Site icon Vistara News

ICC World Cup 2023 : ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ ವಾಟ್ಸ್​ಆ್ಯಪ್​ ಮೆಸೇಜ್​​ ಸೋರಿಕೆ

Azam message

ಬೆಂಗಳೂರು: ಪಾಕಿಸ್ತಾನ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಆಗಾಗ ಸಾಬೀತಾಗುತ್ತಿದೆ. ಅಂತೆಯೇ ವಿಶ್ವ ಕಪ್​ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಬಂದಿರುವ ಪಾಕಿಸ್ತಾನ ತಂಡವು ಆಂತರಿಕ ಕಲಹದಲ್ಲಿ ಮುಳುಗಿದೆ ಎಂಬುದು ಹೊಸ ಸುದ್ದಿ. ಈ ಸುದ್ದಿಯನ್ನು ಅನೇಕರು ನಿರಾಕರಿಸಿದರೂ ಕೆಲವೊಂದು ವರದಿಗಳು ಇದು ಸತ್ಯ ಎಂಬುದಕ್ಕೆ ಸಾಕ್ಷಿ ನೀಡುತ್ತಿವೆ. ಅಂತೆಯೇ ಪಾಕಿಸ್ತಾನ ತಂಡದ ನಾಯಕ ತಂಡದ ಸಮಸ್ಯೆ ಕುರಿತು ಪಾಕಿಸ್ತಾನ ಕ್ರಿಕೆಟ್ ಸಮಿತಿಯ ಅಧ್ಯಕ್ಷ ಝಾಕಾ ಅಶ್ರಫ್ ಅವರಿಗೆ ಕಳುಹಿಸಿರುವ ವಾಟ್ಸ್​ಆ್ಯಪ್​ ಸಂದೇಶವನ್ನು ಸೋರಿಕೆ ಮಾಡಿದ್ದು, ತಂಡದ ನೈತಿಕತೆಯನ್ನು ಪ್ರಶ್ನಿಸಲಾಗಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ನಿರ್ವಹಣಾ ಸಮಿತಿ ಮುಖ್ಯಸ್ಥ ಝಾಕಾ ಅಶ್ರಫ್ ಭಾನುವಾರ ತಡರಾತ್ರಿ ಬಾಬರ್ ಅಜಮ್ ಅವರ ವೈಯಕ್ತಿಕ ವಾಟ್ಸಾಪ್ ಸಂದೇಶಗಳನ್ನು ಲೈವ್ ಟಿವಿಯಲ್ಲಿ ಸೋರಿಕೆ ಮಾಡಿದ್ದಾರೆ. ಪಿಸಿಬಿ ಮುಖ್ಯಸ್ಥರ ಕ್ರಮಗಳು ನೈತಿಕ ಕಳವಳಗಳನ್ನು ಹುಟ್ಟುಹಾಕಿವೆ. ಏಕೆಂದರೆ ಪಾಕಿಸ್ತಾನ ನಾಯಕ ಬಾಬರ್ ಅಜಮ್ ತಮ್ಮ ಖಾಸಗಿ ಸಂದೇಶಗಳನ್ನು ಲೈವ್ ಟಿವಿಯಲ್ಲಿ ಹಂಚಿಕೊಳ್ಳಲು ಅನುಮತಿ ನೀಡಿದ್ದಾರೆಯೇ ಎಂಬುದು ತಿಳಿದಿಲ್ಲ. ಖಾಸಗಿ ಸಂದೇಶಗಳನ್ನು ಸೋರಿಕೆ ಮಾಡುವುದು ಗೌಪ್ಯತೆ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.

ಚಾಟ್​ಗಳನ್ನು ಏಕೆ ಸೋರಿಕೆ ಮಾಡಿದರು

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ರಶೀದ್ ಲತೀಫ್ ಹೇಳಿಕೆ ನೀಡಿದ್ದರು. ಶನಿವಾರ ತಮ್ಮನ್ನು ಸಂಪರ್ಕಿಸಲು ಪ್ರಯತ್ನಿಸಿ ಬಾಬರ್ ಅಜಮ್ ಅವರನ್ನು ಝಾಕಾ ಅಶ್ರಫ್ ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದರು. ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ, ಅಶ್ರಫ್ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಪಾಕಿಸ್ತಾನ ನಾಯಕ ಎಂದಿಗೂ ತನ್ನೊಂದಿಗೆ ನೇರವಾಗಿ ಸಂಪರ್ಕದಲ್ಲಿಲ್ಲ ಎಂದು ಹೇಳಿದ್ದಾರೆ. “ನಾನು ಅವರ (ಬಾಬರ್) ಕರೆಯನ್ನು ಸ್ವೀಕರಿಸುವುದಿಲ್ಲ ಎಂದು ಅವರು [ಲತೀಫ್] ಹೇಳುತ್ತಾರೆ” “ಅವರು ನನಗೆ ಕರೆ ಮಾಡಿಲ್ಲ. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅಥವಾ ಅಂತರರಾಷ್ಟ್ರೀಯ ಕ್ರಿಕೆಟ್ ನಿರ್ದೇಶಕರು ತಂಡದ ನಾಯಕನೊಂದಿಗೆ ಮಾತನಾಡುವ ನಿರೀಕ್ಷೆಯಿದೆ ಎಂದು ಝಾಕಾ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ : IND vs ENG: 4 ವಿಕೆಟ್​ ಕಿತ್ತು ವಿಶ್ವಕಪ್​ನಲ್ಲಿ ದಾಖಲೆ ಬರೆದ ಮೊಹಮ್ಮದ್​ ಶಮಿ

ಅಶ್ರಫ್ ಅವರು ಬಾಬರ್ ಅವರೊಂದಿಗೆ ಎಂದಿಗೂ ಸಂವಹನ ನಡೆಸಿಲ್ಲ ಎಂದು ನಿರಾಕರಿಸಿದರೂ, ಅವರು ತಮ್ಮ ವಿವರಣೆಗಳನ್ನು ಬೆಂಬಲಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡರು, ಸಂದರ್ಶಕರಿಗೆ ಬಾಬರ್ ಅಜಮ್ ಅವರು ಕಳುಹಿಸಿರುವ ಖಾಸಗಿ ವಾಟ್ಸಾಪ್ ಸಂದೇಶವನ್ನು ಕಳುಹಿಸಿರು. ಅದೇ ರೀತಿ ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಲ್ಮಾನ್ ನಸೀರ್ ಮತ್ತು ಬಾಬರ್ ಅಜಮ್ ನಡುವಿನ ವಾಟ್ಸಾಪ್ ಸಂಭಾಷಣೆಯನ್ನು ಟಿವಿಯಲ್ಲಿ ನೇರ ಪ್ರಸಾರ ಮಾಡುವಂತೆ ಮಾಡಿದರು.

ಬಾಬರ್​ ಕಳುಹಿಸಿದ ಸಂದೇಶವೇನು?

“ಬಾಬರ್, ನೀವು ಅಧ್ಯಕ್ಷರಿಗೆ ಕರೆ ಮಾಡುತ್ತಿದ್ದೀರಿ ಮತ್ತು ಅವರು ಉತ್ತರಿಸುತ್ತಿಲ್ಲ ಎಂಬ ಸುದ್ದಿ ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನೀವು ಇತ್ತೀಚೆಗೆ ಅವನಿಗೆ ಕರೆ ಮಾಡಿದ್ದೀರಾ?” ಎಂದು ಸಲ್ಮಾನ್​ ​ ನಸೀಸ್​​ ಪ್ರಶ್ನಿಸಿದ್ದರು. ಸಲಾಂ ಸಲ್ಮಾನ್ ಭಾಯ್, ನಾನು ಸರ್ ಗೆ ಯಾವುದೇ ಕರೆ ಮಾಡಿಲ್ಲ” ಎಂದು ಬಾಬರ್ ಉತ್ತರಿಸಿದ್ದರು. ಈ ಸಂದೇಶವನ್ನು ಝಾಕಾ ಟಿವಿ ಜತೆ ಹಂಚಿಕೊಂಡಿದ್ದರು.

ಆಕ್ರೋಶ

ಖಾಸಗಿ ಸಂದೇಶವನ್ನು ಬಹಿರಂಗಪಡಿಸಿದ ಬಗ್ಗೆ ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟ್ ಆಟಗಾರ ಅಜರ್ ಅಲಿಅವರು ಬಾಬರ್ ಅಜಮ್ ಅವರ ಖಾಸಗಿ ಸಂವಹನವನ್ನು ನೇರ ಪ್ರಸಾರ ಮಾಡುವ ಮೊದಲು ಪಿಸಿಬಿ ಮುಖ್ಯಸ್ಥರು ಅಥವಾ ಕಾರ್ಯಕ್ರಮದಿಂದ ಒಪ್ಪಂದವನ್ನು ಪಡೆಯಲಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. ಅದೇ ರೀತಿ ಕಾರ್ಯಕ್ರಮದ ನಿರೂಪಕ ವಸೀಮ್ ಬಾದಾಮಿ ಅವರು ತಮ್ಮ ತಪ್ಪಿಗೆ ಕ್ಷಮೆಯಾಚಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಮೊದಲಿಗೆ ಅವರು ಸಂಭಾಷಣೆಯನ್ನು ಸಾರ್ವಜನಿಕಗೊಳಿಸಲು ಹಿಂಜರಿಯುತ್ತಿದ್ದೆವು. ಆದರೆ ಕೊನೆಯಲ್ಲಿ ಪಿಸಿಬಿ ಮುಖ್ಯಸ್ಥರು ಅನುಮತಿ ನೀಡಿದ್ದರಿಂದ ಪ್ರಸಾರ ಮಾಡಲು ನಿರ್ಧರಿಸಿದೆವು ಎಂದು ಬಾದಾಮಿ ಸ್ಪಷ್ಟಪಡಿಸಿದ್ದಾರೆ. ಅದರ ಹೊರತಾಗಿಯೂ, ಚಾಟ್ ತೋರಿಸುವಲ್ಲಿ ಚಾನೆಲ್ ತಪ್ಪು ಮಾಡಿದೆ ಎಂದು ಬಾದಾಮಿ ಒತ್ತಿಹೇಳಿದರು. ತಪ್ಪಿಗೆ ಅವರು ಪ್ರಾಮಾಣಿಕವಾಗಿ ಕ್ಷಮೆಯಾಚಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version