Site icon Vistara News

IPL 2023 : ಆರ್​ಸಿಬಿ ತಂಡದ ವೇಗದ ಬೌಲರ್​ ಮೊದಲ ಏಳು ಪಂದ್ಯಗಳಿಗೆ ಅಲಭ್ಯ; ಏನಾಯಿತು ಅವರಿಗೆ?

RCB's fast bowler is unavailable for the first seven matches; What happened to them?

#image_title

ಬೆಂಗಳೂರು : ಹೇಗಾದರೂ ಮಾಡಿ ಒಂದು ಕಪ್​ ಗೆಲ್ಲಬೇಕು ಎಂಬ ಹುಮ್ಮಸ್ಸಿನಲ್ಲಿರುವ ಆರ್​ಸಿಬಿ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿದೆ. ತಂಡದ ಪ್ರಧಾನ ವೇಗದ ಬೌಲರ್ ಜೋಶ್​ ಹೇಜಲ್​ವುಡ್​ ಗಾಯದ ಸಮಸ್ಯೆಯಿಂದಾಗಿ ಮೊದಲ ಏಳು ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಏಪ್ರಿಲ್​ 2ರಂದು ನಡೆಯಲಿರುವ ಮುಂಬಯಿ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ಅವರು ಪಾಲ್ಗೊಳ್ಳುವುದಿಲ್ಲ ಎಂದು ಆರ್​ಸಿಬಿ ತಂಡದ ಮೂಲಗಳು ತಿಳಿಸಿವೆ.

ಆಸ್ಟ್ರೇಲಿಯಾದ ವೇಗದ ಬೌಲರ್​ ಹೇಜಲ್​ವುಡ್ ಏಪ್ರಿಲ್​​ 14ರಂದು ಆರ್​ಸಿಬಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಆದರೆ, ತಕ್ಷಣವೇ ಅವರು ಆಡುವುದಿಲ್ಲ. ಬದಲಾಗಿ, ಒಂದಿಷ್ಟು ದಿನಗಳ ಕಾಲ ವಿಶ್ರಾಂತಿ ಪಡೆದು ಆಟ ಮುಂದುವರಿಸಲಿದ್ದಾರೆ ಎಂದು ಆರ್​ಸಿಬಿ ತಂಡದ ಮ್ಯಾನೇಜ್ಮೆಂಟ್ ಹೇಳಿದೆ. ಇದೇ ವೇಳೆ ಆಸ್ಟ್ರೇಲಿಯಾದವರೇ ಆಗಿರುವ ಗ್ಲೆನ್​ ಮ್ಯಾಕ್ಸ್​ವೆಲ್​ ಕೂಡ ಮೊದಲ ಪಂದ್ಯದಲ್ಲಿ ಆಡುವುದಿಲ್ಲ ಎಂದು ತಂಡದ ಮ್ಯಾನೇಜ್ಮೆಂಟ್​ ಮಾಹಿತಿ ನೀಡಿದೆ.

ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ತವರಿನ ಸರಣಿಯ ವೇಳೆ ಹೇಜಲ್​​ವುಡ್​ ಅಸ್ಥಿರಜ್ಜು ಸಮಸ್ಯೆ ಎದುರಿಸಿದ್ದರು. ಹೀಗಾಗಿ ಅಲ್ಲಿಂದ ಬಳಿಕ ಆಸ್ಟ್ರೇಲಿಯಾ ತಂಡದ ಪರವಾಗಿ ಆಡಿರಲಿಲ್ಲ. ಭಾರತ ಪ್ರವಾಸದ ವೇಳೆಯೂ ತಂಡದಲ್ಲಿ ಇರಲಿಲ್ಲ. ಇದೀಗ ಅವರು ನಿಧಾನವಾಗಿ ವಾಸಿಯಾಗಿದ್ದಾರೆ. ಆದರೆ, ಮೈದಾನಕ್ಕೆ ಇಳಿಯವುದಕ್ಕೆ ಸಂಪೂರ್ಣ ಫಿಟ್​ ಎನಿಸಿಕೊಂಡಿಲ್ಲ. ಹೀಗಾಗಿ ಏಪ್ರಿಲ್​ 14ರಂದು ತಂಡ ಸೇರಿಕೊಳ್ಳಲಿದ್ದಾರೆ ಎಂದು ಆರ್​ಸಿಬಿ ಮ್ಯಾನೇಜ್ಮೆಂಟ್ ಹೇಳಿದ್ದಾರೆ.

ಆರ್​ಸಿಬಿ ಕಪ್​ ಗೆಲ್ಲಲಿದೆ

ಬೆಂಗಳೂರು: ಆರ್​ಸಿಬಿಯ ಕಳೆದ 15 ವರ್ಷಗಳ ಐಪಿಎಲ್​ ಟ್ರೋಫಿಯ ಕನಸು ಈ ಬಾರಿ ನನಸಾಗಲಿದೆ ಎಂದು ಟೀಮ್​ ಇಂಡಿಯಾದ ಮಾಜಿ ಆಟಗಾರ ಸಂಜಯ್​ ಮಾಂಜ್ರೇಕರ್‌(sanjay manjrekar) ಭವಿಷ್ಯ ನುಡಿದಿದ್ದಾರೆ. ಆರ್​ಸಿಬಿ ತಂಡವನ್ನು ಈ ಸಲ ವಿರಾಟ್​ ಕೊಹ್ಲಿ ಚಾಂಪಿಯನ್​ ಮಾಡುವುದು ಖಚಿತ ಎಂದು ಅವರು ಹೇಳಿದ್ದಾರೆ.

ಆರ್‌ಸಿಬಿ ತಂಡ ಐಪಿಎಲ್‌ 2023 ಟೂರ್ನಿಗೆ ಸಮರ್ಥ ತಂಡವನ್ನು ಹೊಂದಿದೆ. ಅದರಲ್ಲೂ ವಿರಾಟ್ ಕೊಹ್ಲಿ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ಕಳೆದ ಬಾರಿ ಕೊಹ್ಲಿ ಅವರು ಬ್ಯಾಟಿಂಗ್​ ಫಾರ್ಮ್​ನಲ್ಲಿರದು ತಂಡಕ್ಕೆ ದೊಡ್ಡ ಹಿನ್ನಡೆಯಾಗಿತ್ತು. ಆದರೆ ಈ ಬಾರಿ ಅವರು ಉತ್ತಮ ಪ್ರದರ್ಶನ ತೋರಲಿದ್ದಾರೆ. ಅವರ ಈ ಬ್ಯಾಟಿಂಗ್​ ಪ್ರದರ್ಶನ ತಂಡವನ್ನು ಚಾಂಪಿಯನ್​ ಮಾಡಲಿದೆ ಎಂದು ಸಂಜಯ್​ ಮಾಂಜ್ರೇಕರ್‌ ವಿಶ್ವಾಸ ವ್ಯಕ್ತಪಡಿಸಿದರು.

2019ರ ಬಳಿಕ ಮೂರು ವರ್ಷಗಳ ಕಾಲ ಹೀನಾಯ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದ ವಿರಾಟ್‌ ಕೊಹ್ಲಿ, ಕಳೆದ 10 ತಿಂಗಳಲ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ತಮ್ಮ ಶ್ರೇಷ್ಠ ಲಯ ಕಂಡುಕೊಂಡಿದ್ದಾರೆ. ಟೆಸ್ಟ್‌ ಕ್ರಿಕೆಟ್, ಏಕದಿನ ಕ್ರಿಕೆಟ್‌ ಮತ್ತು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸಿರುವ ಕೊಹ್ಲಿ, 16ನೇ ಆವೃತ್ತಿಯ ಐಪಿಎಲ್​ನಲ್ಲಿಯೂ ಗರ್ಜಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಯಲು ಕಾತರಗೊಂಡಿದ್ದಾರೆ.

ಇದನ್ನೂ ಓದಿ IPL 2023: ಐಪಿಎಲ್​ನಲ್ಲಿ ಹಲವು ದಾಖಲೆ ಮೇಲೆ ಕಣ್ಣಿಟ್ಟ ವಿರಾಟ್​ ಕೊಹ್ಲಿ

ಹ್ಯಾಟ್ರಿಕ್​ ಗೋಲ್ಡನ್​ ಡಕ್​ ಸಂಕಟ ಎದುರಿಸಿದ್ದ ಕೊಹ್ಲಿ

15ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ ವಿರಾಟ್​ ಕೊಹ್ಲಿ ಅವರು ಹ್ಯಾಟ್ರಿಕ್‌ ಗೋಲ್ಡನ್‌ ಡಕ್‌ ಸಂಕಟಕ್ಕೆ ಸಿಲುಕಿ ಭಾರಿ ಟೀಕೆ ಎದುರಿಸಿದ್ದರು. ಆದರೆ ಗ್ಲೆನ್‌ ಮ್ಯಾಕ್ಸ್‌ವೆಲ್‌, ದಿನೇಶ್‌ ಕಾರ್ತಿಕ್‌, ಮೊಹಹಮ್ಮದ್‌ ಸಿರಾಜ್‌ ಅವರ ಸಾಹಸದಿಂದ ತಂಡ ಪ್ಲೇ-ಆಪ್​ಗೆ ಲಗ್ಗೆ ಇರಿಸಿತ್ತು. ಈ ಬಾರಿ ಕೊಹ್ಲಿಯೂ ಉತ್ತಮ ಫಾರ್ಮ್​ನಲ್ಲಿರುವುದರಿಂದ ತಂಡ ಎಲ್ಲ ರೀತಿಯಲ್ಲಿ ಬಲಿಷ್ಠವಾಗಿದೆ. ಇವರೆಲ್ಲ ಸೇರಿ ಮ್ಯಾಚ್‌ ವಿನ್ನಿಂಗ್​ ಪ್ರದರ್ಶನ ತೋರುವು ಸಾಧ್ಯತೆ ಇದೆ.

ಇದನ್ನೂ ಓದಿ IPL 2023: ಗುರು ಶಿಷ್ಯರ ಕಾದಾಟ; ಯಾರಿಗೆ ಒಲಿಯಲಿದೆ ಗೆಲುವಿನ ಶುಭಾರಂಭ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಆರ್‌​ಸಿಬಿ ತವರಿನಲ್ಲಿ ಆಡಬೇಕಿರುವ 7 ಪಂದ್ಯಗಳ ಪೈಕಿ 6 ಪಂದ್ಯಗಳನ್ನು ಏಪ್ರಿಲ್‌ ತಿಂಗಳಲ್ಲೇ ಆಡಲಿದೆ. ಒಂದು ಪಂದ್ಯ ಮಾತ್ರ ಮೇ 21ರಂದು ಗುಜರಾತ್‌ ವಿರುದ್ಧ ನಡೆಯಲಿದೆ. ಟೂರ್ನಿಯ ಮೊದಲಾರ್ಧದಲ್ಲೇ ತನ್ನ 6 ತವರಿನ ಪಂದ್ಯಗಳನ್ನು ಪೂರೈಸಲಿರುವ ಆರ್‌ಸಿಬಿ ತವರಿನ ಎಲ್ಲ ಪಂದ್ಯಗಳಲ್ಲಿಯೂ ಮೇಲುಗೈ ಸಾಧಿಸಬೇಕಿದೆ. ಇಲ್ಲವಾದಲ್ಲಿ ಆ ಬಳಿಕ ತವರಿನಾಚೆ ಆಡುವ ಪಂದ್ಯದಲ್ಲಿ ಸೋಲು ಕಂಡರೆ ಅಂಕಪಟ್ಟಿಯಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ. ಏಪ್ರಿಲ್ 2ರಂದು ನಡೆಯುವ ಮುಂಬೈ ವಿರುದ್ಧದ ಪಂದ್ಯದ ಮೂಲಕ ಆರ್​ಸಿಬಿ ತನ್ನ ಅಭಿಯಾನವನ್ನು ಆರಂಭಿಸಲಿದೆ.​

Exit mobile version