ಮುಂಬಯಿ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್(Rishabh Pant) ಈಗಾಗಲೇ ಐಪಿಎಲ್ ಮತ್ತು ಐಸಿಸಿ ಟೆಸ್ಟ್ ವಿಶ್ವ ಕಪ್ನಿಂದ ಹೊರಬಿದ್ದಿದ್ದಾರೆ. ಆದರೆ ಈ ವರ್ಷ ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್ಗೆ ಅವರು ಕಮ್ಬ್ಯಾಕ್ ಮಾಡಬಹುದೆಂದು ನಿರೀಕ್ಷೆಯಲಿದ್ದವರಿಗೆ ನಿರಾಶೆಯಾಗುವ ಸುದ್ದಿಯೊಂದು ಹೊರಬಿದ್ದಿದೆ.
ಕ್ರಿಕ್‌ಬಜ್ ಮೂಲಗಳ ಪ್ರಕಾರ ರಿಷಭ್ ಪಂತ್ ಅವರು ಗಾಯದಿಂದ ಸಂಪೂರ್ಣ ಗುಣಮುಖರಾದರೂ ಅವರಿಗೆ ಕ್ರಿಕೆಟ್‌ಗೆ ಮರಳಲು ಮತ್ತೆ 7 ರಿಂದ 8 ತಿಂಗಳು ಬೇಕಾಗಬಹುದು ಹೀಗಾಗಿ ಅವರು ಏಷ್ಯಾ ಕಪ್ ಮತ್ತು ಏಕದಿನ ವಿಶ್ವ ಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿ ಮಾಡಿದೆ.
ಇದನ್ನೂ ಓದಿ Rishabh Pant: ಪಂತ್ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸುರೇಶ್ ರೈನಾ, ಶ್ರೀಶಾಂತ್, ಹರ್ಭಜನ್ ಸಿಂಗ್
“ಪಂತ್ ಅವರು ವೇಗವಾಗಿ ಚೇತರಿಕೆ ಕಾಣುತ್ತಿದ್ದಾರೆ. ಅವರ ಚೇತರಿಕೆಯ ವೇಗ ಹೇಗಿದೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಕಳೆದ ವಾರ ಅವರು ಡೆಲ್ಲಿ ತಂಡದ ಪಂದ್ಯವನ್ನು ವೀಕ್ಷಿಸಲು ಅರುಣ್ ಜೇಟ್ಲಿ ಮೈದಾನಕ್ಕೆ ಬಂದಿದ್ದರು. ಇದನೆಲ್ಲ ಗಮನಿಸುವಾಗ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಅವರು ಕ್ರಿಕೆಟ್‌ಗೆ ಮರಳಲು ಇನ್ನೂ ಹೆಚ್ಚಿನ ಸಮಯ ಬೇಕು. ಕ್ರಿಕೆಟ್‌ಗೆ ಮರಳಿದರೂ ಅವರಿಗೆ ಕೀಪಿಂಗ್ ಮಾಡಲು ಮತ್ತಷ್ಟು ಸಮಯದ ಅಗತ್ಯವಿದೆ. 2024ರಲ್ಲಿ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಇದೆ” ಎಂದು ಕ್ರಿಕ್‌ಬಜ್ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ 30 ರಂದು ರಿಷಭ್ ಅವರ ಕಾರು ಅಪಘಾತಕ್ಕೀಡಾಗಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಇದಾದ ಬಳಿಕ ಪಂತ್ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸದ್ಯ ಅವರು ಊರುಗೋಲಿನ ಸಹಾಯದಿಂದ ನಡೆದಾಟುತ್ತಿದ್ದಾರೆ.