Site icon Vistara News

Rishabh Pant: ರಿಷಭ್​ ಪಂತ್​ ಕಮ್​ಬ್ಯಾಕ್​ಗೆ ಮುಹೂರ್ತ ಫಿಕ್ಸ್​; ಈ ಸರಣಿಯಲ್ಲಿ ಕಣಕ್ಕೆ

Rishabh Pant

ನವದೆಹಲಿ: ಕಳೆದ ವರ್ಷ ಡಿಸೆಂಬರ್​ ಅಂತ್ಯದಲ್ಲಿ ಭೀಕರ ಕಾರು ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾದ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ರಿಷಭ್‌ ಪಂತ್‌(Rishabh Pant Birthday) ಕ್ರಿಕೆಟ್​ ಕಬ್​ಬ್ಯಾಕ್​ಗೆ ಮುಹೂರ್ತ ಫಿಕ್ಸ್​ ಆಗಿದೆ. ಇದೇ ನವೆಂಬರ್​ ನವೆಂಬರ್​ 23ರಿಂದ ನಡೆಯಲಿರುವ ವಿಜಯ್​ ಹಜಾರೆ ಏಕದಿನ ಟ್ರೋಫಿ ಅಥವಾ ಜನವರಿ 5ರಿಂದ ಆರಂಭಗೊಳ್ಳುವ ರಣಜಿ ಟ್ರೋಫಿಯಲ್ಲಿ ತವರು(Pant likely to play domestic cricket) ರಾಜ್ಯ ದೆಹಲಿ ಪರ ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ.

ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್​ ಅಕಾಡೆಮಿಯಲ್ಲಿ (ಎನ್​ಸಿಎ) ಪುನಶ್ಚೇತನ ಶಿಬಿರದಲ್ಲಿರುವ ಪಂತ್​ ಈಗಾಗಲೆ ಬ್ಯಾಟಿಂಗ್​ ಮತ್ತು ಕೀಪಿಂಗ್​ ಅಭ್ಯಾಸ ನಡೆಸಿದ ವಿಡಿಯೊಗಳು 2 ತಿಂಗಳ ಹಿಂದೆ ವೈರಲ್​ ಆಗಿತ್ತು. ಅಲ್ಲದೆ ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಕ್ರಿಕೆಟ್​ ಅಭ್ಯಾಸ ಪಂದ್ಯವೊಂದರಲ್ಲಿ ಪಂತ್​ ಬ್ಯಾಟಿಂಗ್​ ನಡೆಸಿದ್ದರು. ತಮ್ಮ ಎಂದಿನ ಶೈಲಿಯಲ್ಲೇ ಸಿಕ್ಸರ್​ ಮತ್ತು ಬೌಂಡರಿ ಕೂಡ ಬಾರಿಸಿ ಮಿಂಚಿದ್ದರು.

ಇದನ್ನೂ ಓದಿ Rishabh Pant: ಕತ್ತಲೆಯ ಸುರಂಗದಲ್ಲಿ ಮತ್ತೆ ಬೆಳಕು ಕಂಡೆ; ಪಂತ್​ ಭಾವುಕ ಪೋಸ್ಟ್​

ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್​ ಮೇಲೆ ಬಿಸಿಸಿಐ ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್​ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಮರಳ ಬೇಕಾದರ ದೇಶೀಯ ಕ್ರಿಕೆಟ್​ನಲ್ಲಿ ಆಡಿ ತಮ್ಮ ಫಿಟ್​ಸೆನ್​ ಸಾಬೀತುಪಡಿಸಬೇಕಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿರುವುದಾಗಿ ಇನ್​ಸೈಡ್​ ಸ್ಪೋರ್ಟ್ಸ್​ಗೆ ವರದಿ ಮಾಡಿದೆ.

ವಿಜಯ್​ ಹಜಾರೆಯಲ್ಲಿ ಆಡುವ ಸಾಧ್ಯತೆ

“ಹಾಲಿ ನಡೆಯುತ್ತಿರುವ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ದೇಶೀಯ ಟಿ20 ಟೂರ್ನಿಯಲ್ಲಿ ಪಂತ್​ ಆಡುವ ನಿರೀಕ್ಷೆಯಲ್ಲಿದ್ದರು. ಆದರೆ ಸಂಪೂರ್ಣ ಫಿಟ್​ ಆಗದ ಕಾರಣ ಅವರನ್ನು ಈ ಟೂರ್ನಿಗೆ ಪರಿಗಣನೆ ಮಾಡಿಲ್ಲ. ಆದರೆ, ನವೆಂಬರ್​ 23ರಿಂದ ನಡೆಯಲಿರುವ ವಿಜಯ್​ ಹಜಾರೆ ಏಕದಿನ ಟ್ರೋಫಿಯಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಒಂದೊಮ್ಮ ಇದು ಕೂಡ ಸಾಧ್ಯವಾಗದಿದ್ದರೆ, ಜನವರಿ 5ರಿಂದ ನಡೆಯಲಿರುವ ರಣಜಿ ಟ್ರೋಫಿಯಲ್ಲಿ ಆಡುವುದು ಖಚಿತ” ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ Rishabh Pant Birthday: ಪವಾಡ ಸದೃಶ ರೀತಿಯಲ್ಲಿ ಪಾರಾದ ಪಂತ್‌ಗೆ 26ನೇ ಜನ್ಮ ದಿನದ ಸಂಭ್ರಮ

ಆಫ್ಘನ್​ ಸರಣಿಯಲ್ಲಿ ಟೀಮ್​ ಇಂಡಿಯಾ ಪರ ಕಣಕ್ಕೆ

ಏಕದಿನ ವಿಶ್ವಕಪ್ ,ಮುಗಿದ ಬಳಿಕ ಭಾರತ ತಂಡ ತವರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯಲ್ಲಿ ಆಡಲಿದೆ. ಇದು ಮುಕ್ತಾಯ ಕಂಡ ಬೆನ್ನಲ್ಲೇ ಡಿಸೆಂಬರ್​ನಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಆದರೆ ಪಂತ್​ ಈ ಸರಣಿಗೆ ಫಿಟ್​ ಆಗುವ ಸಾಧ್ಯತೆ ಕಡಿಮೆ ಇದೆ. 2024ರ ಜನವರಿ 11ರಿಂದ ಅಫಫಾನಿಸ್ತಾನ(IND vs AFG series) ವಿರುದ್ಧ ನಡೆಯಲಿರುವ 3 ಪಂದ್ಯಗಳ ಟಿ20 ಸರಣಿ ವೇಳೆಗೆ ಅವರು ಫಿಟ್​ ಆಗಿ ತಂಡದ ಪರ ಆಡುವ ನಿರೀಕ್ಷೆ ಇದೆ. ಪಂತ್​ ಅಫಘಾನಿಸ್ತಾನ ಪರ ಆಡಿದರೆ, ಜನವರಿ 25ರಿಂದ ನಡೆಯಲಿರುವ ಪ್ರವಾಸಿ ಇಂಗ್ಲೆಂಡ್​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಪಂತ್​ ಆಡಲಿದ್ದಾರೆ. ಒಟ್ಟಾರೆ ಪಂತ್​ ಅವರ ಕಮ್​ಬ್ಯಾಕ್​ಗೆ ಅಭಿಮಾನಿಗಳು ಕಾತರಗೊಂಡಿದ್ದಾರೆ.

ಡಿವೈಡರ್​ಗೆ ಡಿಕ್ಕಿಯಾದ ಕಾರು

ಕಳೆದ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

Exit mobile version