Site icon Vistara News

Rishabh Pant: ಸ್ಮರಣೀಯ ಪಂದ್ಯದಲ್ಲೂ ತಾಳ್ಮೆ ಕಳೆದುಕೊಂಡ ಪಂತ್​; ವಿಡಿಯೊ ವೈರಲ್​

Rishabh Pant

ಜೈಪುರ: ಡೆಲ್ಲಿ ಕ್ಯಾಪಿಟಲ್ಸ್(Delhi Capitals) ಪರ 100ನೇ ಐಪಿಎಲ್(IPL 2024) ಪಂದ್ಯವನ್ನಾಡಿದ ನಾಯಕ ರಿಷಭ್ ಪಂತ್(Rishabh Pant)​ ಅವರು ತಾಳ್ಮೆ ಕಳೆದುಕೊಂಡ ಫಟನೆ ಸಂಭವಿಸಿದೆ. ಔಟಾಗಿ ಪೆವಿಲಿಯನ್‌ ಕಡೆ ಹೆಜ್ಜೆ ಹಾಕುವ ವೇಳೆ ಪಂತ್​ ತಮ್ಮ ಬ್ಯಾಟನ್ನು ಜೋರಾಗಿ ಗೋಡೆಗೆ ಬಡಿದಿದ್ದಾರೆ. ಇದರ ವಿಡಿಯೊ ವೈರಲ್​ ಆಗಿದೆ.

ರಾಜಸ್ಥಾನ್ ರಾಯಲ್ಸ್​ ನೀಡಿದ ಮೊತ್ತವನ್ನು ಬೆನ್ನಟ್ಟುವ ವೇಳೆ 14ನೇ ಓವರ್‌ನ ಮೊದಲ ಎಸೆತದಲ್ಲಿ ಪಂತ್​ ಅವರು ಯಜುವೇಂದ್ರ ಚಾಹಲ್ ಎಸೆತದಲ್ಲಿ ವಿಕೆಟ್​ ಕೈಚೆಲ್ಲಿದರು. ಇವರ ವಿಕೆಟ್​ ಪತನಗೊಂಡದ್ದು ಪಂದ್ಯದ ಪ್ರಮುಖ ಹಂತದಲ್ಲಿ. ಪಂದ್ಯವನ್ನು ಗೆಲುವಿನತ್ತ ಕೊಂಡೊಯ್ಯಲು ಸಾಧ್ಯವಾಗದ ಬೇಸರ ಮತ್ತು ಸಿಟ್ಟಿನಿಂದ ಪಂತ್​ ಈ ರೀತಿಯ ವರ್ತನೆ ತೋರಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದ ಅವರು 26 ಎಸೆತಗಳಿಂದ 28 ರನ್​ ಬಾರಿಸಿದರು.

2022 ರ ಡಿಸೆಂಬರ್​ನಲ್ಲಿ ಅಪಘಾತದಿಂದ ಬದುಕುಳಿದ ನಂತರ 26 ವರ್ಷದ ಪಂತ್​​ ಇತ್ತೀಚೆಗೆ ಪಂಜಾಬ್ ಕಿಂಗ್ಸ್ ವಿರುದ್ಧದ ಋತುವಿನ ಆರಂಭಿಕ ಪಂದ್ಯದ ಸಮಯದಲ್ಲಿ ಕ್ರಿಕೆಟ್​ ಮೈದಾನಕ್ಕೆ ಪುನರಾಗಮನ ಮಾಡಿದ್ದರು. ತಮ್ಮ ಪುನರಾಗಮನದ ಪಂದ್ಯದಲ್ಲಿ ಅವರು 18 (13 ಎಸೆತ) ರನ್ ಗಳಿಸಿದ್ದರು. ಜತೆಗೆ ಒಂದು ಸ್ಟಂಪಿಂಗ್ ಮತ್ತು ಅದ್ಭುತ ಕ್ಯಾಚ್ ಪಡೆದಿದ್ದರು.

ಐಪಿಎಲ್ ಇತಿಹಾಸದಲ್ಲಿ ಡೆಲ್ಲಿ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೂ ಪಂತ್ ಪಾತ್ರರಾಗಿದ್ದಾರೆ. 99 ಇನ್ನಿಂಗ್ಸ್​ಗಳಲ್ಲಿ 34.33ರ ಸರಾಸರಿಯಲ್ಲಿ 2884 ರನ್ ಗಳಿಸಿದ್ದಾರೆ. 2018ರಲ್ಲಿ ಅವರು 14 ಇನ್ನಿಂಗ್ಸ್​ಗಳಿಂದ 52.61 ಸರಾಸರಿಯಲ್ಲಿ 684 ರನ್ ಮತ್ತು 173.6 ಸ್ಟ್ರೈಕ್​ರೇಟ್​ನೊಂದಿಗೆ ಆವೃತ್ತಿಯ ಎರಡನೇ ಅತಿ ಹೆಚ್ಚು ರನ್ ಸ್ಕೋರರ್ ಆಗಿ ಹೊರಹೊಮ್ಮಿದ್ದರು.

ಇದನ್ನೂ ಓದಿ IPL 2024 Points Table: ರಾಜಸ್ಥಾನ್​ಗೆ ಸತತ 2ನೇ ಗೆಲುವು; ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

ರಾಜಸ್ಥಾನ್​ಗೆ ಗೆಲುವು


ರಿಯಾನ್ ಪರಾಗ್​ (84 ರನ್​, 45 ಎಸೆತ, 7 ಫೋರ್, 6 ಸಿಕ್ಸರ್​) ಅವರ ಸ್ಫೋಟಕ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ಬೌಲಿಂಗ್ ದಾಳಿಯ ಮೂಲಕ ಮಿಂಚಿದ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡ ಡೆಲ್ಲಿ ಕ್ಯಾಪಿಟಲ್ಸ್ (Delhi Capital) ವಿರುದ್ಧ 12 ರನ್​ಗಳ ಗೆಲುವು ಸಾಧಿಸಿತು.

ಸವಾಯ್​ ಮಾನ್​ಸಿಂಗ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 185 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪಾಲಿನ ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 175 ರನ್​ ಬಾರಿಸಿ ಸೋಲೊಪ್ಪಿಕೊಂಡಿತು. ಕೊನೇ ಹಂತದಲ್ಲಿ ಡೆಲ್ಲಿ ತಂಡದ ಟ್ರಿಸ್ಟಾನ್​ ಸ್ಟಬ್ಸ್ 23 ಎಸೆತಕ್ಕೆ 44 ರನ್ ಬಾರಿಸಿದರೂ ಜಯ ತಂದುಕೊಡಲು ಸಾಧ್ಯವಾಗಲಿಲ್ಲ.

Exit mobile version