Site icon Vistara News

IPL 2023 : ರಿಂಕು ಸಿಂಗ್ ಹೊಗಳಿದ ವಿರಾಟ್​ ಕೊಹ್ಲಿ, ಏನಂದರು ಅವರು?

Rinku Singh gets rewarded for five sixes, Thalaiva Rajinikanth seeks opportunity to meet him

ಬೆಂಗಳೂರು: ಅಹಮದಾಬಾದ್​ನಲ್ಲಿ ನಡೆದ ಗುಜರಾತ್​ ಜಯಂಟ್ಸ್​ ವಿರುದ್ಧದ ಪಂದ್ಯದಲ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡದ ಬ್ಯಾಟರ್​ ರಿಂಕು ಸಿಂಗ್ ಪವಾಡ ಸೃಷ್ಟಿಸಿದ್ದರು. ಐಪಿಎಲ್​​ನ (IPL 2023) ಕೊನೇ ಐದು ಎಸೆತಗಳಲ್ಲಿ ಬೇಕಾಗಿದ್ದ 29 ರನ್​ಗಳನ್ನು ಸತತವಾಗಿ ಐದು ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಐದರಲ್ಲಿ 4 ಸ್ಟ್ರೈಟ್ ಸಿಕ್ಸರ್​ಗಳು. ಒತ್ತಡದ ನಡುವೆಯೂ ಅವರು ಐದು ಸಿಕ್ಸರ್​ ಬಾರಿಸಿ ಮಿಂಚಿದ್ದಾರೆ. ಈ ಸಾಧನೆ ಬಗ್ಗೆ ರಿಂಕು ಸಿಂಗ್​ಗೆ ಎಲ್ಲರೂ ಹೊಗಳಿಕೆ ಸಲ್ಲಿಸುತ್ತಿದ್ದಾರೆ.. ರಾಯಲ್​ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿಯೂ ಹೊಗಳಿಕೆ ನೀಡುವುದಕ್ಕೆ ಮರೆತಿಲ್ಲ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯಕ್ಕೆ ಮೊದಲು ಜಿಯೊ ಸಿನಿಮಾದ ವೀಕ್ಷಕ ವಿವರಣೆಗಾರ ರಾಬಿನ್ ಉತ್ತಪ್ಪ, ಅಹಮದಾಬಾದ್​ನಲ್ಲಿ ರಿಂಕು ಸಿಂಗ್ ಮಾಡಿದ ಸಾಧನೆ ಬಗ್ಗೆ ಪ್ರಶ್ನಿಸಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವಿರಾಟ್​ ಕೊಹ್ಲಿ, ರಿಂಕು ಸಿಂಗ್ ಪ್ರದರ್ಶನ ನೋಡಿ ನಾನು ಮೂಕ ವಿಸ್ಮಿತನಾದೆ. ಅದು ಕಲ್ಪನೆಗೆ ಅತೀತವಾಗಿರುವ ಇನಿಂಗ್ಸ್​ ಎಂಬುದಾಗಿ ವಿರಾಟ್​ ಕೊಹ್ಲಿ ಹೇಳಿದ್ದಾರೆ.

ಇದನ್ನೂ ಓದಿ : IPL 2023 : ಲಕ್ನೊ ಸೂಪರ್​ ಜಯಂಟ್ಸ್​ ತಂಡ ಸೇರಿದ ಯುವ ಬೌಲರ್​ ಅರ್ಪಿತ್​ ಗುಲೇರಿಯಾ

“ಯುವ ಬ್ಯಾಟರ್​ ಸಾಧನೆ ಅತ್ಯಂತ ಅಪರೂಪದ್ದು. ಅವರು ಬ್ಯಾಟಿಂಗ್ ಮಾಡಿದ ರೀತಿಯಲ್ಲಿ ನನಗೆ ಎಂದೂ ಬ್ಯಾಟಿಂಗ್ ಮಾಡುವುದಕ್ಕೆ ಸಾಧ್ಯವಿಲ್ಲ. ಕೊನೇ ಐದು ಎಸೆತಗಳಲ್ಲಿ ಐದು ಸಿಕ್ಸರ್​ ಬಾರಿಸುವುದು ಸುಲಭವಲ್ಲ ಹಾಗೂ ಈ ರೀತಿ ಎಂದೂ ನಡೆದಿರುವುದಿಲ್ಲ. ಐದು ಸಿಕ್ಸರ್ ಬಾರಿಸಿ ಪಂದ್ಯವನ್ನು ಗೆಲ್ಲಿಸಿ ಕೊಡುವುದು ಸುಲಭವಲ್ಲ. ಯುವ ಆಟಗಾರರು ಈ ರೀತಿಯಾಗಿ ಬ್ಯಾಟ್​ ಮಾಡುವುದನ್ನು ನೋಡುವುದಕ್ಕೆ ಸಂಭ್ರಮವಾಗುತ್ತಿದೆ ಎಂದು ಹೇಳಿದರು.

ಶುಕ್ರವಾರ ಎಸ್​ಆರ್​ಎಚ್​ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ರಿಂಕು ಸಿಂಗ್ ಮತ್ತೆ ಅಜೇಯ 58 ರನ್​ ಬಾರಿಸಿದ್ದರು. ಐಪಿಎಲ್​ನಲ್ಲಿ ಅದು ಅವರ ಚೊಚ್ಚಲ ಅರ್ಧ ಶತಕ. ಆದರೆ, ಪಂದ್ಯವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಿರಲಿಲ್ಲ. 23 ರನ್​ಗಳಿಂದ ಎಸ್​ಆರ್​ಎಚ್​ ತಂಡ ಗೆಲುವು ಸಾಧಿಸಿತ್ತು.

ಬಡತನದ ಬೇಗೆಯಲ್ಲಿ ಅರಳಿದ ಪ್ರತಿಭೆ ಕೋಲ್ಕೊತಾ ತಂಡದ ರಿಂಕು ಸಿಂಗ್​

ಸತತ ಐದು ಸಿಕ್ಸರ್​ಗಳ ಮೂಲಕ ರಿಂಕು ಸಿಂಗ್​ ಏಕಾಏಕಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಕ್ರಿಕೆಟ್​ ಕ್ಷೇತ್ರದ ಹೊಸ ಹೊಡೆಬಡಿಯ ದಾಂಡಿಗ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ರಿಂಕು ಸಿಂಗ್ ಬಡತನದಲ್ಲಿ ಅರಳಿದ ಪ್ರತಿಭೆ ಎಂಬ ಮಾಹಿತಿಯೂ ಅನಾವರಣಗೊಂಡಿದೆ. ಕ್ರಿಕೆಟ್​ನಲ್ಲಿ ಸಾಧನೆ ಮಾಡುವ ಕನಸು ಕಂಡಿರುವ ಅದಕ್ಕಾಗಿ ಹಲವು ಸಂಕಷ್ಟಗಳನ್ನು ಎದುರಿಸಿದ್ದಾರೆ ಎಂಬುದೂ ಗೊತ್ತಾಗಿದೆ.

ರಿಂಕು ಸಿಂಗ್​ ಉತ್ತರ ಪ್ರದೇಶದ ಆಲಿಗಢದವರು. 1977ರಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ಅವರಿಗೆ ಕ್ರಿಕೆಟ್​ ಕ್ಷೇತ್ರಕ್ಕೆ ಬರುವುದು ಅಷ್ಟೊಂದು ಸುಲಭ ಎನಿಸಿರಲಿಲ್ಲ. ಅಭ್ಯಾಸ ಹಾಗೂ ವಿದ್ಯಾಭ್ಯಾಸವನ್ನು ಜತೆಜತೆಯಾಗಿ ತೂಗಿಸಿಕೊಂಡು ಕ್ರಿಕೆಟ್​ ಕ್ಷೇತದಲ್ಲಿ ಸಾಧನೆ ಮಾಡಬೇಕಾದರೆ ಹಣಕಾಸಿನ ನೆರವು ಬೇಕಾಗುತ್ತದೆ. ಆದರೂ ಅವರು ನಾನಾ ರೀತಿಯಲ್ಲಿ ಕಷ್ಟಪಟ್ಟು ಕ್ಲಬ್ ಒಂದನ್ನು ಸೇರಿಕೊಂಡರು. ಅಲ್ಲಿ ಉತ್ತಮ ಸಾಧನೆ ತೋರುವ ಮೂಲಕ ಉತ್ತರ ಪ್ರದೇಶದ ಕಿರಿಯರ ತಂಡವನ್ನು ಸೇರಿಕೊಂಡರು. ಅಲ್ಲಿ ಉತ್ತಮ ಸಾಧನೆ ಮಾಡಿದ ಹಿನ್ನೆಲೆಯಲ್ಲಿ 16ನೇ ವಯಸ್ಸಿಗೆ ಉತ್ತರ ಪ್ರದೇಶ ಲಿಸ್ಟ್​ ಎ ತಂಡಕ್ಕೆ ಪ್ರವೇಶ ಪಡದುಕೊಂಡರು. 2016ರಲ್ಲಿ ಉತ್ತರ ಪ್ರದೇಶ ಪ್ರಥಮ ದರ್ಜೆ ಕ್ರಿಕೆಟ್​ ತಂಡಕ್ಕೆ ಪ್ರವೇಶ ಪಡೆದುಕೊಂಡಿದ್ದರು.

ಐಪಿಎಲ್​ನಲ್ಲಿ ಅವಕಾಶ

ದೇಶಿಯ ಕ್ರಿಕೆಟ್​ನಲ್ಲಿ ಅತ್ಯುತ್ತಮ ಸಾಧನೆ ತೋರಿದ ರಿಂಕು ಸಿಂಗ್ ಅವರಿಗೆ 2017ರಲ್ಲಿ ಐಪಿಎಲ್​ನಲ್ಲಿ ಅವಕಾಶ ಸಿಕ್ಕಿತು. 10 ಲಕ್ಷ ರೂಪಾಯಿ ಮೂಲ ಬೆಲೆಗೆ ಪಂಜಾಬ್​ ಕಿಂಗ್ಸ್ ತಂಡ ಸೇರಿಕೊಂಡರು. ಮೂರು ವರ್ಷಗಳ ಬಳಿಕ ಅವರ ಅದೃಷ್ಟ ಖುಲಾಯಿಸಿತು. ಕೋಲ್ಕೊತಾ ನೈಟ್​ ರೈಡರ್ಸ್​ ತಂಡ 80 ಲಕ್ಷ ರೂಪಾಯಿ ನೀಡಿ ಅವರನ್ನು ತಂಡಕ್ಕೆ ಖರೀದಿಸಿತು. ಅಲ್ಲಿಂದ ಅವರು ಕೆಕೆಆರ್​ ಭಾಗವಾಗಿದ್ದಾರೆ. ಈ ತಂಡದ ಹಲವಾರು ಗೆಲುವುಗಳಿಗೆ ತಮ್ಮ ಕೊಡುಗೆ ಕೊಟ್ಟಿದ್ದಾರೆ. 2022ರ ಬಳಿಕ ಅವರ ಕೆಕೆಆರ್ ಬಳಗದ ಪ್ರಮುಖ ಬ್ಯಾಟ್ಸ್​ಮನ್​ ಎನಿಸಿಕೊಂಡಿದ್ದಾರೆ.

Exit mobile version