Site icon Vistara News

Rinku Singh: ರಿಂಕು ಸಿಕ್ಸರ್​ಗೆ ಪುಡಿಪುಡಿಯಾದ ಗಾಜಿನ ಕಿಟಕಿ

Rinku Singh

ಗ್ಕೆಬರ್ಹಾ: ಟೀಮ್​ ಇಂಡಿಯಾದ ಸ್ಟಾರ್​ ಯುವ ಆಟಗಾರ ರಿಂಕು ಸಿಂಗ್​ ಅವರು ಈಗಾಗಲೇ ಸಿಕ್ಸರ್​ ಕಿಂಗ್​ ಎಂದು ಖ್ಯಾತಿ ಪಡೆದಿದ್ದಾರೆ. ಇದೀಗ ಈ ಖ್ಯಾತಿಗೆ ತಕ್ಕಂತೆ ಸಿಕ್ಸರ್​ ಒಂದನ್ನು ಸಿಡಿಸಿ ಪ್ರೆಸ್ ಬಾಕ್ಸ್‌ನ ಗಾಜನ್ನು ಪುಡಿಮಾಡಿದ್ದಾರೆ. ಮಂಗಳವಾರ ನಡೆದ ದಕ್ಷಿಣ ಆಫ್ರಿಕಾ ನಡುವಣ ದ್ವಿತೀಯ ಟಿ20 ಪಂದ್ಯದಲ್ಲಿ ಈ ಘಟನೆ ನಡೆದಿದೆ.

ದಕ್ಷಿಣ ಆಫ್ರಿಕಾದ ನಾಯಕ ಏಡೆನ್ ಮಾರ್ಕ್ರಾಮ್ ಅವರ ಬೌಲಿಂಗ್​ನಲ್ಲಿ ರಿಂಕು ಎರಡು ಆಕರ್ಷಕ ಸಿಕ್ಸರ್‌ಗಳನ್ನು ಸಿಡಿಸಿದರು. ಅವುಗಳಲ್ಲಿ ಒಂದು ಸಿಕ್ಸರ್​ ನೇರವಾಗಿ ಪ್ರೆಸ್ ಬಾಕ್ಸ್‌ನ ಗಾಜಿಗೆ ಬಡಿದಿದೆ. ಚೆಂಡು ಬಡಿದ ರಭಸಕ್ಕೆ ಗ್ಲಾಸ್​ ಪುಡಿ ಪುಡಿಯಾಗಿದೆ. ಈ ವಿಡಿಯೊ ವೈರಲ್​ ಆಗಿದೆ.

ಇದೇ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್(IPL)​ ಪಂದ್ಯದಲ್ಲಿ ಯಾರು ಊಹಿಸಿದ ರೀತಿಯಲ್ಲಿ ಬ್ಯಾಟಿಂಗ್​ ನಡೆಸಿದ ರಿಂಕು ಸಿಂಗ್​ ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯವೊಂದರಲ್ಲಿ ಯಶ್‌ ದಯಾಳ್ ಎಸೆತದಲ್ಲಿ ಸತತ ಐದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಕೋಲ್ಕತಾ ನೈಟ್‌ ರೈಡರ್ಸ್(KKR) ತಂಡವನ್ನು ಗೆಲ್ಲಿಸಿದ್ದರು. ಇದಾದ ಬಳಿಕ ಅವರ ಕೀರ್ತಿ ಎಲ್ಲಡೆ ಪಸರಿಸಿತು.

ಇದನ್ನು ಓದಿ ಕೊಹ್ಲಿಯ ದಾಖಲೆ ಸರಿಗಟ್ಟಿ, ರಾಹುಲ್​ ದಾಖಲೆ ಮುರಿದ ಸೂರ್ಯಕುಮಾರ್​

ಕಷ್ಟಗಳನ್ನು ದಾಟಿ ಬಂದ ಪ್ರತಿಭೆ

ರಿಂಕು ಅವರು ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆಯಲು ತುಂಬಾ ಕಷ್ಟಗಳನ್ನು ದಾಟಿ ಬಂದ ಪ್ರತಿಭೆ. ಕಡು ಬಡತನದಲ್ಲಿ ಬೆಳೆದ ಅವರು ಕೂಲಿ ಕೆಲಸವನ್ನು ಮಾಡುವ ಜತೆಗೆ ಕ್ರಿಕೆಟ್​ ಅಭ್ಯಾಸ ನಡೆಸಿ ಇಂದು ಒಂದು ಹಂತಕ್ಕೆ ಬೆಳೆದು ನಿಂತಿದ್ದಾರೆ. ಅಂಡರ್‌-16, ಕಾಲೇಜು ಮಟ್ಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಿಂಕು ರಣಜಿಗೆ ಆಯ್ಕೆಯಾದರು. ಇಲ್ಲಿನ ಯಶಸ್ಸು ಐಪಿಎಲ್‌ ಬಾಗಿಲು ತೆರೆಯಿತು. 2017ರಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 10 ಲಕ್ಷ ರೂ.ಗೆ ಇವರನ್ನು ಖರೀದಿಸಿತು. ಮುಂದಿನ ವರ್ಷ 80 ಲಕ್ಷ ರೂ.ಗೆ ಕೆಕೆಆರ್‌ ಪಾಲಾದರು. ಆದರೆ ಬಳಿಕ ಬಿಡುಗಡೆ ಮಾಡಿತು. 2022ರಲ್ಲಿ ಮತ್ತೆ 55 ಲಕ್ಷ ರೂ.ಗೆ ಖರೀದಿಸಿತು. ಈಗ ಕೆಕೆಆರ್‌ನ ಕೀ ಪ್ಲೇಯರ್‌ ಆಗಿದ್ದಾರೆ. ಇದೀಗ ಟೀಮ್​ ಇಂಡಿಯಾದಲ್ಲೂ ನಿರೀಕ್ಷಿತ ಪ್ರದರ್ಶನ ತೋರುವ ಮೂಲಕ ತಂಡದ ಫಿನಿಶರ್​ ರೋಲ್​ ನಿರ್ವಹಿಸುತ್ತಿದ್ದಾರೆ. ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್​ನಲ್ಲಿ ಅವರು ಆಡುವುದು ಬಹುತೇಖ ಖಚಿತ ಎನ್ನಲಡ್ಡಿಯಿಲ್ಲ.

ಇದನ್ನೂ ಓದಿ ಕೊಹ್ಲಿಯ ದಾಖಲೆ ಸರಿಗಟ್ಟಿ, ರಾಹುಲ್​ ದಾಖಲೆ ಮುರಿದ ಸೂರ್ಯಕುಮಾರ್​

ನಿಷೇಧಕ್ಕೂ ಒಳಗಾಗಿದ್ದರು

2019ರಲ್ಲೊಮ್ಮೆ ರಿಂಕು ಸಿಂಗ್‌ ಬಿಸಿಸಿಐನಿಂದ ನಿಷೇಧಕ್ಕೂ ಒಳಗಾಗಿದ್ದರು. ಕಾರಣ, ಬಿಸಿಸಿಐ ಅನುಮತಿ ಪಡೆಯದೆ ವಿದೇಶಿ ಟಿ20 ಲೀಗ್‌ ಒಂದರಲ್ಲಿ ಆಡಿದ್ದು. ಈ 3 ತಿಂಗಳ ನಿಷೇಧವನ್ನು ಅನುಭವಿಸಿದ್ದರು.

ಮಳೆ ಪೀಡಿತ ಈ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಡಕ್​ವರ್ತ್​ ಲೂಯಿಸ್​ ನಿಯಮದ ಅನುಸಾರ 5 ವಿಕೆಟ್​ಗಳ ಗೆಲುವು ಸಾಧಿಸಿತು. ಸೋಲಿನಿಂದ ಸೂರ್ಯಕುಮಾರ್​ ಯಾದವ್​ ಮತ್ತು ರಿಂಕು ಸಿಂಗ್​ ಬಾರಿಸಿದ ಅರ್ಧಶತಕ ವ್ಯರ್ಥವಾಯಿತು. ಒಂದೊಮ್ಮೆ ಮಳೆ ಬಾರದೇ ಇದ್ದಿದ್ದರೆ ಭಾರತಕ್ಕೆ ಗೆಲ್ಲುವ ಸಾಧ್ಯತೆ ಇರುತ್ತಿತ್ತು.

ಆರಂಭಿಕ ಆಘಾತ ಎದುರಿಸಿದ ಭಾರತ ತಂಡಕ್ಕೆ ಆಸರೆಯಾದದ್ದು ರಿಂಕು ಸಿಂಗ್​ ಮತ್ತು ನಾಯಕ ಸೂರ್ಯಕುಮಾರ್​ ಯಾದವ್​. ಉಭಯ ಆಟಗಾರರು ಭಯ ಮುಕ್ತವಾಗಿ ಬ್ಯಾಟಿಂಗ್​ ನಡೆಸಿದರು. ಸೂರ್ಯಕುಮಾರ್​ ತಮ್ಮ ಎಂದಿನ ಶೈಲಿಯಲ್ಲೇ ಹೊಡಿ ಬಡಿ ಆಟವಾಡಿ ಅರ್ಧಶತಕ ಬಾರಿಸಿದರು. ರಿಂಕು ಜತೆಗೂಡಿ 4ನೇ ವಿಕೆಟ್​ಗೆ 70 ರನ್​ ಒಟ್ಟುಗೂಡಿಸಿದರು.

ಆರಂಭದಲ್ಲಿ ಬೌಂಡರಿ ಮಾತ್ರ ಬಾರಿಸಿದ್ದ ರಿಂಕು ಸಿಂಗ್​ ಪಂದ್ಯದ ಕೊನೆಯ 2 ಓವರ್​ ಇರುವಾಗ 2 ಸಿಕ್ಸರ್​ ಚಚ್ಚಿದರು. ಒಟ್ಟಾರೆ 39 ಎಸೆತ ಎದುರಿಸಿದ ರಿಂಕು 9 ಬೌಂಡರಿ ಮತ್ತು 2 ಸಿಕ್ಸರ್​ ನೆರವಿನಿಂದ ಅಜೇಯ 68 ರನ್​ ಬಾರಿಸಿದರು.

Exit mobile version