ಬ್ರಸೆಲ್: ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವ ಕಪ್(Fifa World Cup) ಟೂರ್ನಿಯ ಪಂದ್ಯದಲ್ಲಿ ಬೆಲ್ಜಿಯಂ ತಂಡ ಮೊರೊಕ್ಕೊ ವಿರುದ್ಧ 2-0 ಅಂತರದಲ್ಲಿ ಆಘಾತಕಾರಿ ಸೋಲು ಕಂಡ ಬೆನ್ನಲ್ಲೇ ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನ ಕೆಲವು ನಗರಗಳಲ್ಲಿ ಹಿಂಸಾಚಾರ ಘಟನೆ ನಡೆದಿದೆ.
ಬೆಲ್ಜಿಯಂ ಮತ್ತು ನೆದರ್ಲೆಂಡ್ಸ್‌ನ ಕೆಲವು ನಗರಗಳಲ್ಲಿ ಮೊರೊಕ್ಕೊದಿಂದ ವಲಸೆ ಬಂದು ನೆಲೆಸಿದ ಜನರು ತಮ್ಮ ದೇಶ ಮೊರೊಕ್ಕೊ ತಂಡ ಬೆಲ್ಜಿಯಂ ವಿರುದ್ಧ ಗೆಲುವು ಸಾಧಿಸುತ್ತಿದ್ದಂತೆ ಬೀದಿಗಿಳಿದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇದು ಘರ್ಷಣೆಗೆ ಕಾರಣವಾಗಿದೆ. ಬ್ರಸೆಲ್ಸ್‌ನಲ್ಲಿ ನಡೆದ ಈ ಹಿಂಸಾಚಾರದಲ್ಲಿ ಹಲವು ಕಾರುಗಳನ್ನು ಜಖಂಗೊಳಿಸಲಾಗಿದ್ದು, ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಸದ್ಯ ಈ ನಗರದಲ್ಲಿ ಪರಿಸ್ಥಿತಿಯನ್ನು ಹತೋಟಿಗೆ ತರುವು ನಿಟ್ಟಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಇದನ್ನೂ ಓದಿ | FIFA World Cup | ಬ್ರೆಜಿಲ್, ಘಾನಾ ತಂಡಗಳಿಗೆ ಜಯ