Site icon Vistara News

Rishabh Pant: ರಿಷಭ್​ ಪಂತ್​ ಭೇಟಿಯಾದ ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​

Rishabh Pant: Former Team India player Yuvraj Singh met Rishabh Pant

Rishabh Pant: Former Team India player Yuvraj Singh met Rishabh Pant

ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ರಿಷಭ್​ ಪಂತ್(Rishabh Pant)​ ಅವರನ್ನು ಟೀಮ್​ ಇಂಡಿಯಾದ ಮಾಜಿ ಸ್ಟಾರ್​ ಆಲ್​ರೌಂಡರ್​ ಯುವರಾಜ್​ ಸಿಂಗ್(Yuvraj Singh)​ ಭೇಟಿಯಾಗಿದ್ದಾರೆ. ಉಭಯ ಆಟಗಾರರು ಭೇಟಿಯಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

“ಪಂತ್​ ಅವರನ್ನು ಭೇಟಿಯಾದ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಯುವರಾಜ್​ ಸಿಂಗ್​ “ಚಾಂಪಿಯನ್​ ಮತ್ತೆ​ ರೆಡಿಯಾಗುತ್ತಿದ್ದಾರೆ ” ಎಂದು ಬರೆದುಕೊಂಡಿದ್ದಾರೆ.

“ಮಗುವಿನ ಹೆಜ್ಜೆಗಳ ಮೇಲೆ! ಈ ಚಾಂಪಿಯನ್ ಮತ್ತೆ ಮರಳಲಿದ್ದಾರೆ. ಸುದೀರ್ಘ ಮಾತುಕತೆ ಮತ್ತು ಒಂದಿಷ್ಟು ನಗು. ಯಾವಾಗಲೂ ತಮಾಷೆ! ನಿಮಗೆ ಹೆಚ್ಚಿನ ಶಕ್ತಿ ಸಿಗಲಿ. ಆದಷ್ಟು ಬೇಗ ನೀವು ಟೀಮ್​ ಇಂಡಿಯಾಕ್ಕೆ ಮರಳುವಂತಾಗಲಿ”​ ಎಂದು ಯುವಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ Rishabh Pant : ಸ್ವಿಮ್ಮಿಂಗ್ ಪೂಲ್​ನಲ್ಲಿರುವ ಹೊಸ ಚಿತ್ರ ಪ್ರಕಟಿಸಿದ ರಿಷಭ್​ ಪಂತ್​

ಕೆಳ ದಿನಗಳ ಹಿಂದಷ್ಟೇ ಪಂತ್​ ಅವರು ಸ್ವಿಮ್ಮಿಂಗ್​​ ಪೂಲ್​ನಲ್ಲಿ ನಡೆದಾಡುವ ವಿಡಿಯೊವೊಂದನ್ನು ಹಂಚಿಕೊಂಡಿದ್ದರು. ಈ ಮೂಲಕ ತಾವು ಚೇತರಿಕೆ ಕಾಣುತ್ತಿರುವ ವಿಚಾರವನ್ನು ತಿಳಿಸಿದ್ದರು. ಕಳೆದ ಡಿಸೆಂಬರ್​ 30 ರಂದು ದೆಹಲಿಯಿಂದ ಡೆಹ್ರಾಡೂನ್​ನಲ್ಲಿರುವ ಮನೆಗೆ ತೆರಳುತ್ತಿದ್ದ ವೇಳೆ ರಿಷಭ್​ ಪಂತ್​ ಅವರು ಚಲಾಯಿಸುತ್ತಿರುವ ಕಾರು ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಅಪಘಾತ ಪರಿಣಾಮ ಕಾರು ಸ್ಥಳದಲ್ಲೇ ಹೊತ್ತಿ ಉರಿದಿತ್ತು.

Exit mobile version