ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ತನ್ನ ಚೊಚ್ಚಲ ಪ್ರಶಸ್ತಿಯನ್ನು ಗೆಲ್ಲಲು ಎದುರು ನೋಡುತ್ತಿದೆ. ಅದಕ್ಕಾಗಿ ತಂಡದಲ್ಲಿ ಗಮನಾರ್ಹ ಬದಲಾವಣೆ ಮಾಡಲು ಮುಂದಾಗಿರುವ ಫ್ರಾಂಚೈಸಿ ಪ್ರಮುಖ ಆಟಗಾರರನ್ನು ಬಿಡುಗಡೆ ಮಾಡಿದೆ. ಪ್ರಮುಖವಾಗಿ ಮಧ್ಯಮ ವೇಗದ ಬೌಲರ್ ಹರ್ಷಲ್ ಪಟೇಲ್ ಹಾಗೂ ಲಂಕಾದ ಸ್ಪಿನ್ ಆಲ್ರೌಂಡರ್ ವಾನಿಂದು ಹಸರಂಗ ಅವರನ್ನು ತಂಡದಿಂದ ಕೈ ಬಿಟ್ಟಿದೆ. ನವೆಂಬರ್ 26 ಆಟಗಾರರ ಅಂತಿಮ ಪಟ್ಟಿ ಬಿಡುಗಡೆ ಮಾಡಲು ಕೊನೇ ದಿನವಾಗಿತ್ತು. ಸಂಜೆ 6 ಗಂಟೆ ವೇಳೆಗೆ ಫ್ರಾಂಚೈಸಿ ತನ್ನ ಉಳಿಸಿಕೊಂಡವರ ಹಾಗೂ ಬಿಡುಗಡೆ ಮಾಡಿದವರ ಪಟ್ಟಿಯನ್ನು ನೀಡಿದೆ.
ಹಿರಿಯ ಬ್ಯಾಟ್ಸ್ಮನ್ ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್ಸಿಬೊ ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಸೇರಿದಂತೆ ಹಲವಾರು ವಿನಾಶಕಾರಿ ಬ್ಯಾಟರ್ಗಳನ್ನು ಉಳಿಸಿಕೊಂಡಿದೆ. ವನಿಂದು ಹಸರಂಗ, ಜೋಶ್ ಹೇಜಲ್ವುಡ್, ಫಿನ್ ಅಲೆನ್ ಮತ್ತು ವೇಗಿ ಹರ್ಷಲ್ ಪಟೇಲ್ಗೆ ಗೇಟ್ ಪಾಸ್ ಕೊಟ್ಟಿದೆ.
ಬಿಡುಗಡೆ ಮಾಡಿದ ಆಟಗಾರರು
ಐಪಿಎಲ್ 2024 ಹರಾಜಿಗೆ ಮುಂಚಿತವಾಗಿ, ಆರ್ಸಿಬಿ ವನಿಂದು ಹಸರಂಗ, ಫಿನ್ ಅಲೆನ್, ಕೇದಾರ್ ಜಾಧವ್, ಹರ್ಷಲ್ ಪಟೇಲ್, ಮೈಕೆಲ್ ಬ್ರೇಸ್ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್ ಮತ್ತು ಸಿದ್ಧಾರ್ಥ್ ಕೌಲ್ ಅವರನ್ನು ಬಿಡುಗಡೆ ಮಾಡಿದೆ.
ಉಳಿದಿರುವ ಆಟಗಾರರು
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಸುಯಾಶ್ ಪ್ರಭುದೇಸಾಯಿ, ಮನೋಜ್ ಭಂಡಾರ್ಗೆ, ಮಹಿಪಾಲ್ ಲೊಮ್ರೊರ್, ಗ್ಲೆನ್ ಮ್ಯಾಕ್ಸ್ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಆಕಾಶ್ ದೀಪ್, ಅವಿನಾಶ್ ಸಿಂಗ್, ಜೋಶ್ ಹೇಜಲ್ವುಡ್, ಸಿದ್ಧಾರ್ಥ್ ಕೌಲ್, ಮೊಹಮ್ಮದ್ ಸಿರಾಜ್, ರಾಜನ್ ಕುಮಾರ್, ಹಿಮಾಂಶು ಶರ್ಮಾ, ಕರಣ್ ಶರ್ಮಾ, ವಿಜಯ್ ಕುಮಾರ್ ವೈಶಾಕ್.
ಗುಜರಾತ್ನಲ್ಲೇ ಉಳಿದ ಹಾರ್ದಿಕ್
ಭಾರೀ ಕುತೂಹಲ ಮೂಡಿಸಿದ್ದ ಹಾರ್ದಿಕ್ ಪಾಂಡ್ಯ ಮುಂಬಯಿ ತಂಡಕ್ಕೆ ವಾಪಸಾಗುವ ಸುದ್ದಿ ಠುಸ್ ಆಗಿದೆ. ಅವರು ಗುಜರಾತ್ ಟೈಟನ್ಸ್ ತಂಡದಲ್ಲೇ ಉಳಿದುಕೊಂಡಿದ್ದಾರೆ. ಉಳಿಕೆ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಲು ಕೊನೇ ದಿನವಾದ ನವೆಂಬರ್ 26ರಂದು ಗುಜರಾತ್ ಟೈಟನ್ಸ್ ಫ್ರಾಂಚೈಸಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಹಾರ್ದಿಕ್ ಪಾಂಡ್ಯ ಅವರ ಹೆಸರಿದೆ. ಈ ಮೂಲಕ ಹಾರ್ದಿಕ್ ಪಾಂಡ್ಯ ಅವರ ಪುನರಾಗಮನಕ್ಕಾಗಿ ಕಾಯುತ್ತಿದ್ದ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಗೆ ನಿರಾಸೆ ಎದುರಾಗಿದೆ.
ಇದನ್ನೂ ಓದಿ : IPL 2024 : ಸಿಎಸ್ಕೆಗೆ ಮುಂದಿನ ಆವೃತ್ತಿಯಲ್ಲೂ ಧೋನಿಯೇ ನಾಯಕ, ಫುಲ್ ಲಿಸ್ಟ್ ಬಿಡುಗಡೆ
ಆದಾಗ್ಯೂ, ಕಥೆ ಇನ್ನೂ ಮುಗಿದಿಲ್ಲ. ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಡಿಸೆಂಬರ್ 18 ರವರೆಗೆ ವ್ಯಾಪಾರ ಆಯ್ಕೆಗೆ ಹೋಗಬಹುದು. ಹರಾಜಿಗೆ ಒಂದು ದಿನ ಮುಂಚಿನವರೆಗೂ ವ್ಯಾಪಾರ ವಿಂಡೋ ತೆರೆದಿರುತ್ತದೆ. ಒಬ್ಬ ಆಟಗಾರನನ್ನು ವ್ಯಾಪಾರ ಮಾಡಲು, ಅವನನ್ನು ಉಳಿಸಿಕೊಳ್ಳಲು ಅವಕಾಶವಿರುತ್ತದೆ ಜಿಟಿ ಈಗ ಅದನ್ನೇ ಮಾಡಿದೆ. ಹೀಗಾಗಿ ಎಂಐಗೆ ಮಾರಾಟ ಮಾಡಲಾಗುತ್ತದೆಯೇ ಎಂಬುದು ಇನ್ನೂ ಊಹಾಪೋಹಗಳಿಗೆ ಇನ್ನೂ ಅವಕಾಶಗಳಿವೆ.