Site icon Vistara News

ರಿಟೈರ್ಡ್ ಹರ್ಟ್ ಅಥವಾ ರಿಟೈರ್ಡ್ ಔಟ್? ರೋಹಿತ್ ಸೂಪರ್ ಓವರ್ ನಿರ್ಧಾರ ನಿಗೂಢ!

Rohit Sharma's Super Over Decision

ಬೆಂಗಳೂರು: ಭಾರತ ಮತ್ತು ಅಫಘಾನಿಸ್ತಾನ ವಿರುದ್ಧ ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟಿ20(India vs Afghanistan, 3rd T20I) ಪಂದ್ಯ ಹಲವು ನಾಟಕೀಯ ಘಟನೆ ಮತ್ತು ಚರ್ಚೆಗೆ ಕಾರಣವಾಯಿತು. ಮೊದಲ ಸೂಪರ್ ಓವರ್​ನಲ್ಲಿ ಬ್ಯಾಟಿಂಗ್ ಮಾಡಿದ ರೋಹಿತ್ ಅಂತಿಮ ಎಸೆತದಲ್ಲಿ ಮೈದಾನ ತೊರೆದರೂ ಕೂಡ ಎರಡನೇ ಸೂಪರ್ ಓವರ್ ನಲ್ಲಿಯೂ ಬ್ಯಾಟಿಂಗ್​ ನಡೆಸಿದ್ದು ಈಗ ಚರ್ಚೆಗೆ ಗ್ರಾಸವಾಗಿದೆ.

ಪಂದ್ಯ ಟೈಗೊಂಡ ಕಾರಣ ಫಲಿತಾಂಶ ನಿರ್ಧಾರಕ್ಕೆ ಸೂಪರ್​ ಓವರ್​ ಮೊರೆ ಹೋಗಲಾಯಿತು. ಮೊದಲ ಸೂಪರ್‌ ಓವರ್‌ನಲ್ಲಿ ಆಡಲಿಳಿದ ಅಫಘಾನಿಸ್ತಾನ ಒಂದು ವಿಕೆಟಿಗೆ 16 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಭಾರತಕ್ಕೆ ಅಂತಿಮ ಸೆತದಲ್ಲಿ ಗೆಲುವಿಗೆ ಒಂದು ರನ್​ ಅಶ್ಯವಿತ್ತು. ಈ ವೇಳೆ ನಾನ್​ಸ್ಟ್ರೇಕ್​ನಲ್ಲಿದ್ದ ರೋಹಿತ್​ ಅಚ್ಚರಿ ಎಂಬಂತೆ ಕ್ರೀಸ್​ ತೊರೆದು ರಿಂಕು ಸಿಂಗ್​ ಅವರನ್ನು ಬ್ಯಾಟಿಂಗ್​ಗೆ ಕರೆದರು. ಈ ವೇಳೆ ಆಫ್ಘಾನ್ ಪ್ಲೇಯರ್​ ಅಂಪೈರ್​ ಜತೆ ವಾಗ್ವಾದಕ್ಕೆ ಇಳಿದರು. ಕೆಲ ಕಾಲ ಗೊಂದಲ ಸೃಷ್ಟಿಯಾಯಿತು. ರೋಹಿತ್​ ಅವರ ಈ ನಡೆ ಭಾರತ ತಂಡದ ಕೋಚ್​ಗೂ ದ್ರಾವಿಡ್​ಗೂ ಅಚ್ಚರಿ ತಂದಿತ್ತು. ಆದರೆ ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್​ ಬೇಕಿದ್ದಾಗ ಒಂದು ರನ್ ಬಂದ ಕಾರಣ ಪಂದ್ಯ ಮತ್ತೊಂದು ಸೂಪರ್ ಓವರ್​ಗೆ ಸಾಗಿತು.

ಇದನ್ನೂ ಓದಿ ಈಗಾಗಲೇ 2 ಶೂನ್ಯ ಸುತ್ತಿದ್ದೇನೆ ಎಂದು ಅಂಪೈರ್ ಕಾಲೆಳೆದ ರೋಹಿತ್​; ವಿಡಿಯೊ ವೈರಲ್

20 ಓವರ್​ ಬ್ಯಾಟಿಂಗ್​ ಮತ್ತು ಫೀಲ್ಡಿಂಗ್​ ನಡೆಸಿದ ಕಾರಣ ಸೂಪರ್​ ಓವರ್​ನ ಅಂತಿಮ ಎಸೆತದಲ್ಲಿ 2 ರನ್ ಓಡುವುದು ಕಷ್ಟವಾದಿತು ನ್ನುವ ನಿಟ್ಟಿನಲ್ಲಿ ರೋಹಿತ್​ ಶರ್ಮ ಅವರು ರಿಟೈರ್ಡ್​ ಹರ್ಟ್​ ಘೋಷಿಸಿ ಪೆವಿಲಿಯನ್​ಗೆ ವಾಪಸ್ ಆಗಿರಬಹುದು ಎಂದು ಆಫ್ಘಾನ್ ಆಟಗಾರರು ಸೇರಿ ಕ್ರಿಕೆಟ್​ ಅಭಿಮಾನಿಗಳು ಊಹಿಸಿದ್ದರು. ಆದರೆ ದ್ವಿತೀಯ ಸೂಪರ್​ ಓಪರ್​ನಲ್ಲಿಯೂ ರೋಹಿತ್​ ಶರ್ಮ ಬ್ಯಾಟಿಂಗ್​ಗೆ ಇಳಿದ್ದು ಈಗ ಚರ್ಚೆಗೆ ಕಾರಣವಾಗಿದೆ.

ಐಸಿಸಿ ನಿಯಮ ಏನು ಹೇಳುತ್ತೆ?


ನಿಯಮಗಳ ಪ್ರಕಾರ ಸೂಪರ್​ ಓವರ್​ನಲ್ಲಿ ಔಟ್​ ಆದ ಬ್ಯಾಟರ್​ ಮತ್ತೆ ಬ್ಯಾಟಿಂಗ್​ ನಡೆಸಲು ಅವಕಾಶವಿಲ್ಲ. ಆದರೆ ರೋಹಿತ್​ ದ್ವಿತೀಯ ಸೂಪರ್​ ಓವರ್​ನಲ್ಲಿಯೂ ಬ್ಯಾಟಿಂಗ್​ ನಡೆಸಲು ಬಂದಾಗ ಅರೆ ಇದು ಹೇಗೆ ಸಾಧ್ಯ ಎಂದು ಎಲ್ಲರು ಒಂದು ಕ್ಷಣ ಯೋಚಿಸಿದರು. ಐಸಿಸಿ ನಿಯಮದ ಪ್ರಕಾರ ರಿಟೈರ್ಡ್​ ಹರ್ಟ್​ ಆದರೆ ಮತ್ತೆ ಬ್ಯಾಟ್ ಮಾಡಬಹುದು. ಈ ನಿಯಮ ರೋಹಿತ್ ಹಾಗೂ ಟೀಮ್​ ಇಂಡಿಯಾಗೆ ಸಂಪೂರ್ಣ ಅರಿವಿತ್ತು. ಹೀಗಾಗಿ ರೋಹಿತ್​ ದ್ವಿತೀಯ ಸೂಪರ್​ ಓಪರ್​ನಲ್ಲಿಯೂ ಬ್ಯಾಟಿಂಗ್​ ನಡೆಸಿದರು. ಆದರೆ ಈಗ ಚರ್ಚೆಯಾಗುತ್ತಿರುವುದೆಂದರೆ ರೋಹಿತ್​ ರಿಟೈರ್ಡ್​ ಹರ್ಟ್​ ಅಥವಾ ರಿಟೈರ್ಡ್​ ಔಟ್​ ಆದದ್ದಾ? ಎನ್ನುವುದು.

Exit mobile version