Site icon Vistara News

IPL 2023 : ಮುಂಬಯಿ ಇಂಡಿಯನ್ಸ್​ ತಂಡ ಸೇರಿಕೊಂಡ ರೀಲಿ ಮೆರಿಡಿತ್​

reilly-meredith-joined-the-mumbai-indians-team

#image_title

ನವ ದೆಹಲಿ: ಮುಂಬಯಿ ಇಂಡಿಯನ್ಸ್​ ತಂಡ ಗುರುವಾರ ಆಸ್ಟ್ರೇಲಿಯಾದ ವೇಗದ ಬೌಲರ್​ ರೀಲಿ ಮೆರಿಡಿತ್​ 2023ನೇ ಆವೃತ್ತಿಯ ಐಪಿಎಲ್​ನಲ್ಲಿ ಆಡುವಂತೆ ಒಪ್ಪಂದ ಮಾಡಿಕೊಂಡಿದೆ. ವೇಗದ ಬೌಲರ್​ ಜೇ ರಿಚರ್ಡ್ಸನ್​ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಕ್ಕೆ ಉಳಿದ ಕಾರಣ ರೀಲಿ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಮುಂಬಯಿ ಇಂಡಿಯನ್ಸ್​ ತಂಡ. ರೀಲಿ ಮೆರಿಡಿತ್​ ಈ ಹಿಂದೆ ಪಂಜಾಬ್​ ಕಿಂಗ್ಸ್​ ಹಾಗೂ ಮುಂಬಯಿ ಇಂಡಿಯನ್ಸ್​ ತಂಡದ ಪರವಾಗಿ ಆಡಿದ್ದರು.

ಜೇ ರಿಚರ್ಡ್ಸನ್ ಅವರನ್ನು ಮುಂಬಯಿ ತಂಡ ಐಪಿಎಲ್​ ಹರಾಜಿನಲ್ಲಿ ತನ್ನದಾಗಿಸಿಕೊಂಡಿತ್ತು. ಆದರೆ ಮೊಣಕಾಲು ನೋಡಿನ ಸಮಸ್ಯೆಗೆ ಒಳಗಾಗಿರುವ ಅವರು ಸರ್ಜರಿ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಹಾಲಿ ಆವೃತ್ತಿಯಲ್ಲಿ ಅವರು ಆಡುವುದಿಲ್ಲ ಎಂಬುದು ಖಾತ್ರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೆರಿಡಿತ್​ ತಂಡ ಸೇರಿಕೊಂಡಿದ್ದಾರೆ.

ಆಸ್ಟ್ರೇಲಿಯಾದ ವೇಗದ ಬೌಲರ್​ ರಾಷ್ಟ್ರೀಯ ತಂಡದ ಪರವಾಗಿ 5 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಒಟ್ಟು 8 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಒಂದು ಬಾರಿ ಮೂರು ವಿಕೆಟ್​ ಗೊಂಚಲಿನ ಸಾಧನೆಯನ್ನೂ ಮಾಡಿದ್ದಾರೆ.

ರೀಸ್​ ಟೋಪ್ಲೆ ಐಪಿಎಲ್​ನಿಂದ ಔಟ್​, ಸಿಎಸ್​ಕೆ ವಿರುದ್ಧ ಹೇಜಲ್​ವುಡ್​ ಕಣಕ್ಕೆ

ಬೆಂಗಳೂರು: ಆರ್​ಸಿಬಿ ತಂಡದ ವೇಗದ ಬೌಲರ್ ರೀಸ್​ ಟೋಪ್ಲೆ ಐಪಿಎಲ್​ 16ನೇ ಆವೃತ್ತಿಯ ಇನ್ನುಳಿದ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಮುಂಬಯಿ ಇಂಡಿಯನ್ಸ್​ ವಿರುದ್ಧದ ಮೊದಲ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಗಾಯಗೊಂಡಿದ್ದ ಅವರು ಸುಧಾರಿಸಿಕೊಂಡಿಲ್ಲ. ಟೂರ್ನಿಯಲ್ಲಿ ಆಡಲು ಸಾಧ್ಯವಿಲ್ಲ ಎಂದು ಅರಿತ ಅವರು ಇಂಗ್ಲೆಂಡ್​ಗೆ ವಾಪಸಾಗಿದ್ದಾರೆ. 1.9 ಕೋಟಿ ರೂಪಾಯಿ ನೀಡಿ ಹರಾಜಿನಲ್ಲಿ ಖರೀದಿ ಮಾಡಿದ್ದ ಆರ್​ಸಿಬಿ ತಂಡಕ್ಕೆ ಹಿನ್ನಡೆ ಉಂಟಾಗಿದೆ.

ಆರ್​ಸಿಬಿಯ ಬ್ಯಾಟಿಂಗ್​ ಕೋಚ್​ ಸಂಜಯ್ ಬಂಗಾರ ಈ ಮಾಹಿತಿ ತಿಳಿಸಿದ್ದು, ಟೋಪ್ಲೆ ತವರಿಗೆ ಮರಳಿರುವುದಾಗಿ ಹೇಳಿದ್ದಾರೆ. ಇದರೊಂದಿಗೆ ಆರ್​ಸಿಬಿ ಗಾಯದ ಸಮಸ್ಯೆ ಮುಂದುವರಿದಿದೆ. ಎರಡು ದಿನದ ಹಿಂದೆಯಷ್ಟೇ ರಜತ್​ ಪಾಟೀದಾರ್​ ಕೂಡ ಐಪಿಎಲ್​ನ ಹಾಲಿ ಆವೃತ್ತಿಯಲ್ಲಿ ಆಡುವುದಿಲ್ಲ ಎಂಬುದು ಸ್ಪಷ್ಟವಾಗಿತ್ತು. ಹೀಗಾಗಿ ಗಾಯದ ಸಮಸ್ಯೆ ಆರ್​ಸಿಬಿಯ ಗೆಲುವಿನ ಆಸೆಗೆ ತಣ್ಣೀರು ಎರಚಿದೆ.

ಸಿಎಸ್​ಕೆ ವಿರುದ್ಧ ಹೇಜಲ್​ವುಡ್​

ಗಾಯದ ಸಮಸ್ಯೆಯಿಂದಾಗಿ ಇನ್ನೂ ಆರ್​ಸಿಬಿ ತಂಡ ಸೇರಿಕೊಳ್ಳದ ಆಸ್ಟ್ರೇಲಿಯಾದ ವೇಗದ ಬೌಲರ್​ ಹೇಜಲ್​ವುಡ್​ ಏಪ್ರಿಲ್​ 14ರಂದು ತಂಡ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಹಣಾಹಣಿಯಲ್ಲಿ ಆರ್​​ಸಿಬಿ ಪರ ಆಡಲಿದ್ದಾರೆ ಎಂದು ಹೇಳಲಾಗಿದೆ.

ನನ್ನ ಯೋಜನೆಯ ಪ್ರಕಾರ ಎಲ್ಲವೂ ನಡೆಯುತ್ತಿದೆ. ನಾನು ಏಪ್ರಿಲ್​ 14ರಂದು ಆರ್​ಸಿಬಿ ತಂಡ ಸೇರಿಕೊಳ್ಳಲಿದ್ದೇನೆ. ಮುಂದಿನ ವಾರ ಈ ಬಗ್ಗೆ ಸ್ಪಷ್ಟ ನಿರ್ಧಾರ ಗೊತ್ತಾಗಲಿದೆ ಎಂಬುದಾಗಿ ದಿ ಏಜ್​ ಪತ್ರಿಕೆಗೆ ಅವರು ತಿಳಿಸಿದ್ದಾರೆ.

ಇದನ್ನೂ ಓದಿ : IPL 2023 : ಅಬ್ಬರಿಸಿದ ಶಾರ್ದೂಲ್​ ಠಾಕೂರ್​; ಆರ್​ಸಿಬಿ ವಿಜಯಕ್ಕೆ 205 ರನ್​ ಗುರಿ

ಹೇಜಲ್​ವುಡ್​​ ಇಂಗ್ಲೆಂಡ್​ ವಿರುದ್ಧದ ಸರಣಿಯ ವೇಳೆ ಗಾಯಗೊಂಡಿದ್ದರು. ಹೀಗಾಗಿ ಬಾರ್ಡರ್​- ಗವಾಸ್ಕರ್​ ಟ್ರೋಫಿಯಲ್ಲಿ ಆಡಲು ಭಾರತಕ್ಕೆ ಬಂದಿರಲಿಲ್ಲ. ಐಪಿಎಲ್​ನ ಆರಂಭಕ್ಕೆ ಬರುವುದಾಗಿ ಹೇಳಿದ್ದರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ಏಪ್ರಿಲ್​ 14ರಂದು ಬರುವುದಾಗಿ ಹೇಳಿಕೊಂಡಿದ್ದಾರೆ.

Exit mobile version