ಕೋಲ್ಕತ್ತಾ: ಕಳೆದ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್(IPL) ಪಂದ್ಯದಲ್ಲಿ ಯಾರು ಊಹಿಸಿದ ರೀತಿಯಲ್ಲಿ ಬ್ಯಾಟಿಂಗ್ ನಡೆಸಿದ ರಿಂಕು ಸಿಂಗ್(Rinku Singh), ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯವೊಂದರಲ್ಲಿ ಯಶ್ ದಯಾಳ್ ಎಸೆತದಲ್ಲಿ ಸತತ ಐದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಕೋಲ್ಕತಾ ನೈಟ್ ರೈಡರ್ಸ್(KKR) ತಂಡವನ್ನು ಗೆಲ್ಲಿಸಿದ್ದರು. ಇದಾದ ಬಳಿಕ ಅವರ ಕೀರ್ತಿ ಎಲ್ಲಡೆ ಪಸರಿಸಿತು. ಅವರ ಈ ಪ್ರದರ್ಶನ ಕಂಡ ಬಿಸಿಸಿಐ, ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಕಲ್ಪಿಸಿತು. ಇದೀಗ 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಗಾಗಿ ರಿಂಕು ಅವರು ಈಡನ್ ಗಾರ್ಡನ್ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಇದೇ ವೇಳೆ ಅವರು ಪುಟ್ಟ ಅಭಿಮಾನಿಗಳಿಗೆ ಆಟೋಗ್ರಾಫ್ ನೀಡಿದ ವಿಡಿಯೊವೊಂದು ವೈರಲ್ ಆಗಿದೆ.
ರಿಂಕು ಸಿಂಗ್ ಅವರು ಐಪಿಎಲ್ಗಾಗಿ ಅಭ್ಯಾಸ ನಡೆಸುವು ವೇಳೆ ಅವರ ಬ್ಯಾಟಿಂಗ್ ನೋಡಲೆಂದರೆ ಅಪಾರ ಅಭಿಮಾನಿಗಳು ಸ್ಟೇಡಿಯಂಗೆ ಬಂದಿದ್ದರು. ಇದರಲ್ಲಿ ಪುಟ್ಟ ಹುಡುಗರ ಸಂಖ್ಯೆಯೇ ಅಧಿಕವಾಗೊತ್ತು. ಇವರೆಲ್ಲ ರಿಂಕು ಜತೆ ಫೋಟೊ ಮತ್ತು ಆಟೋಗ್ರಾಫ್ ಪಡೆದುಕೊಂಡಿದ್ದಾರೆ. ರಿಂಕು ಅವರು ಈ ಪುಟ್ಟ ಅಭಿಮಾನಿಗಳ ಆಸೆಯಂತೆಯೇ ಅವರ ಹಣೆ, ಟಿ ಶರ್ಟ್, ವಿಕೆಟ್, ಕುತ್ತಿಗೆ ಮೇಲೆ ಹಸ್ತಾಕ್ಷರ ಹಾಕಿದ್ದಾರೆ. ಈ ವಿಡಿಯೊವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ತನ್ನ ಅಧಿಕೃತ ಟ್ವಿಟರ್ ಮತ್ತು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಈ ಎಲ್ಲ ಪುಟ್ಟ ಅಭಿಮಾನಿಗಳು ಬಡ ಕುಟುಂಬದ ಮಕ್ಕಳಾಗಿದ್ದಾರೆ. ರಿಂಕು ಕೂಡ ಬಡತನದಿಂದಲೇ ಬೆಳೆದು ಬಂದಿರುವ ಕಾರಣ ಅವರಿಗೆ ಬಡವರ ಆಸೆ ಮತ್ತು ಕಷ್ಟಗಳು ಏನೆಂಬುದು ತಿಖಿದಿದೆ. ಹೀಗಾಗಿ ಅವರು ಈ ಅಭಿಮಾನಿಗಳ ಆಸೆ ನೆರವೇರಿಸಿದ್ದಾರೆ.
ಇದನ್ನೂ ಓದಿ IPL 2024: ಅಭಿಮಾನಿಗಳಿಗೆ ಸಿಹಿ ಸುದ್ದಿ; ಸಂಪೂರ್ಣ ಐಪಿಎಲ್ ಆಡಲಿದ್ದಾರೆ ಈ ಸ್ಟಾರ್ ಆಟಗಾರ
ರಿಂಕು ಸದ್ಯ ಭಾರತ ಪರ 15 ಟಿ20 ಪಂದ್ಯಗಳಲ್ಲಿ 11 ಇನಿಂಗ್ಸ್ ಆಡಿ 356 ರನ್ ಬಾರಿಸಿದ್ದಾರೆ. 2 ಅರ್ಧಶತಕ ಕೂಡ ಇದರಲ್ಲಿ ದಾಖಲಾಗಿದೆ. 2 ಏಕದಿನ ಪಂದ್ಯಗಳಿಂದ 55 ರನ್ ಕಲೆಹಾಕಿದ್ದಾರೆ. ರಿಂಕು ಪ್ರದರ್ಶನ ಕಾಣುವಾಗ ಇದೇ ವರ್ಷ ಜೂನ್ನಲ್ಲಿ ನಡೆಯುವ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಅವರಿಗೆ ಸ್ಥಾನ ಖಚಿತ ಎನ್ನಬಹುದು.
ಬಡ ಕ್ರಿಕೆಟ್ ಆಟಗಾರರಿಗೆ ಹಾಸ್ಟೆಲ್ ನಿರ್ಮಾಣ
ರಿಂಕು ಸಿಂಗ್ ಅವರು ತಮ್ಮ ಊರು ಅಲಿಘರ್ನಲ್ಲಿ ಬಡ ಕ್ರಿಕೆಟ್ ಆಟಗಾರರಿಗೆ 50 ಲಕ್ಷ ಮೌಲ್ಯದಲ್ಲಿ ಮೂಲಭೂತ ಸೌಕರ್ಯವುಳ್ಳ ಹಾಸ್ಟೆಲ್ ನಿರ್ಮಾಣ ಮಾಡುತ್ತಿದ್ದಾರೆ. ಕಷ್ಟ ಏನೆಂಬುದನ್ನು ಹತ್ತಿರದಿಂದ ಕಂಡ ಅವರು ಬಡ ಕ್ರಿಕೆಟ್ ಪ್ರತಿಭೆಗಳಿಗೆ ನೆರವು ನೀಡುವ ಮೂಲಕ ಅವರ ಕನಸನ್ನು ನನಸು ಮಾಡುವ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಹಾಸ್ಟೆಲ್ ನಿರ್ಮಾಣ ಬಹುತೇಕ ಕೊನೆಯ ಹಂತವನ್ನ ತಲುಪಿದೆ. ಇದೇ ವರ್ಷದ ಮಾರ್ಚ್ ವೇಳೆಗೆ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ. ರಿಂಕು ಅವರ ಈ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಸ್ಟೆಲ್ ನಿರ್ಮಾಣದ ವಿಚಾರವನ್ನು ರಿಂಕು ಅವರು ಕಳೆದ ಬಾರಿಯ ಐಪಿಎಲ್ ಟೂರ್ನಿಯ ವೇಳೆ ಘೋಷಿಸಿದ್ದರು.