ಮುಂಬಯಿ: ಟೀಮ್ ಇಂಡಿಯಾದ ಕ್ರಿಕೆಟಿಗ ರಿಷಭ್ ಪಂತ್(Rishabh Pant) ಅವರು ಕ್ರಿಕೆಟ್ ಜತೆಗೆ ಯೂಟ್ಯೂಬ್ ಚಾನೆಲ್(Rishabh Pant YouTube channel) ಒಂದನ್ನು ನಡೆಸುತ್ತಿದ್ದಾರೆ. 1 ಲಕ್ಷ ಸಬ್ಸ್ಕ್ರೈಬ್ ಆದ ನಿಟ್ಟಿನಲ್ಲಿ ಯುಟ್ಯೂಬ್ ಕಡೆಯಿಂದ ಅವರಿಗೆ ಸಿಲ್ವರ್ ಪ್ಲೇ ಬಟನ್(Silver Play Button) ಸಿಕ್ಕಿದೆ. ಈ ಸಂತಸದ ವಿಚಾರವನ್ನು ಸ್ವತಃ ಪಂತ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಈ ಚಾನೆಲ್ನಿಂದ ಬರುವ ಹಣವನ್ನು ಅಸಹಾಯಕರಿಗೆ ದಾನ ಮಾಡುವುದಾಗಿ ಅವರು ತಿಳಿಸಿದ್ದಾರೆ.
ಐಪಿಎಲ್ ಸಂದರ್ಭದಲ್ಲಿ ಪಂತ್ ಅವರು ಈ ಯುಟ್ಯೂಬ್(YouTube) ಚಾನೆಲ್ ಅನ್ನು ಪ್ರಾರಂಭಿಸಿದ್ದರು. ಈ ವಿಚಾರವನ್ನು ಅವರು ವಿಡಿಯೊ ಮೂಲಕ ಟ್ವೀಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದರು. ಜತೆಗೆ ತಮ್ಮ ಈ ಚಾನೆಲ್ಗೆ ಬೆಂಬಲ ಸೂಚಿಸುವಂತೆ ಕೇಳಿಕೊಂಡಿದ್ದರು. ಇದೀಗ ಕೇವಲ ಒಂದೇ ತಿಂಗಳಿನಲ್ಲಿ ಇವರ ಚಾನೆಲ್ 1 ಲಕ್ಷ ಸಬ್ಸ್ಕ್ರೈಬ್ ಕಂಡಿದೆ.
ಪಂತ್ ಅವರು ಸದ್ಯ ಸಾಗುತ್ತಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಪಾಕ್ ವಿರುದ್ಧದ ಪಂದ್ಯದಲ್ಲಿ ಏಕಾಂಗಿ ಬ್ಯಾಟಿಂಗ್ ಹೋರಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇವರು ಆ ಪಂದ್ಯದಲ್ಲಿ ನಿಂತು ಆಡದೇ ಇದ್ದಿದ್ದರೆ ಭಾರತ 100 ಗಡಿ ಕೂಡ ದಾಟುವುದು ಕೂಡ ಕಷ್ಟವಾಗಿರುತ್ತಿತ್ತು.
2022ರ ಡಿಸೆಂಬರ್ 30ರಂದು(rishabh pant accident date) ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಆದರೆ, ಪಂತ್ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು.
ರಿಷಭ್ ಪಂತ್ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್ ಕ್ರಿಕೆಟ್ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್ ತಮ್ಮ ನಂಬಿಕೆ ಮತ್ತು ಕ್ರಿಕೆಟ್ಗೆ ಮರಳುವ ದೃಢ ಸಂಕಲ್ಪದಿಂದ ಕಠಿಣ ವ್ಯಾಯಾಮ ನಡೆಸಿ ಕೇವಲ 14 ತಿಂಗಳಲ್ಲಿ ಸಂಪೂರ್ಣ ಫಿಟ್ ಆಗಿ ಈ ಬಾರಿಯ ಐಪಿಎಲ್ ಟೂರ್ನಿ ಆಡುವ ಮೂಲಕ ಮತ್ತೆ ಕ್ರಿಕೆಟ್ ಕಮ್ಬ್ಯಾಕ್ ಮಾಡಿದ್ದರು.
ಇದನ್ನೂ ಓದಿ Rishabh Pant : ಸಂಜು ಸ್ಯಾಮ್ಸನ್ ಜತೆಗಿನ ಒಳ ಜಗಳದ ಬಗ್ಗೆ ಸ್ಪಷ್ಟನೆ ನೀಡಿದ ರಿಷಭ್ ಪಂತ್
ಸುಟ್ಟ ಗಾಯಗಳು ಹಾಗೂ ಮಂಡಿಗೆ ಗಾಯಗೊಂಡಿಗೆ ರಿಷಭ್ ಪಂತ್ಗೆ ಆರಂಭದಲ್ಲಿ ಡೆಹ್ರಾಡೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಪಂತ್ ದುಬೈಯಲ್ಲಿ ಕ್ರಿಸ್ಮಸ್ ಪಾರ್ಟಿಯಲ್ಲಿ ಮುಗಿಸಿ ಮರಳಿ ಭಾರತಕ್ಕೆ ಬಂದು ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲೆಂದು ದೆಹಲಿಯಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿತ್ತು.
ಹರಿಯಾಣ ರಾಜ್ಯ ಸಾರಿಗೆ ನಿಗಮದ ಚಾಲಕ ಸುಶೀಲ್ ಕುಮಾರ್ ಮತ್ತು ಕಂಡಕ್ಟರ್ ಪರಮ್‌ಜೀತ್ ಅಪಘಾತಕ್ಕೀಡಾಗಿ ನೋವಿನಿಂದ ನರಳುತ್ತಿದ್ದ ಕ್ರಿಕೆಟಿಗ ರಿಷಭ್ ಪಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಪಾಣ ಉಳಿಸುವಂತೆ ಮಾಡಿದ್ದರು. ರಸ್ತೆ ವಿಭಜಕಕ್ಕೆ ಕಾರೊಂದು ಡಿಕ್ಕಿ ಹೊಡೆದದ್ದನ್ನು ನೋಡಿದ ಸುಶೀಲ್ ಕುಮಾರ್ ಕುಮಾರ್ ಮತ್ತು ಪರಮ್‌ಜೀತ್ ತಕ್ಷಣ ಬಸ್ ನಿಲ್ಲಿಸಿ ಪಂತ್ ಅವರಿಗೆ ಆರೈಕೆ ಮಾಡಿದ್ದರು.