Site icon Vistara News

IPL 2023 : ರೀಸ್​ ಟೋಪ್ಲೆ ಐಪಿಎಲ್​ನಿಂದ ಔಟ್​, ಸಿಎಸ್​ಕೆ ವಿರುದ್ಧ ಹೇಜಲ್​ವುಡ್​ ಕಣಕ್ಕೆ

IPL 2023: RCB's star pacer Topley ruled out for match against KKR

IPL 2023: RCB's star pacer Topley ruled out for match against KKR

ಬೆಂಗಳೂರು: ಆರ್​ಸಿಬಿ ತಂಡದ ವೇಗದ ಬೌಲರ್ ರೀಸ್​ ಟೋಪ್ಲೆ ಐಪಿಎಲ್​ 16ನೇ ಆವೃತ್ತಿಯ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಮುಂಬಯಿ ಇಂಡಿಯನ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡಿದ್ದ ಅವರು ಸುಧಾರಿಸಿಕೊಂಡಿಲ್ಲ. ಟೂರ್ನಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ಅರಿತ ಅವರು ಇಂಗ್ಲೆಂಡ್​ಗೆ ವಾಪಸಾಗಿದ್ದಾರೆ. 1.9 ಕೋಟಿ ರೂಪಾಯಿ ನೀಡಿ ಹರಾಜಿನಲ್ಲಿ ಖರೀದಿ ಮಾಡಿದ್ದ ಆರ್​ಸಿಬಿ ತಂಡಕ್ಕೆ ಹಿನ್ನಡೆ ಉಂಟಾಗಿದೆ.

ಆರ್​ಸಿಬಿಯ ಬ್ಯಾಟಿಂಗ್​ ಕೋಚ್​ ಸಂಜಯ್ ಬಂಗಾರ ಈ ಮಾಹಿತಿ ತಿಳಿಸಿದ್ದು, ಟೋಪ್ಲೆ ತವರಿಗೆ ಮರಳಿರುವುದಾಗಿ ಹೇಳಿದ್ದಾರೆ. ಇದರೊಂದಿಗೆ ಆರ್​ಸಿಬಿ ಗಾಯದ ಸಮಸ್ಯೆ ಮುಂದುವರಿದಿದೆ. ಎರಡು ದಿನದ ಹಿಂದೆಯಷ್ಟೇ ರಜತ್​ ಪಾಟೀದಾರ್​ ಕೂಡ ಐಪಿಎಲ್​ನ ಹಾಲಿ ಆವೃತ್ತಿಯಲ್ಲಿ ಆಡುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಹೀಗಾಗಿ ಗಾಯದ ಸಮಸ್ಯೆ ಆರ್​ಸಿಬಿಯ ಗೆಲುವಿನ ಆಸೆಗೆ ತಣ್ಣೀರು ಎರಚಿದೆ.

ಸಿಎಸ್​ಕೆ ವಿರುದ್ಧ ಹೇಜಲ್​ವುಡ್​

ಗಾಯದ ಸಮಸ್ಯೆಯಿಂದಾಗಿ ಇನ್ನೂ ಆರ್​ಸಿಬಿ ತಂಡ ಸೇರಿಕೊಳ್ಳದ ಆಸ್ಟ್ರೇಲಿಯಾದ ವೇಗದ ಬೌಲರ್​ ಹೇಜಲ್​ವುಡ್​ ಏಪ್ರಿಲ್​ 14ರಂದು ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಹಣಾಹಣಿಯಲ್ಲಿ ಆರ್​​ಸಿಬಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ.

ನನ್ನ ಯೋಜನೆಯ ಪ್ರಕಾರ ಎಲ್ಲವೂ ನಡೆಯುತ್ತಿದೆ. ನಾನು ಏಪ್ರಿಲ್​ 14ರಂದು ಆರ್​ಸಿಬಿ ತಂಡ ಸೇರಿಕೊಳ್ಳಲಿದ್ದೇನೆ. ಮುಂದಿನ ವಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಗೊತ್ತಾಗಲಿದೆ ಎಂಬುದಾಗಿ ದಿ ಏಜ್​ ಪತ್ರಿಕೆಗೆ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : IPL 2023 : ಅಬ್ಬರಿಸಿದ ಶಾರ್ದೂಲ್​ ಠಾಕೂರ್​; ಆರ್​ಸಿಬಿ ವಿಜಯಕ್ಕೆ 205 ರನ್​ ಗುರಿ

ಹೇಜಲ್​ವುಡ್​​ ಇಂಗ್ಲೆಂಡ್​ ವಿರುದ್ಧದ ಸರಣಿಯ ವೇಳೆ ಗಾಯಗೊಂಡಿದ್ದರು. ಹೀಗಾಗಿ ಬಾರ್ಡರ್​- ಗವಾಸ್ಕರ್​ ಟ್ರೋಫಿಯಲ್ಲಿ ಆಡಲು ಭಾರತಕ್ಕೆ ಬಂದಿರಲಿಲ್ಲ. ಐಪಿಎಲ್​ನ ಆರಂಭಕ್ಕೆ ಬರುವುದಾಗಿ ಹೇಳಿದ್ದರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ಏಪ್ರಿಲ್​ 14ರಂದು ಬರುವುದಾಗಿ ಹೇಳಿಕೊಂಡಿದ್ದಾರೆ.

ಆರ್​ಸಿಬಿ ಈ ಬಾರಿಯೂ​ ಕಪ್ ಗೆಲ್ಲಲ್ಲ; ಎಬಿಡಿ ವಿಲಿಯರ್ಸ್​ ಅಚ್ಚರಿಯ ಹೇಳಿಕೆ

ಬೆಂಗಳೂರು: ಆರ್​ಸಿಬಿ(RCB) ತಂಡ ಆಡಿದ ಮೊದಲ ಪಂದ್ಯದಲ್ಲಿಯೇ ಭರ್ಜರಿ ಗೆಲುವು ದಾಖಲಿಸಿ ಮೆರೆದಾಡಿದೆ. ತಂಡದ ಪ್ರದರ್ಶನ ಕಂಡ ಅಭಿಮಾನಿಗಳು ಈ ಸಲ ಕಪ್​ ನಿಜವಾಗಿಯೂ ನಮ್ಮದೇ ಎಂದು ಹೇಳಲು ಆರಂಭಿಸಿದ್ದಾರೆ. ಆದರೆ ಆರ್​ಸಿಬಿಯ ಮಾಜಿ ಆಟಗಾರ ಎಬಿ ಡಿ ವಿಲಿಯರ್ಸ್(AB de Villiers) ಮಾತ್ರ ಈ ಸಲ ಕಪ್​ ನಮ್ಮದಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇದಕ್ಕೆ ಅವರು ಕಾರಣವನ್ನು ತಿಳಿಸಿದ್ದಾರೆ.

ಮಾರ್ಚ್​ 26 ರಂದು ಆರ್​ಸಿಬಿ ಪ್ರಾಂಚೈಸಿಯು “ಅನ್​ಬಾಕ್ಸ್​ ಆರ್‌ಸಿಬಿ” ಎಂಬ ಕಾರ್ಯಕ್ರಮ ನಡೆಸಿತ್ತು. ಈ ಕಾರ್ಯಕ್ರಮದಲ್ಲಿ ಆರ್​ಸಿಬಿಯ ಮಾಜಿ ಆಟಗಾರಾದ ವೆಸ್ಟ್ ಇಂಡೀಸ್ ಕ್ರಿಸ್ ಗೇಲ್ ಮತ್ತು ಎಬಿ ಡಿ ವಿಲಿಯರ್ಸ್​ಗೆ ಹಾಲ್ ಆಫ್ ಫೇಮ್‌ ಗೌರವ ಸೂಚಿಸಲಾಗಿತ್ತು. ಉಭಯ ಆಟಗಾರರು ಆರ್​ಸಿಬಿ ತಂಡಕ್ಕೆ ನೀಡಿದ ಕೊಡುಗೆಗೆ ಗೌರವವಾಗಿ ಆರ್​ಸಿಬಿ ಫ್ರಾಂಚೈಸಿಯು ಡಿ ವಿಲಿಯರ್ಸ್ ಅವರ ಜೆರ್ಸಿ ಸಂಖ್ಯೆ 17 ಮತ್ತು ಕ್ರಿಸ್​ ಗೇಲ್ ಅವರ ಜೆರ್ಸಿ ಸಂಖ್ಯೆ 333ರನ್ನು ಹಾಲ್ ಆಫ್ ಫೇಮ್‌(Hall of Fame) ಸೇರ್ಪಡೆಗೊಳಿಸಿ ನಿವೃತ್ತಿ ಘೋಷಿಸಿತ್ತು.

ಹಾಲ್ ಆಫ್ ಫೇಮ್‌ ಸೇರ್ಪಡೆಗೊಂಡ ಬಳಿಕ ಆರ್​ಸಿಬಿ ಅಭಿಮಾನಿಗಳಿಗಾಗಿ ಎಬಿಡಿ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು. “ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಮ್ಮ ಡ್ರೆಸ್ಸಿಂಗ್​ ರೂಮಿನ ಬಾಲ್ಕನಿಯತ್ತ ಹೆಜ್ಜೆ ಹಾಕಿದಾಗ ನನ್ನ ಕಣ್ಣಂಚಿನಲ್ಲಿ ನೀರು ಜಿನುಗಿತು. ಪ್ರತಿ ಸಲ ಎಬಿಡಿ, ಎಬಿಡಿ ಎಂಬ ಅಭಿಮಾನಿಗಳ ಕೂಗು ನಮ್ಮನ್ನು ಗೆಲುವಿಗಾಗಿ ಹುರಿದುಂಬಿಸುತ್ತಿತ್ತು. ಆದರೆ ಈ ಬಾರಿಯ ಕೂಗಿನಲ್ಲಿ ಬೇರೆಯದ್ದೇ ಭಾವನೆ ಇತ್ತು. ನನಗೆ ಸಹಕಾರ ನೀಡಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಕಳೆದ 15 ವರ್ಷಗಳ ಕಾಯುವಿಕೆ ಈ ವರ್ಷ ಕೊನೆಗಾಣಲಿದೆ. ಈ ಸಲ ಕಪ್​ ನಮ್ದೇ” ಎಂದು ಹೇಳಿದ್ದರು.

Exit mobile version