ಮುಂಬಯಿ: ಟೀಮ್ ಇಂಡಿಯಾದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ ಕಾರು ಅಪಘಾತದ ವೇಳೆ ಉಂಟಾಗಿರುವ ಗಾಯದಿಂದ ಅತಿ ವೇಗದಲ್ಲಿ ಗುಣಮುಖರಾಗುತ್ತಿದ್ದಾರೆ. ತಿಂಗಳ ಹಿಂದೆ ಊರುಗೋಲಿನ ಸಹಾಯದಿಂದ ಓಡಾಡುತ್ತಿದ್ದ ಅವರು ಕೆಲವು ದಿನಗಳ ಹಿಂದೆ ಚೆಸ್ ಆಡುತ್ತಿದ್ದ ಫೊಟೋವನ್ನು ಹಾಕಿದ್ದರು. ಇದೀಗ ಅವರು ಸ್ವಿಮ್ಮಿಂಗ್ ಪೂಲ್ನಲ್ಲಿ ನಡೆಯುತ್ತಿರುವ ಚಿತ್ರವನ್ನು ಪ್ರಕಟಿಸಿದ್ದಾರೆ.
ವಿಡಿಯೊದಲ್ಲಿ ರಿಷಭ್ ಪಂತ್ ನಿಧಾನವಾಗಿ ನಡೆದುಕೊಂಡು ಹೋಗುತ್ತಿದೆ. ಅಲ್ಲೂ ಅವರು ಊರುಗೋಲು ಹಿಡಿದುಕೊಂಡು ಹೋಗುತ್ತಿದ್ದಾರೆ. ಆದರೆ, ಸಲೀಸಾಗಿ ನಡೆದುಕೊಂಡು ಹೋಗುತ್ತಿದ್ದಾರೆ. ಈ ಮೂಲಕ ತಾವು ಬೇಗ ಗುಣಮುಖರಾಗುತ್ತಿದ್ದಾರೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಡೆಲ್ಲಿಯಿಂದ ರೂರ್ಕಿಗೆ ಪ್ರಯಾಣ ಮಾಡುತ್ತಿದ್ದ ವೇಳೆ ರಿಷಭ್ ಪಂತ್ ಅವರ ಕಾರು ಡಿವೈಡರ್ಗೆ ಗುದ್ದಿ ಸುಟ್ಟು ಕರಲಾಗಿತ್ತು. ಘಟನೆಯಲ್ಲಿ ಪವಾಡಸದೃಶ ರಿಷಭ್ ಪಂತ್ ಜೀವಂತ ಉಳಿದಿದ್ದರು. ಮೊದಲು ಡೆಹ್ರಾಡೂನ್ನಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಮಂಡಿ ನೋವಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಅವರು ಗುಣಮುಖರಾಗುವ ಹಂತದಲ್ಲಿದ್ದಾರೆ.
ಇದನ್ನೂ ಓದಿ : Rishabhh Pant : ಅಪಘಾತದ ಬಳಿಕ ಮೊದಲ ಬಾರಿ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡ ರಿಷಭ್ ಪಂತ್
ರಿಷಭ್ ಪಂತ್ ಯಾವಾಗ ತಂಡಕ್ಕೆ ಮರಳುತ್ತಾರೆ ಎಂಬುದೇ ಸದ್ಯದ ಚರ್ಚೆಯ ವಿಷಯ. ಕೆಲವರು ಎರಡು ವರ್ಷ ಬೇಕಾಗಬಹುದು ಎಂದೂ ಹೇಳುತ್ತಿದ್ದಾರೆ. ಆದರೆ, ರಿಷಭ್ ಗುಣಮುಖರಾಗುತ್ತಿರುವ ವೇಗ ನೋಡಿದರೆ ಆದಷ್ಟು ಬೇಗ ವಾಪಸಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.