Site icon Vistara News

UEFA Europa League | 14 ಬಾರಿ ಚಾಂಪಿಯನ್!‌ ದಾಖಲೆ ಬರೆದ ರಿಯಲ್‌ ಮ್ಯಾಡ್ರಿಡ್‌ ಗೆಲುವು!

UEFA Europa League : ಲಿವರ್‌ಪೂಲ್ ವಿರುದ್ಧ ರಿಯಲ್‌ ಮ್ಯಾಡ್ರಿಡ್‌ 1-0 ಅಂತರದಲ್ಲಿ ಗೆಲುವು ಸಾಧಿಸಿ ಯುರೋಪಿಯನ್‌ ಕಪ್‌ ಗೆದ್ದಿದೆ. ಈ ಮೂಲಕ 14ನೇ ಬಾರಿ ರಿಯಲ್‌ ಮ್ಯಾಡ್ರಿಡ್ ಯುರೋಯನ್‌ ಕಪ್‌ ಚಾಂಪಿಯನ್‌ ಪಟ್ಟಕ್ಕೆ ಏರಿದೆ. ವಿನಿಕಸ್‌ ಜೆ.ಆರ್.‌ ಕೊನೇ ಕ್ಷಣದಲ್ಲಿ ಗೋಲ್‌ ಬಾರಿಸಿ ರಿಯಲ್‌ ಮ್ಯಾಡ್ರಿಡ್‌ ಗೆಲುವಿಗೆ ಕಾರಣವಾದರು.

ಯುರೋಪಿಯನ್‌ ಕಪ್‌ ಫುಟ್‌ಬಾಲ್‌ ಟೂರ್ನಮೆಂಟ್‌ನ ಅಂತಿಮ ಪಂದ್ಯ 36 ನಿಮಿಷಗಳು ತಡವಾಗಿ ಆರಂಭವಾಯಿತು. ಪ್ರೇಕ್ಷಕರು ಸ್ಟೇಡಿಯಮ್‌ಗೆ ಧಾವಿಸುತ್ತಿದ್ದರು. ಇದರಿಂದ ನೂಕುನುಗ್ಗಲು ಶುರುವಾಗಿತ್ತು. ಪೊಲೀಸರು ಅವರನ್ನು ತಡೆಯುವ ಪ್ರಯತ್ನದಲ್ಲಿದ್ದ ಕಾರಣಕ್ಕೆ ಪಂದ್ಯವು ತಡವಾಗಿ ಆರಂಭವಾಯಿತು.

ಇದನ್ನೂ ಓದಿ | highest paid: ಲಿಯಾನಲ್‌ ಮೆಸ್ಸಿಗೆ ಒಂದು ವರ್ಷಕ್ಕೆ ₹1000 ಕೋಟಿ ಸಂಭಾವನೆ!

UEFA Europa League ಅಂತಿಮ ಪಂದ್ಯ ಆರಂಭವಾದ ಬಳಿಕ ಎರಡು ತಂಡಗಳ ಆಟಗಾರರೂ ನಾಜೂಕಿನಿಂದ, ಎಚ್ಚರಿಕೆಯಿಂದ ಆಟವಾಡಿದರು. ಒಬ್ಬರು ಗೋಲ್‌ ಗಳಿಸುವ ಪ್ರಯತ್ನದಲ್ಲಿದ್ದರೆ ಮತ್ತೊಬ್ಬರು ಅವರನ್ನು ತಡೆಯುವ ಪ್ರಯತ್ನದಲ್ಲಿದ್ದರು. 21ನೇ ನಿಮಿಷದಲ್ಲಿ ಸದಿಯೊ ಮನೆ ಗೋಲ್‌ ಗಳಿಸುವಲ್ಲಿ ಇನ್ನೇನು ಹತ್ತಿರವಿದ್ದಾಗ ಅದನ್ನು ‌ರಿಯಲ್‌ ಮ್ಯಾಡ್ರಿಡ್ ಗೋಲ್‌ಕೀಪರ್‌ ಕೊರ್ಷಿಯಸ್‌ ತಡೆದರು. ಮೊಹಮ್ಮದ್‌ ಸಲಾ ಅವರ ಗೋಲ್‌ ಗಳಿಸುವ ಎರಡೂ ಪ್ರಯತ್ನ ವಿಫಲವಾದವು.

ಎರಡನೇ ಅರ್ಧದಲ್ಲಿ ರಿಯಲ್‌ ಮ್ಯಾಡ್ರಿಡ್‌ನ ವಿನಿಕಸ್‌ ಜೆ.ಆರ್.‌ ಗೋಲ್‌ ಪೋಸ್ಟ್‌ ಒಳಗೆ ಚೆಂಡನ್ನು ಕಳಿಸಲು ಸಫಲವಾದ್ಧರಿಂದ ತಂಡದ ಸ್ಕೋರ್‌ 1-0 ಆಯಿತು. ಈ ಬಳಿಕ ಗೋಲ್‌ ಗಳಿಸಲು ಯಾರಿಂದಲೂ ಸಾಧ್ಯ ಆಗಲಿಲ್ಲ. ವಿನಿಕಸ್‌ ಅವರ ರೋಚಕ ಗೋಲ್‌ ರಿಯಲ್‌ ಮ್ಯಾಡ್ರಿಡ್‌ ಚಾಂಪಿಯನ್‌ ಪಟ್ಟಕ್ಕೆ ಏರಿಸಿತು. ಸ್ಪೇನ್‌ ದಿಗ್ಗಜರು ಈ ಪಂದ್ಯವನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ಬರೆದರು. ಕಳೆದ 9 ಸೀಸನ್‌ನಲ್ಲಿ 5 ಬಾರಿ ಚಾಂಪಿಯನ್‌ ಆಗಿದ್ದಾರೆ. ಅತಿ ಹೆಚ್ಚು ಯುರೋಪಿಯನ್‌ ಕಪ್‌ ಗೆದ್ದವರಲ್ಲಿ ರಿಯಲ್‌ ಮ್ಯಾಡ್ರಿಡ್‌ ಅಗ್ರಸ್ಥಾನ್.‌ ಎ.ಸಿ. ಮಿಲನ್‌ 2ನೇ ಸ್ಥಾನದಲ್ಲಿದ್ದರೆ, ಲಿವರ್‌ಪೂಲ್‌ 6ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: UEFA| ರಿಯಲ್‌ ಮ್ಯಾಡ್ರಿಡ್‌ 14ನೇ ಬಾರಿ ಕಿರೀಟ ಧರಿಸುವ ಅವಕಾಶ: ಲಿವರ್‌ಪೂಲ್‌ ವಿರುದ್ಧ ಸೆಣೆಸಾಟ

Exit mobile version