ಹರಾರೆ: ಟೀಮ್ ಇಂಡಿಯಾದ ಆಟಗಾರ ರಿಂಕು ಸಿಂಗ್(Rinku Singh) ಇದೀಗ ಕ್ರಿಕೆಟ್ ಹೊರತಾಗಿ ಸುದ್ದಿಯಾಗಿದ್ದಾರೆ. ಸ್ಟಾರ್ ಕ್ರಿಕೆಟಿಗ ಶುಭಮನ್ ಗಿಲ್(Shubman Gill’s Sister) ಸಹೋದರಿ ಶಹನೀಲ್ ಗಿಲ್ ಜತೆ ಪ್ರೇಮದ ಬಲೆಯಲ್ಲಿ ಸಿಲುಕಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇದಕ್ಕೆ ಶಹನೀಲ್ ಗಿಲ್(Shahneel Gill) ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಪುಷ್ಟಿ ನೀಡಿದೆ.
ಹೌದು, ರಿಂಕು ಮತ್ತು ಶಹನೀಲ್ ಗಿಲ್ ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಕಳೆದೊಂದು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ರಿಂಕು ಸಿಂಗ್ ಕಳೆದ ವರ್ಷ ಮಾಲ್ಡೀವ್ಸ್ಗೆ ಹೋಗಿದ್ದ ವೇಳೆ ಅಲ್ಲಿನ ಪ್ರಮುಖ ಬೀಚ್ಗಳಲ್ಲಿ ಎಂಜಾಯ್ ಮಾಡಿದ್ದ ಫೋಟೊಗಳನ್ನು ರಿಂಗು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೊಗೆ ಶಹನೀಲ್ ಗಿಲ್ “ಓ ಹೀರೊ” ಎಂದು ರೊಮ್ಯಾಂಟಿಕ್ ಆಗಿ ಕಮೆಂಟ್ ಮಾಡಿದ್ದರು. ಇದೀಗ ಜಿಂಬಾಬ್ವೆ ಪ್ರವಾಸದಲ್ಲಿರುವ ರಿಂಕು ಸಿಂಗ್ ಜತೆ ಶಹನೀಲ್ ಕೂಡ ಕಾಣಿಸಿಕೊಂಡಿದ್ದಾರೆ. ಹಾರಾರೆಯಲ್ಲಿರುವ ಜಿರಾಫೆ ಮೃಗಾಗಲಕ್ಕೆ ಜತೆಯಾಗಿ ಭೇಟಿ ನೀಡಿ ಎಂಜಾಯ್ ಮಾಡುತ್ತಿರುವ ವಿಡಿಯೊವನ್ನು ಶಹನೀಲ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊ ಕಂಡ ನೆಟ್ಟಿಗರು ಇವರಿಬ್ಬರು ಪ್ರೀತಿಯ ಬಳೆಗೆ ಬಿದ್ದಿರುವುದು ಖಚಿತ ಎಂದಿದ್ದಾರೆ.
ಶಹನೀಲ್ ಅವರ ಈ ಪೋಸ್ಟ್ ಕಂಡು ಹಲವು ನೆಟ್ಟಿಗರು ನಿಮ್ಮ ಅಣ್ಣ ಗಿಲ್ ಸಾರಾ ಹಿಂದೆ ಬಿದ್ದಿದ್ದರೇ, ನೀವು ರಿಂಕುಗೆ ಗಾಳ ಹಾಕಿದ್ದೀರಾ? ಎಂದು ತಮಾಷೆಯ ಕಮೆಂಟ್ಗಳನ್ನು ಮಾಡಿದ್ದಾರೆ. ರಿಂಕು ಸಿಂಗ್ ಜಿಂಬಾಬ್ವೆ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಆದರೆ ದ್ವಿತೀಯ ಪಂದ್ಯದಲ್ಲಿ ಅಜೇಯ 48 ರನ್ ಬಾರಿಸಿ ಮಿಂಚಿದ್ದರು. ನಿನ್ನೆ(ಬುಧವಾರ) ನಡೆದಿದ್ದ ಮೂರನೇ ಪಂದ್ಯದಲ್ಲಿ ಅಜೇಯ 1 ರನ್ ಗಳಿಸಿದ್ದರು. ಶುಭಮನ್ ಗಿಲ್ ಈ ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಇದನ್ನೂ ಓದಿ Rinku Singh : ಕೊಹ್ಲಿಯ ಬ್ಯಾಟ್ನಲ್ಲಿ ರಿಂಕು ಚೆನ್ನಾಗಿ ಆಡುತ್ತಿಲ್ಲ; ನೆಟ್ಟಿಗರಿಂದ ಟ್ರೋಲ್!
ಐಪಿಎಲ್ನಿಂದ ಖುಲಾಯಿಸಿ ಅದೃಷ್ಟ
ಕಳೆದ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್(IPL) ಪಂದ್ಯದಲ್ಲಿ ಯಾರು ಊಹಿಸಿದ ರೀತಿಯಲ್ಲಿ ಬ್ಯಾಟಿಂಗ್ ನಡೆಸಿದ ರಿಂಕು ಸಿಂಗ್(Rinku Singh), ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯವೊಂದರಲ್ಲಿ ಯಶ್ ದಯಾಳ್ ಎಸೆತದಲ್ಲಿ ಸತತ ಐದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಕೋಲ್ಕತಾ ನೈಟ್ ರೈಡರ್ಸ್(KKR) ತಂಡವನ್ನು ಗೆಲ್ಲಿಸಿದ್ದರು. ಇದಾದ ಬಳಿಕ ಅವರ ಕೀರ್ತಿ ಎಲ್ಲಡೆ ಪಸರಿಸಿತು. ಅವರ ಈ ಪ್ರದರ್ಶನ ಕಂಡ ಬಿಸಿಸಿಐ, ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಕಲ್ಪಿಸಿತು. ಸದ್ಯ ರಿಂಕು ಭಾರತ ಟಿ20 ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.
ರಿಂಕು ಸಿಂಗ್ ಅವರು ತಮ್ಮ ಊರು ಅಲಿಘರ್ನಲ್ಲಿ ಬಡ ಕ್ರಿಕೆಟ್ ಆಟಗಾರರಿಗೆ 50 ಲಕ್ಷ ಮೌಲ್ಯದಲ್ಲಿ ಮೂಲಭೂತ ಸೌಕರ್ಯಗಳುಳ್ಳ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದಾರೆ. ಈ ಹಾಸ್ಟೆಲ್ ನಿರ್ಮಾಣ ಬಹುತೇಕ ಕೊನೆಯ ಹಂತವನ್ನ ತಲುಪಿದೆ. ಮುಂದಿನ ವರ್ಷದ ಮಾರ್ಚ್ ವೇಳೆಗೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ರಿಂಕು ಅವರ ಈ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.