಪಿಎಲ್ 2024 ಮಿನಿ ಹರಾಜಿಗಾಗಿ ಆರ್​ಸಿಬಿ ತನ್ನ ಪರ್ಸ್​​ನಲ್ಲಿ 40.75 ಕೋಟಿ ರೂ.ಗಳನ್ನು ಹೊಂದಿದೆ. ಅದರಲ್ಲಿ ಕ್ಯಾಮೆರೂನ್​ ಗ್ರೀನ್​ಗಾಗಿ 17.5ಕೋಟಿ ರೂಪಾಯಿ ವಿನಿಯೋಗಿಸಿದೆ. ಅಲ್ಲಿ ಅವರು ನಾಲ್ಕು ವಿದೇಶಿ ಆಟಗಾರರು ಸೇರಿದಂತೆ ಏಳು ಆಟಗಾರರನ್ನು ಭರ್ತಿ ಮಾಡಬೇಕಾಗುತ್ತದೆ

Exit mobile version