Rishabh Pant: ಏಷ್ಯಾ ಕಪ್​, ಏಕದಿನ ವಿಶ್ವಕಪ್​ ಟೂರ್ನಿಯಿಂದಲೂ ರಿಷಭ್​ ಪಂತ್​ ಔಟ್​! - Vistara News

ಕ್ರಿಕೆಟ್

Rishabh Pant: ಏಷ್ಯಾ ಕಪ್​, ಏಕದಿನ ವಿಶ್ವಕಪ್​ ಟೂರ್ನಿಯಿಂದಲೂ ರಿಷಭ್​ ಪಂತ್​ ಔಟ್​!

ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟರ್​ ರಿಷಭ್ ಪಂತ್‌(Rishabh Pant) ಅವರು ಏಷ್ಯಾ ಕಪ್​ ಮತ್ತು ಏಕದಿನ ವಿಶ್ವ ಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಕ್ರಿಕ್​ಬಜ್​ ವರದಿ ಮಾಡಿದೆ.

VISTARANEWS.COM


on

Rishabh Pant: Rishabh Pant out of the Asia Cup, ODI World Cup!
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರುವ ಟೀಮ್‌ ಇಂಡಿಯಾ ವಿಕೆಟ್‌ ಕೀಪರ್‌ ಬ್ಯಾಟರ್​ ರಿಷಭ್ ಪಂತ್‌(Rishabh Pant) ಈಗಾಗಲೇ ಐಪಿಎಲ್​ ಮತ್ತು ಐಸಿಸಿ ಟೆಸ್ಟ್​ ವಿಶ್ವ ಕಪ್​ನಿಂದ ಹೊರಬಿದ್ದಿದ್ದಾರೆ. ಆದರೆ ಈ ವರ್ಷ ಭಾರತ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​ಗೆ ಅವರು ಕಮ್​ಬ್ಯಾಕ್​ ಮಾಡಬಹುದೆಂದು ನಿರೀಕ್ಷೆಯಲಿದ್ದವರಿಗೆ ನಿರಾಶೆಯಾಗುವ ಸುದ್ದಿಯೊಂದು ಹೊರಬಿದ್ದಿದೆ.

ಕ್ರಿಕ್‌ಬಜ್ ಮೂಲಗಳ ಪ್ರಕಾರ ರಿಷಭ್ ಪಂತ್ ಅವರು ಗಾಯದಿಂದ ಸಂಪೂರ್ಣ ಗುಣಮುಖರಾದರೂ ಅವರಿಗೆ ಕ್ರಿಕೆಟ್​ಗೆ ಮರಳಲು ಮತ್ತೆ 7 ರಿಂದ 8 ತಿಂಗಳು ಬೇಕಾಗಬಹುದು ಹೀಗಾಗಿ ಅವರು ಏಷ್ಯಾ ಕಪ್​ ಮತ್ತು ಏಕದಿನ ವಿಶ್ವ ಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿ ಮಾಡಿದೆ.

ಇದನ್ನೂ ಓದಿ Rishabh Pant: ಪಂತ್​ ಭೇಟಿಯಾಗಿ ಆರೋಗ್ಯ ವಿಚಾರಿಸಿದ ಸುರೇಶ್​ ರೈನಾ, ಶ್ರೀಶಾಂತ್​, ಹರ್ಭಜನ್​ ಸಿಂಗ್​

“ಪಂತ್‌ ಅವರು ವೇಗವಾಗಿ ಚೇತರಿಕೆ ಕಾಣುತ್ತಿದ್ದಾರೆ. ಅವರ ಚೇತರಿಕೆಯ ವೇಗ ಹೇಗಿದೆ ಎಂಬುದನ್ನು ನಾವು ಈಗಾಗಲೇ ನೋಡಿದ್ದೇವೆ. ಕಳೆದ ವಾರ ಅವರು ಡೆಲ್ಲಿ ತಂಡದ ಪಂದ್ಯವನ್ನು ವೀಕ್ಷಿಸಲು ಅರುಣ್​ ಜೇಟ್ಲಿ ಮೈದಾನಕ್ಕೆ ಬಂದಿದ್ದರು. ಇದನೆಲ್ಲ ಗಮನಿಸುವಾಗ ಅವರು ಶೀಘ್ರದಲ್ಲೇ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಆದರೆ ಅವರು ಕ್ರಿಕೆಟ್​ಗೆ ಮರಳಲು ಇನ್ನೂ ಹೆಚ್ಚಿನ ಸಮಯ ಬೇಕು. ಕ್ರಿಕೆಟ್​ಗೆ ಮರಳಿದರೂ ಅವರಿಗೆ ಕೀಪಿಂಗ್​ ಮಾಡಲು ಮತ್ತಷ್ಟು ಸಮಯದ ಅಗತ್ಯವಿದೆ. 2024ರಲ್ಲಿ ಅವರು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಇದೆ” ಎಂದು ಕ್ರಿಕ್​ಬಜ್​ ತಿಳಿಸಿದೆ.

ಕಳೆದ ವರ್ಷ ಡಿಸೆಂಬರ್ 30 ರಂದು ರಿಷಭ್‌ ಅವರ ಕಾರು ಅಪಘಾತಕ್ಕೀಡಾಗಿ ಅವರಿಗೆ ಗಂಭೀರ ಸ್ವರೂಪದ ಗಾಯಗಳಾಗಿತ್ತು. ಇದಾದ ಬಳಿಕ ಪಂತ್‌ ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸದ್ಯ ಅವರು ಊರುಗೋಲಿನ ಸಹಾಯದಿಂದ ನಡೆದಾಟುತ್ತಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಐಪಿಎಲ್ 2024

IPL 2024 Points Table: ಮುಂಬೈ ವಿರುದ್ಧ ಹೈದರಾಬಾದ್‌ ಗೆದ್ದ ಬಳಿಕ ಅಂಕಪಟ್ಟಿ ಹೇಗಿದೆ?

IPL 2024 Points Table: ಮುಂಬೈ ಇಂಡಿಯನ್ಸ್‌ ವಿರುದ್ಧ ಭರ್ಜರಿ ಗೆಲುವು ಸಾಧಿಸಿರುವ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಅಂಕಪಟ್ಟಿಯಲ್ಲಿ ಮೇಲೇರಿದೆ. ಯಾವ ತಂಡ ಯಾವ ಸ್ಥಾನದಲ್ಲಿದೆ ಎಂಬುದರ ಅಂಕಪಟ್ಟಿ ಹೀಗಿದೆ.

VISTARANEWS.COM


on

SRH
Koo

ಹೈದರಾಬಾದ್:‌ ರನ್‌ಗಳ ಸುರಿಮಳೆಯೇ ಸುರಿದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡವು 31 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ 2024ರ ಐಪಿಎಲ್‌ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಸತತ ಎರಡನೇ ಸೋಲು ಕಂಡ ಮುಂಬೈ ಇಂಡಿಯನ್ಸ್‌ ತಂಡವು 9ನೇ ಸ್ಥಾನಕ್ಕೆ ಕುಸಿದಿದೆ. ಮುಂಬೈ ಹಾಗೂ ಹೈದರಾಬಾದ್‌ ಪಂದ್ಯದ ಬಳಿಕ ಅಂಕಪಟ್ಟಿ (IPL 2024 Points Table) ಹೇಗಿದೆ? ಯಾರು ಯಾವ ಸ್ಥಾನದಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ತಂಡಪಂದ್ಯಗೆಲುವುಸೋಲುಅಂಕ
​ ಚೆನ್ನೈ ಸೂಪರ್​ ಕಿಂಗ್ಸ್​2204 (+1.979)
ರಾಜಸ್ಥಾನ್​ ರಾಯಲ್ಸ್1102 (+1.000)
ಸನ್​ರೈಸರ್ಸ್​ ಹೈದರಾಬಾದ್​2112 (+0.675)
ಕೋಲ್ಕೊತಾ ನೈಟ್‌ ರೈಡರ್ಸ್1102(+200)
ಪಂಜಾಬ್‌ ಕಿಂಗ್ಸ್2112‌ (+0.025)
ಆರ್‌ಸಿಬಿ2112 (-0.180)
ಗುಜರಾತ್‌ ಟೈಟಾನ್ಸ್2112 (-1.425)
ಡೆಲ್ಲಿ ಕ್ಯಾಪಿಟಲ್ಸ್1010 (-0.925)
ಮುಂಬೈ ಇಂಡಿಯನ್ಸ್2020 (-1000)
ಲಕ್ನೋ ಸೂಪರ್​ ಜೈಂಟ್ಸ್​1010 (-1.000)

ಹೈದರಾಬಾದ್‌ನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆತಿಥೇಯ ಸನ್​ರೈಸರ್ಸ್ ಹೈದರಾಬಾದ್​ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 277 ರನ್​ ಬಾರಿಸಿತು. ಈ ದೊಡ್ಡ ಮೊತ್ತವನ್ನು ಅಷ್ಟೇ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಮುಂಬೈ ಅಂತಿಮವಾಗಿ 5 ವಿಕೆಟ್​ಗೆ 246 ರನ್​ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ 523 ರನ್​ ದಾಖಲಾಯಿತು. ಇದು ಐಪಿಎಲ್​ನಲ್ಲಿ 2 ತಂಡಗಳು ಸೇರಿ ಬಾರಿಸಿದ ಗರಿಷ್ಠ ಮೊತ್ತದ ದಾಖಲೆ. ಈ ಹಿಂದೆ 2010ರಲ್ಲಿ ಚೆನ್ನೈ ಮತ್ತು ಕೆಕೆಆರ್​ ನಡುವಣ ಪಂದ್ಯದಲ್ಲಿ 469 ರನ್​ ಹರಿದು ಬಂದಿತ್ತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಆರಂಭಿಕರಾದ ಇಶಾನ್​ ಕಿಶನ್​ ಮತ್ತು ಮುಂಬೈ ಪರ 200ನೇ ಪಂದ್ಯದಲ್ಲಿ ಆಡಲಿಳಿದ ಮಾಜಿ ನಾಯಕ ರೋಹಿತ್​ ಶರ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಅಡಿಪಾಯ ನಿರ್ಮಿಸಿದರು. ಇವರಿಬ್ಬರ ಬ್ಯಾಟಿಂಗ್​ ಆರ್ಭಟದಿಂದ ತಂಡ ಕೇವಲ ಮೂರು ಓವರ್​ಗೆ ವಿಕೆಟ್​ ನಷ್ಟವಿಲ್ಲದೆ 50 ರನ್​ ಕಲೆಹಾಕಿತು.

ಆದರೆ, ಉಭಯ ಆಟಗಾರರ ಈ ಬ್ಯಾಟಿಂಗ್​ ಜೋಶ್​ ಹೆಚ್ಚು ಹೊತ್ತು ಸಾಗಲಿಲ್ಲ. ಅಬ್ದುಲ್​ ಸಮದ್​ ಅವರಿಂದ ಒಂದು ಜೀವದಾನ ಪಡೆದರೂ ಕೂಡ ರೋಹಿತ್​ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು. 26 ರನ್​ ಗಳಿಸಿ ನಾಯಕ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಇಶಾನ್​ ಕಿಶನ್​ 13 ಎಸೆತಗಳಿಂದ 34 (4 ಸಿಕ್ಸರ್​, 3 ಬೌಂಡರಿ) ರನ್​ ಬಾರಿಸಿದರು. ಬಳಿಕ ಬಂದ ನಮನ್ ಧೀರ್ ಮತ್ತು ತಿಲಕ್​ ವರ್ಮ ಕೂಡ ಬಿರುಸಿನ ಆಟವಾಡಿ ತಂಡದ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಪಟ್ಟರು. ಮುಂಬೈ 10 ಓವರ್​ಗೆ 140 ರನ್​ ಗಡಿ ದಾಡಿದ ವೇಳೆ ಈ ಬೃಹತ್​ ಮೊತ್ತವನ್ನು ಕೂಡ ಚೇಸಿಂಗ್​ ಮಾಡಿ ಗೆಲ್ಲುವ ಸೂಚನೆ ನೀಡಿತು. ಆದರೆ ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ಬೌಲರ್​ಗಳು ಲಯಬದ್ಧ ಬೌಲಿಂಗ್​ ನಡೆಸಿ ಪಂದ್ಯವನ್ನು ಹಿಡಿತಕ್ಕೆ ತಂದರು.

ಮೊದಲು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್​ ಪರ ಅಗರ್ವಾಲ್(11)​ ಹೊರತುಪಡಿಸಿ ಉಳಿದ ಎಲ್ಲ ಬ್ಯಾಟರ್​ಗಳು ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗಮನಸೆಳೆದರು. ಅದರಲ್ಲೂ 2ನೇ ವಿಕೆಟ್​ಗೆ ಜತೆಯಾದ ಅಭಿಷೇಕ್​ ಶರ್ಮಾ ಮತ್ತು ಆರಂಭಕಾರ ಟ್ರಾವಿಸ್​ ಹೆಡ್​ ಪೈಪೋಟಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿ ಮುಂಬೈ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟಕ್ಕೆ ಮುಂಬೈ ​7 ಓವರ್​ ಆಗುವ ಮುನ್ನವೇ 100ರ ಗಡಿ ದಾಟಿತು.

ತಿಲಕ್​ ವರ್ಮಾ(64) ಮತ್ತು ನಮನ್ ಧೀರ್(30) ರನ್​ ಗಳಿಸಿದರು. ಬಳಿಕ ಬಂದ ನಾಯಕ ಹಾರ್ದಿಕ್​ ಪಾಂಡ್ಯ(24) ಹಾಗೂ ಟಿಮ್​ ಡೇವಿಡ್(42*)​ ರನ್​ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಹೈದರಾಬಾದ್​ ಪರ ನಾಯಕ ಕಮಿನ್ಸ್​ ಹಾಗೂ ಉನಾದ್ಕತ್​ ತಲಾ 2 ವಿಕೆಟ್​ ಪಡೆದರು.

ಬೌಲರ್​ಗಳನ್ನು ಚಿಂದಿ ಮಾಡಿದ ಹೆಡ್​-ಅಭಿಷೇಕ್

ವಿಶ್ವಕಪ್​ ಹೀರೊ ಟ್ರಾವಿಸ್​ ಹೆಡ್​ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಇವರ ಜತೆಗಾರ ಅಭಿಷೇಕ್​ ಶರ್ಮ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಜೋಡಿ ದ್ವಿತೀಯ ವಿಕೆಟ್​ಗೆ 68 ರನ್​ ಒಟ್ಟುಗೂಡಿಸಿತು. ಹೆಡ್​ 24 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 62 ರನ್​ ಬಾರಿಸಿದರು. ಅಭಿಷೇಕ್​ ಶರ್ಮಾ 23 ಎಸೆತ ಎದುರಿಸಿ 7 ಸೊಗಸಾದ ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಸಿ 63 ರನ್​ ಕಲೆಹಾಕಿದರು. ಈ ಮೊತ್ತ ಬಾರಿಸಲು ಅವರು ಎದುರಿಸಿದ್ದು ಕೇವಲ 23 ಎಸೆತ. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದ ಮುಂದೆ ಮುಂಬೈ ತಂಡದ ಬೌಲಿಂಗ್​ ಸಂಪೂರ್ಣ ಹಳಿ ತಪ್ಪಿತು. ಹೆಡ್​ ಮತ್ತು ಅಭಿಷೇಕ್​ ಹೈದರಾಬಾದ್​ ಪರ ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದರು.

ಇದನ್ನೂ ಓದಿ: MI vs SRH: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್​’; ಮುಂಬೈಗೆ ಸತತ 2ನೇ ಸೋಲು

ಸಿಡಿದ ಕ್ಲಾಸೆನ್

ಕಳೆದ ಕೆಕೆಆರ್​ ವಿರುದ್ಧ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರಿದ್ದ ಹೆನ್ರಿಚ್​ ಕ್ಲಾಸೆನ್​ ಈ ಪಂದ್ಯದಲ್ಲಿಯೂ ಸಿಡಿದು ನಿಂತರು. ಕ್ರೀಸ್​ಗಿಳಿದ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತುಕೊಟ್ಟ ಅವರು ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ತವರಿನ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಇವರಿಗೆ ಏಡನ್​ ಮಾರ್ಕ್ರಮ್​ ಕೂಡ ಉತ್ತಮ ಸಾಥ್​ ನೀಡಿದರು. ತಾನೇನು ಕಮ್ಮಿ ಇಲ್ಲ ಎನ್ನುವಂತೆ ಕ್ಲಾಸೆನ್ ಕೂಡ 22 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಮುಂಬೈ ಪರ ಜಸ್​​ಪ್ರೀತ್​ ಬುಮ್ರಾ ಅವರನ್ನು ಬಿಟ್ಟು ಉಳಿದೆಲ್ಲ ಬೌಲರ್​ಗಳು ದುಬಾರಿಯಾದರು. ನಾಯಕ ಪಾಂಡ್ಯ ಒಂದು ವಿಕೆಟ್​ ಕಿತ್ತರೂ ಕೂಡ 46 ರನ್​ ಬಿಟ್ಟುಕೊಟ್ಟರು.‌

ಚೊಚ್ಚಲ ಐಪಿಎಲ್​ ಪಂದ್ಯವನ್ನಾಡಿದ ದಕ್ಷಿಣ ಆಫ್ರಿಕಾದ 17 ವರ್ಷದ ಕ್ವೆನಾ ಮಫಕಾ ಅವರಂತೂ ಸರಿಯಾಗಿ ರನ್​ ಹೊಡೆಸಿಕೊಂಡರು. 4 ಓವರ್​ ಎಸೆದು 66 ರನ್​ ಬಿಟ್ಟುಕೊಟ್ಟರು. ಸ್ಪಿನ್ನರ್​ ಪಿಯೂಷ್ ಚಾವ್ಲಾ ಕೇವಲ 2 ಓವರ್​ಗೆ 34 ರನ್​ ಚಚ್ಚಿಸಿಕೊಂಡರು. ಕ್ಲಾಸೆನ್​ 34 ಎಸೆತದಿಂದ ಅಜೇಯ 80 ರನ್​ ಬಾರಿಸಿದರು. ಸಿಡಿದ್ದು 7 ಸಿಕ್ಸರ್​ ಮತ್ತು 4 ಬೌಂಡರಿ. ಮಾರ್ಕ್ರಮ್ ಕೂಡ 42 ರನ್​ ಬಾರಿಸಿ ಅಜೇಯರಾಗಿ ಉಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೀಡೆ

MI vs SRH: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್​’; ಮುಂಬೈಗೆ ಸತತ 2ನೇ ಸೋಲು

MI vs SRH: ಮುಂಬೈ ಇಂಡಿಯನ್ಸ್​ ವಿರುದ್ಧ ಸನ್​ರೈಸರ್ಸ್​ ಹೈದರಾಬಾದ್​ 31 ರನ್​ ಅಂತರದಿಂದ ಗೆದ್ದು ಬೀಗಿದೆ.

VISTARANEWS.COM


on

Shahbaz Ahmed celebrates nabbing Ishan Kishan
Koo

ಹೈದರಾಬಾದ್​: ಮುತ್ತಿನ ನಗರಿ ಹೈದರಾಬಾದ್​ನಲ್ಲಿ ಬುಧವಾರ ಸಿಕ್ಸರ್​ಗಳ ಸುರಿಮಳೆಯೇ ಸುರಿಯಿತು. ಮುಂಬೈ ಇಂಡಿಯನ್ಸ್​ ಮತ್ತು ಸನ್​ರೈಸರ್ಸ್​ ಹೈದರಾಬಾದ್​ ತಂಡಗಳ ಆಟಗಾರರು ತಮ್ಮ ಸ್ಫೋಟಕ ಬ್ಯಾಟಿಂಗ್​ ಮೂಲಕ ಈ ಸಿಕ್ಸರ್​ಗಳ ಮಳೆಗೆ ಕಾರಣರಾದರು. ಅಂತಿಮವಾಗಿ ಪಂದ್ಯದಲ್ಲಿ ತವರಿನ ತಂಡವಾದ ಸನ್​ರೈಸರ್ಸ್​ ಹೈದರಾಬಾದ್ 31 ರನ್​ ಅಂತರದಿಂದ ಗೆದ್ದು ಬೀಗಿತು​. ಮುಂಬೈ ಸತತ 2ನೇ ಸೋಲಿನ ಅವಮಾನಕ್ಕೆ ಸಿಲುಕಿತು.

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆತಿಥೇಯ ಸನ್​ರೈಸರ್ಸ್ ಹೈದರಾಬಾದ್​ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 277 ರನ್​ ಬಾರಿಸಿತು. ಈ ದೊಡ್ಡ ಮೊತ್ತವನ್ನು ಅಷ್ಟೇ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಮುಂಬೈ ಅಂತಿಮವಾಗಿ 5 ವಿಕೆಟ್​ಗೆ 246 ರನ್​ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ 523 ರನ್​ ದಾಖಲಾಯಿತು. ಇದು ಐಪಿಎಲ್​ನಲ್ಲಿ 2 ತಂಡಗಳು ಸೇರಿ ಬಾರಿಸಿದ ಗರಿಷ್ಠ ಮೊತ್ತದ ದಾಖಲೆ. ಈ ಹಿಂದೆ 2010ರಲ್ಲಿ ಚೆನ್ನೈ ಮತ್ತು ಕೆಕೆಆರ್​ ನಡುವಣ ಪಂದ್ಯದಲ್ಲಿ 469 ರನ್​ ಹರಿದು ಬಂದಿತ್ತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಆರಂಭಿಕರಾದ ಇಶಾನ್​ ಕಿಶನ್​ ಮತ್ತು ಮುಂಬೈ ಪರ 200ನೇ ಪಂದ್ಯದಲ್ಲಿ ಆಡಲಿಳಿದ ಮಾಜಿ ನಾಯಕ ರೋಹಿತ್​ ಶರ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಅಡಿಪಾಯ ನಿರ್ಮಿಸಿದರು. ಇವರಿಬ್ಬರ ಬ್ಯಾಟಿಂಗ್​ ಆರ್ಭಟದಿಂದ ತಂಡ ಕೇವಲ ಮೂರು ಓವರ್​ಗೆ ವಿಕೆಟ್​ ನಷ್ಟವಿಲ್ಲದೆ 50 ರನ್​ ಕಲೆಹಾಕಿತು.

ಆದರೆ, ಉಭಯ ಆಟಗಾರರ ಈ ಬ್ಯಾಟಿಂಗ್​ ಜೋಶ್​ ಹೆಚ್ಚು ಹೊತ್ತು ಸಾಗಲಿಲ್ಲ. ಅಬ್ದುಲ್​ ಸಮದ್​ ಅವರಿಂದ ಒಂದು ಜೀವದಾನ ಪಡೆದರೂ ಕೂಡ ರೋಹಿತ್​ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು. 26 ರನ್​ ಗಳಿಸಿ ನಾಯಕ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಇಶಾನ್​ ಕಿಶನ್​ 13 ಎಸೆತಗಳಿಂದ 34 (4 ಸಿಕ್ಸರ್​, 3 ಬೌಂಡರಿ) ರನ್​ ಬಾರಿಸಿದರು. ಬಳಿಕ ಬಂದ ನಮನ್ ಧೀರ್ ಮತ್ತು ತಿಲಕ್​ ವರ್ಮ ಕೂಡ ಬಿರುಸಿನ ಆಟವಾಡಿ ತಂಡದ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಪಟ್ಟರು. ಮುಂಬೈ 10 ಓವರ್​ಗೆ 140 ರನ್​ ಗಡಿ ದಾಡಿದ ವೇಳೆ ಈ ಬೃಹತ್​ ಮೊತ್ತವನ್ನು ಕೂಡ ಚೇಸಿಂಗ್​ ಮಾಡಿ ಗೆಲ್ಲುವ ಸೂಚನೆ ನೀಡಿತು. ಆದರೆ ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ಬೌಲರ್​ಗಳು ಲಯಬದ್ಧ ಬೌಲಿಂಗ್​ ನಡೆಸಿ ಪಂದ್ಯವನ್ನು ಹಿಡಿತಕ್ಕೆ ತಂದರು.

ಮೊದಲು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್​ ಪರ ಅಗರ್ವಾಲ್(11)​ ಹೊರತುಪಡಿಸಿ ಉಳಿದ ಎಲ್ಲ ಬ್ಯಾಟರ್​ಗಳು ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗಮನಸೆಳೆದರು. ಅದರಲ್ಲೂ 2ನೇ ವಿಕೆಟ್​ಗೆ ಜತೆಯಾದ ಅಭಿಷೇಕ್​ ಶರ್ಮಾ ಮತ್ತು ಆರಂಭಕಾರ ಟ್ರಾವಿಸ್​ ಹೆಡ್​ ಪೈಪೋಟಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿ ಮುಂಬೈ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟಕ್ಕೆ ಮುಂಬೈ ​7 ಓವರ್​ ಆಗುವ ಮುನ್ನವೇ 100ರ ಗಡಿ ದಾಟಿತು.

ಇದನ್ನೂ ಓದಿ IPL 2024: ಐಪಿಎಲ್​ನಲ್ಲಿ ದಾಖಲೆ ನೂತನ ಬರೆದ ಹೈದರಾಬಾದ್; ಆರ್​ಸಿಬಿ ರೆಕಾರ್ಡ್ ಉಡೀಸ್​​

ತಿಲಕ್​ ವರ್ಮಾ(64) ಮತ್ತು ನಮನ್ ಧೀರ್(30) ರನ್​ ಗಳಿಸಿದರು. ಬಳಿಕ ಬಂದ ನಾಯಕ ಹಾರ್ದಿಕ್​ ಪಾಂಡ್ಯ(24) ಹಾಗೂ ಟಿಮ್​ ಡೇವಿಡ್(42*)​ ರನ್​ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಹೈದರಾಬಾದ್​ ಪರ ನಾಯಕ ಕಮಿನ್ಸ್​ ಹಾಗೂ ಉನಾದ್ಕತ್​ ತಲಾ 2 ವಿಕೆಟ್​ ಪಡೆದರು.

ಬೌಲರ್​ಗಳನ್ನು ಚಿಂದಿ ಮಾಡಿದ ಹೆಡ್​-ಅಭಿಷೇಕ್

ವಿಶ್ವಕಪ್​ ಹೀರೊ ಟ್ರಾವಿಸ್​ ಹೆಡ್​ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಇವರ ಜತೆಗಾರ ಅಭಿಷೇಕ್​ ಶರ್ಮ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಜೋಡಿ ದ್ವಿತೀಯ ವಿಕೆಟ್​ಗೆ 68 ರನ್​ ಒಟ್ಟುಗೂಡಿಸಿತು. ಹೆಡ್​ 24 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 62 ರನ್​ ಬಾರಿಸಿದರು. ಅಭಿಷೇಕ್​ ಶರ್ಮಾ 23 ಎಸೆತ ಎದುರಿಸಿ 7 ಸೊಗಸಾದ ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಸಿ 63 ರನ್​ ಕಲೆಹಾಕಿದರು. ಈ ಮೊತ್ತ ಬಾರಿಸಲು ಅವರು ಎದುರಿಸಿದ್ದು ಕೇವಲ 23 ಎಸೆತ. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದ ಮುಂದೆ ಮುಂಬೈ ತಂಡದ ಬೌಲಿಂಗ್​ ಸಂಪೂರ್ಣ ಹಳಿ ತಪ್ಪಿತು. ಹೆಡ್​ ಮತ್ತು ಅಭಿಷೇಕ್​ ಹೈದರಾಬಾದ್​ ಪರ ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆಡರು ಸ್ಥಾನ ಪಡೆದರು.

ಮತ್ತೆ ಸಿಡಿದ ಕ್ಲಾಸೆನ್​


ಕಳೆದ ಕೆಕೆಆರ್​ ವಿರುದ್ಧ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರಿದ್ದ ಹೆನ್ರಿಚ್​ ಕ್ಲಾಸೆನ್​ ಈ ಪಂದ್ಯದಲ್ಲಿಯೂ ಸಿಡಿದು ನಿಂತರು. ಕ್ರೀಸ್​ಗಿಳಿದ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತುಕೊಟ್ಟ ಅವರು ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ತವರಿನ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಇವರಿಗೆ ಏಡನ್​ ಮಾರ್ಕ್ರಮ್​ ಕೂಡ ಉತ್ತಮ ಸಾಥ್​ ನೀಡಿದರು. ತಾನೇನು ಕಮ್ಮಿ ಇಲ್ಲ ಎನ್ನುವಂತೆ ಕ್ಲಾಸೆನ್ ಕೂಡ 22 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಮುಂಬೈ ಪರ ಜಸ್​​ಪ್ರೀತ್​ ಬುಮ್ರಾ ಅವರನ್ನು ಬಿಟ್ಟು ಉಳಿದೆಲ್ಲ ಬೌಲರ್​ಗಳು ದುಬಾರಿಯಾದರು. ನಾಯಕ ಪಾಂಡ್ಯ ಒಂದು ವಿಕೆಟ್​ ಕಿತ್ತರೂ ಕೂಡ 46 ರನ್​ ಬಿಟ್ಟುಕೊಟ್ಟರು.

ಚೊಚ್ಚಲ ಐಪಿಎಲ್​ ಪಂದ್ಯವನ್ನಾಡಿದ ದಕ್ಷಿಣ ಆಫ್ರಿಕಾದ 17 ವರ್ಷದ ಕ್ವೆನಾ ಮಫಕಾ ಅವರಂತೂ ಸರಿಯಾಗಿ ರನ್​ ಹೊಡೆಸಿಕೊಂಡರು. 4 ಓವರ್​ ಎಸೆದು 66 ರನ್​ ಬಿಟ್ಟುಕೊಟ್ಟರು. ಸ್ಪಿನ್ನರ್​ ಪಿಯೂಷ್ ಚಾವ್ಲಾ ಕೇವಲ 2 ಓವರ್​ಗೆ 34 ರನ್​ ಚಚ್ಚಿಸಿಕೊಂಡರು. ಕ್ಲಾಸೆನ್​ 34 ಎಸೆತದಿಂದ ಅಜೇಯ 80 ರನ್​ ಬಾರಿಸಿದರು. ಸಿಡಿದ್ದು 7 ಸಿಕ್ಸರ್​ ಮತ್ತು 4 ಬೌಂಡರಿ. ಮಾರ್ಕ್ರಮ್ ಕೂಡ 42 ರನ್​ ಬಾರಿಸಿ ಅಜೇಯರಾಗಿ ಉಳಿದರು.

ದಾಖಲೆ ಬರೆದ ಹೈದರಾಬಾದ್​


ಹೈದರಾಬಾದ್​ ತಂಡ ಈ ಬೃಹತ್​ ಮೊತ್ತವನ್ನು ಬಾರಿಸುವ ಮೂಲಕ ಐಪಿಎಲ್​(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್​ ಪೇರಿಸಿದ ಮೊದಲ ತಂಡ ಎಂಬ ದಾಖಲೆ ಬರೆಯಿತು. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ ದಾಖಲೆಯನ್ನು ಮುರಿಯಿತು. ಆರ್​ಸಿಬಿ 2013ರಲ್ಲಿ ಪುಣೆ ವಾರಿಯರ್ಸ್​ ವಿರುದ್ಧ 5 ವಿಕೆಟ್​ಗೆ 263 ರನ್​ ಬಾರಿಸಿತ್ತು. ಇದೀಗ ಸನ್​ರೈಸರ್ಸ್​ 3 ವಿಕೆಟ್​ಗೆ 277 ರನ್​ ಬಾರಿಸುವ ಕಳೆದ 11 ವರ್ಷಗಳಿಂದ ಆರ್​ಸಿಬಿ ಹೆಸರಿನಲ್ಲಿ ದಾಖಲೆಯನ್ನು ಮೀರಿ ನಿಂತಿದೆ.

Continue Reading

ಕ್ರಿಕೆಟ್

IPL 2024: ಐಪಿಎಲ್​ನಲ್ಲಿ ದಾಖಲೆ ನೂತನ ಬರೆದ ಹೈದರಾಬಾದ್; ಆರ್​ಸಿಬಿ ರೆಕಾರ್ಡ್ ಉಡೀಸ್​​

IPL 2024: ಐಪಿಎಲ್​(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್​ ಪೇರಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆ ರೈಸರ್ಸ್​ ಹೈದರಾಬಾದ್ ತಂಡ ಪಾತ್ರವಾಗಿದೆ.

VISTARANEWS.COM


on

Sunrisers Hyderabad
Koo

ಹೈದರಾಬಾದ್​: ಸನ್​ರೈಸರ್ಸ್​ ಹೈದರಾಬಾದ್​ ತಂಡ ಐಪಿಎಲ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದೆ. ಐಪಿಎಲ್​(IPL 2024) ಇತಿಹಾಸದಲ್ಲೇ ಅತ್ಯಧಿಕ ರನ್​ ಪೇರಿಸಿದ ಮೊದಲ ತಂಡ ಎನಿಸಿಕೊಂಡಿದೆ. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ ದಾಖಲೆಯನ್ನು ಮುರಿದಿದೆ.

ಇಲ್ಲಿನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್​ ವಿರುದ್ಧ ನಡೆಯುತ್ತಿರುವ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್​ ನಡೆಸಿ 20 ಓವರ್​ಗಳಲ್ಲಿ 3 ವಿಕೆಟ್​ಗೆ 277 ರನ್​ ಬಾರಿಸಿದೆ. ಈ ಮೂಲಕ ಆರ್​ಸಿಬಿ ಹೆಸರಿನಲ್ಲಿದ್ದ ದಾಖಲೆಯನ್ನು ಹಿಂದಿಕ್ಕಿದೆ. ಆರ್​ಸಿಬಿ 2013ರಲ್ಲಿ ಪುಣೆ ವಾರಿಯರ್ಸ್​ ವಿರುದ್ಧ 5 ವಿಕೆಟ್​ಗೆ 263 ರನ್​ ಬಾರಿಸಿತ್ತು. ಇದೀಗ ಈ ದಾಖಲೆಯನ್ನು ಹೈದರಾಬಾದ್​ 11 ವರ್ಷಗಳ ಬಳಿಕ ಮೀರಿ ನಿಂತಿದೆ.

ಐಪಿಎಲ್​ನಲ್ಲಿ ಅತಿ ಹೆಚ್ಚು ರನ್​ ಬಾರಿಸಿದ ತಂಡಗಳು


ಸನ್​ರೈಸರ್ಸ್​ ಹೈದರಾಬಾದ್​-3 ವಿಕೆಟ್​ಗೆ 277(ಮುಂಬೈ ಇಂಡಿಯನ್ಸ್​ ವಿರುದ್ಧ)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು 5 ವಿಕೆಟ್​ಗೆ 263( ಪುಣೆ ವಾರಿಯರ್ಸ್​ ವಿರುದ್ಧ)

ಲಕ್ನೋ ಸೂಪರ್​ ಜೈಂಟ್ಸ್​-5 ವಿಕೆಟ್​ಗೆ 257(ಪಂಜಾಬ್​ ಕಿಂಗ್ಸ್​ ವಿರುದ್ಧ)

ರಾಯಲ್​ ಚಾಲೆಂಜರ್ಸ್​ ಬೆಂಗಳೂರು- 3 ವಿಕೆಟ್​ಗೆ 248( ಗುಜರಾತ್​ ಲಯನ್ಸ್​ ವಿರುದ್ಧ

ಕೋಲ್ಕತ್ತಾ ನೈಟ್​ ರೈಡರ್ಸ್​-6 ವಿಕೆಟ್​ಗೆ 246(ರಾಜಸ್ಥಾನ್​ ರಾಯಲ್ಸ್​ ವಿರುದ್ಧ)

ಚೆನ್ನೈ ಸೂಪರ್​ ಕಿಂಗ್ಸ್​-5 ವಿಕೆಟ್​ಗೆ 240(ಕಿಂಗ್ಸ್​ ಇಲೆವೆನ್​ ಪಂಜಾಬ್​ ವಿರುದ್ಧ)

ಚೆನ್ನೈ ಸೂಪರ್​ ಕಿಂಗ್ಸ್​-2 ವಿಕೆಟ್​ಗೆ 235(ಕೆಕೆಆರ್​ ವಿರುದ್ಧ)

ಇದನ್ನೂ ಓದಿ IPL 2024: ಹೆಡ್​, ಅಭಿಷೇಕ್​ ತೂಫಾನ್ ಬ್ಯಾಟಿಂಗ್​; ದಾಖಲೆಗಳ ಸುರಿಮಳೆ

10 ಓವರ್​ನಲ್ಲಿ ಗರಿಷ್ಠ ಮೊತ್ತ


ಹೈದರಾಬಾದ್​ ತಂಡ 10 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗೆ 148 ರನ್​ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿಯೇ 10 ಓವರ್​ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೂ ಈ ದಾಖಲೆ ಮುಂಬೈ ತಂಡದ ಪರವಾಗಿತ್ತು. ಮುಂಬೈ 2021 ರಲ್ಲಿ ಹೈದರಾಬಾದ್​ ವಿರುದ್ಧವೇ 131/3 ಬಾರಿಸಿತ್ತು. ಇದೀಗ ಹೈದರಾಬಾದ್​ ಈ ದಾಖಲೆಯನ್ನು ಮುಂಬೈ ವಿರುದ್ಧವೇ ಆಡಿ ಸೇಡು ತೀರಿಸಿಕೊಂಡಿದೆ.

ಅತಿ ಕಡಿಮೆ ಓವರ್​ನಲ್ಲಿ 100 ರನ್​​


7 ಓವರ್​ನಲ್ಲಿ 100 ರನ್​ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದ ಅತಿ ಕಡಿಮೆ ಓವರ್​ನಲ್ಲಿ 100 ರನ್​ ಬಾರಿಸಿದ ತಂಡಗಳ ದಾಖಲೆಪಟ್ಟಿಯಲ್ಲಿ ಹೈದರಾಬಾದ್​ 4ನೇ ಸ್ಥಾನ ಪಡೆದುಕೊಂಡಿತು. ದಾಖಲೆ ಮುಂಬೈ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ ಮುಂಬೈ ಕೇವಲ 6 ಓವರ್​ನಲ್ಲಿ ಈ ಸಾಧನೆ ಮಾಡಿತ್ತು. ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ಮೊದಲ ತಂಡ ಎಂಬ ದಾಖಲೆ ಕೂಡ ಮುಂಬೈ ಪರವೇ ಇದೆ.

Continue Reading

ಕ್ರೀಡೆ

IPL 2024: ಹೆಡ್​, ಅಭಿಷೇಕ್​ ತೂಫಾನ್ ಬ್ಯಾಟಿಂಗ್​; ದಾಖಲೆಗಳ ಸುರಿಮಳೆ

IPL 2024: ಹೈದರಾಬಾದ್​ ತಂಡದ ಆಟಗಾರರಾದ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​ ಬಾರಿಸಿದ ವಿಸ್ಫೋಟಕ ಅರ್ಧಶತಕದಿಂದ ಬುಧವಾರದ ಐಪಿಎಲ್(IPL 2024) ಪಂದ್ಯದಲ್ಲಿ ಹಲವು ದಾಖಲೆ ನಿರ್ಮಾಣಗೊಂಡವು.

VISTARANEWS.COM


on

Abhishek Sharma
Koo

ಹೈದರಾಬಾದ್​: ಬುಧವಾರದ ಐಪಿಎಲ್(IPL 2024)​ ಮುಂಬೈ ಇಂಡಿಯನ್ಸ್​(Mumbai Indians) ಮತ್ತು ಸನ್​ರೈಸರ್ಸ್​ ಹೈದರಾಬಾದ್(Sunrisers Hyderabad)​ ನಡುವಣ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣಗೊಂಡಿದೆ. ಹೈದರಾಬಾದ್​ ತಂಡದ ಆಟಗಾರರಾದ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​ ಬಾರಿಸಿದ ವಿಸ್ಫೋಟಕ ಅರ್ಧಶತಕದಿಂದ ಈ ದಾಖಲೆಗಳು ನಿರ್ಮಾಣಗೊಂಡವು. ದಾಖಲೆಗಳ ಪಟ್ಟಿ ಇಲ್ಲಿದೆ.

10 ಓವರ್​ನಲ್ಲಿ ಗರಿಷ್ಠ ಮೊತ್ತ


ಹೈದರಾಬಾದ್​ ತಂಡ 10 ಓವರ್​ಗಳಲ್ಲಿ ಕೇವಲ 2 ವಿಕೆಟ್​ಗೆ 148 ರನ್​ ಬಾರಿಸುವ ಮೂಲಕ ಇದುವರೆಗಿನ ಐಪಿಎಲ್​ ಇತಿಹಾಸದಲ್ಲಿಯೇ 10 ಓವರ್​ಗೆ ಅ್ಯಧಿಕ ಮೊತ್ತ ಗಳಿಸಿದ ಮೊದಲ ತಂಡ ಹೆಗ್ಗಳಿಕೆಗೆ ಪಾತ್ರವಾಯಿತು. ಇದುವರೆಗೂ ಈ ದಾಖಲೆ ಮುಂಬೈ ತಂಡದ ಪರವಾಗಿತ್ತು. ಮುಂಬೈ 2021 ರಲ್ಲಿ ಹೈದರಾಬಾದ್​ ವಿರುದ್ಧವೇ 131/3 ಬಾರಿಸಿತ್ತು. ಇದೀಗ ಹೈದರಾಬಾದ್​ ಈ ದಾಖಲೆಯನ್ನು ಮುಂಬೈ ವಿರುದ್ಧವೇ ಆಡಿ ಸೇಡು ತೀರಿಸಿಕೊಂಡಿದೆ.

ಹೈದರಾಬಾದ್​ ಪರ ಅತಿ ವೇಗದ ಅರ್ಧಶತಕ


ಆರಂಭಿಕ ಆಟಗಾರ ಟ್ರಾವಿಸ್​ ಹೆಟ್​ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರೆ, ಅಭಿಷೇಕ್​ ಶರ್ಮ 16 ಎಸೆತಗಳಲ್ಲಿ 50 ರನ್​ ಬಾರಿಸಿ ಮಿಂಚಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದ ಮುಂದೆ ಮುಂಬೈ ತಂಡದ ಬೌಲಿಂಗ್​ ಸಂಪೂರ್ಣ ಹಳಿ ತಪ್ಪಿತು. ಈ ಅರ್ಧಶತಕದ ಮೂಲಕ ಉಭಯ ಆಟಗಾರರು ಕೂಡ ಹೈದರಾಬಾದ್​ ಪರ ಅತಿ ಕಡಿಮೆ ಎಸೆತದಲ್ಲಿ ದಾಖಲೆ ಬರೆದ ಆಟಗಾರರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆಡರು ಸ್ಥಾನ ಪಡೆದರು.

ಇದನ್ನೂ ಓದಿ IPL 2024: ಮುಂಬೈ ಪರ 200ನೇ ಪಂದ್ಯವನ್ನಾಡಿದ ರೋಹಿತ್​ಗೆ ಸ್ಮರಣೀಯ ಉಡುಗೊರೆ ನೀಡಿದ ಸಚಿನ್​

ಅಭಿಷೇಕ್​ ಶರ್ಮ-16 ಎಸೆತ, (2024) ಮುಂಬೈ ವಿರುದ್ಧ

ಟ್ರಾವಿಸ್​ ಹೆಡ್​-18 ಎಸೆತ, (2024) ಮುಂಬೈ ವಿರುದ್ಧ

ಡೇವಿಡ್​ ವಾರ್ನರ್​-20 ಎಸೆತ,(2015) ಚೆನ್ನೈ ವಿರುದ್ಧ

ಡೇವಿಡ್​ ವಾರ್ನರ್​-20 ಎಸೆತ,(2017) ಕೆಕೆಆರ್​ ವಿರುದ್ಧ

ಮೋಸೆಸ್ ಹೆನ್ರಿಕ್ಸ್-20 ಎಸೆತ,(2015) ಆರ್​ಸಿಬಿ ವಿರುದ್ಧ

ಡೇವಿಡ್​ ವಾರ್ನರ್​-21 ಎಸೆತ,(2016) ಆರ್​ಸಿಬಿ ವಿರುದ್ಧ

ಅತಿ ಕಡಿಮೆ ಓವರ್​ನಲ್ಲಿ 100 ರನ್​​


7 ಓವರ್​ನಲ್ಲಿ 100 ರನ್​ ಗಡಿ ದಾಟುವ ಮೂಲಕ ಐಪಿಎಲ್​ ಇತಿಹಾಸದ ಅತಿ ಕಡಿಮೆ ಓವರ್​ನಲ್ಲಿ 100 ರನ್​ ಬಾರಿಸಿದ ತಂಡಗಳ ದಾಖಲೆಪಟ್ಟಿಯಲ್ಲಿ ಹೈದರಾಬಾದ್​ 4ನೇ ಸ್ಥಾನ ಪಡೆದುಕೊಂಡಿತು. ದಾಖಲೆ ಮುಂಬೈ ತಂಡದ ಹೆಸರಿನಲ್ಲಿದೆ. 2014ರಲ್ಲಿ ಪಂಜಾಬ್​ ವಿರುದ್ಧ ಮುಂಬೈ ಕೇವಲ 6 ಓವರ್​ನಲ್ಲಿ ಈ ಸಾಧನೆ ಮಾಡಿತ್ತು. ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಗಳಿಸಿದ ಮೊದಲ ತಂಡ ಎಂಬ ದಾಖಲೆ ಕೂಡ ಮುಂಬೈ ಪರವೇ ಇದೆ.

ಐಪಿಎಲ್​ನಲ್ಲಿ ಅತಿ ವೇಗದ ಅರ್ಧಶತಕ


ಅಭಿಷೇಕ್​ ಶರ್ಮ ಅವರು 16 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಐಪಿಎಲ್​ ಟೂರ್ನಿಯಲ್ಲಿ ಅತಿ ವೇಗವಾಗಿ ಅರ್ಧಶತಕ ಬಾರಿಸಿದ ದ್ವಿತೀಯ ಆಟಗಾರನಾಗಿ ಮೂಡಿಬಂದರು. 14 ಎಸೆತಗಳಲ್ಲಿ 50 ರನ್​ ಬಾರಿಸಿದ ಪ್ಯಾಟ್​ ಕಮಿನ್ಸ್​ ಅಗ್ರಸ್ಥಾನದಲ್ಲಿದ್ದಾರೆ. ಇದೇ ಪಂದ್ಯದಲ್ಲಿ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಹೆಡ್​ ಅಜಿಂಕ್ಯಾ ರಹಾನೆ ಹಿಂದಿಕ್ಕಿ ಜಂಟಿ ಮೂರನೇ ಸ್ಥಾನಕ್ಕೇರಿದರು. ಪಂತ್​ ಕೂಡ 18 ಎಸೆತಗಳಲ್ಲಿ ಅಧರ್ಶತಕ ಬಾರಿಸಿದ್ದಾರೆ.

Continue Reading
Advertisement
Bengaluru News air pressure pipe
ಬೆಂಗಳೂರು8 mins ago

Bengaluru News : ಗುದದ್ವಾರಕ್ಕೆ ಗಾಳಿ ಬಿಟ್ಟ ಸ್ನೇಹಿತ; ಕರುಳು ಬ್ಲಾಸ್ಟ್‌ ಆಗಿ ಯುವಕ ಸಾವು

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202410 mins ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Actor Darshan at Matinee Movie Team
ಸ್ಯಾಂಡಲ್ ವುಡ್13 mins ago

Actor Darshan: ಸತೀಶ್ ನೀನಾಸಂ-ರಚಿತಾ `ಮ್ಯಾಟ್ನಿ’ ಸಿನಿಮಾಗೆ ಡಿ ಬಾಸ್ ದರ್ಶನ್ ಸಾಥ್!

Drone Prathap prayag
ಸ್ಯಾಂಡಲ್ ವುಡ್17 mins ago

Drone Prathap: ಬಿಗ್ ಬಾಸ್ ಸ್ಪರ್ಧಿ ಪ್ರತಾಪನ ʻಡ್ರೋನ್‌ʼ ಇನ್ಮುಂದೆ ಹಾರಲ್ಲ! ಕಳ್ಳಾಟ ಬಯಲು!

Bhagwant Mann
ದೇಶ19 mins ago

Bhagwant Mann: 50ನೇ ವಯಸ್ಸಲ್ಲಿ ತಂದೆಯಾದ ಪಂಜಾಬ್‌ ಸಿಎಂ ಭಗವಂತ್ ಮಾನ್;!

kuwj awards
ಕರ್ನಾಟಕ22 mins ago

KUWJ Awards: ಕಾರ್ಯನಿರತ ಪತ್ರಕರ್ತರ ಸಂಘದ 2024ರ ಸಾಲಿನ ದತ್ತಿನಿಧಿ ಪ್ರಶಸ್ತಿಗಳು ಪ್ರಕಟ: ಪುರಸ್ಕೃತರ ಪಟ್ಟಿ ಇಲ್ಲಿದೆ

kalaburagi News Drone flying at kalaburagi Central University
ಕಲಬುರಗಿ43 mins ago

Kalaburagi News : ರಾತ್ರಿ ಹೊತ್ತಲ್ಲಿ ಕಲಬುರಗಿ ಕೇಂದ್ರಿಯ ವಿವಿಯಲ್ಲಿ ಶಂಕಾಸ್ಪದ ಡ್ರೋನ್‌ ಹಾರಾಟ!

Lok Sabha Election 2024 Valmiki Samaj to support Pralhad Joshi says Prasannanandapuri Swamiji
Lok Sabha Election 202454 mins ago

Lok Sabha Election 2024: ಪ್ರಲ್ಹಾದ್‌ ಜೋಶಿಗೆ ವಾಲ್ಮೀಕಿ ಸಮಾಜದ ಬೆಂಬಲ: ಪ್ರಸನ್ನಾನಂದಪುರಿ ಸ್ವಾಮೀಜಿ

Holi Girls
ದೇಶ1 hour ago

ಹೋಳಿ ಹೆಸರಲ್ಲಿ ಸ್ಕೂಟಿ ಮೇಲೆಯೇ ಕಾಮದೋಕುಳಿ; ಯುವತಿಯರಿಗೆ 80 ಸಾವಿರ ರೂ. ದಂಡ!

Kangana Ranaut
ಬಾಲಿವುಡ್1 hour ago

Kangana Ranaut : ನಾನು, ಶಾರುಖ್‌ ಈ ಯುಗದ ಕೊನೆಯ ಸೂಪರ್‌ಸ್ಟಾರ್‌ಗಳು ಎಂದ ಕಂಗನಾ!

Sharmitha Gowda in bikini
ಕಿರುತೆರೆ6 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ6 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ5 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ4 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ6 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ5 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ3 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ4 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election 2024 DK Brothers hold roadshow in Ramanagara and DK Suresh file nomination
Lok Sabha Election 202410 mins ago

Lok Sabha Election 2024: ರಾಮನಗರದಲ್ಲಿ ಡಿಕೆ ಬ್ರದರ್ಸ್‌ ಶಕ್ತಿ ಪ್ರದರ್ಶನ, ರೋಡ್‌ ಶೋ ಮಾಡಿ ನಾಮಪತ್ರ ಸಲ್ಲಿಸಿದ ಡಿಕೆಸು

Lok Sabha Election 2024 personal prestige will not be allowed DK Shivakumar warns Kolar leaders
Lok Sabha Election 20242 hours ago

Lok Sabha Election 2024: ಯಾರ ವೈಯಕ್ತಿಕ ಪ್ರತಿಷ್ಠೆಗೂ ಅವಕಾಶ ನೀಡಲ್ಲ; ಕೋಲಾರ ನಾಯಕರಿಗೆ ಡಿಕೆಶಿ ಖಡಕ್‌ ಎಚ್ಚರಿಕೆ

dina bhavishya read your daily horoscope predictions for March 28 2024
ಭವಿಷ್ಯ9 hours ago

Dina Bhavishya : ಇಂದು ಈ ರಾಶಿಯವರಿಗೆ ಒತ್ತಡ ಹೆಚ್ಚು; ಜಾಗ್ರತೆ ವಹಿಸುವುದು ಉತ್ತಮ!

R Ashok Pressmeet and attack on CM Siddaramaiah Congress Government
Lok Sabha Election 202424 hours ago

Lok Sabha Election 2024: ಬೈ ಬೈ ಬೆಂಗಳೂರು ಎನ್ನುತ್ತಿರುವ ಜನ; ಸರ್ಕಾರದ ವಿರುದ್ಧ ಹರಿಹಾಯ್ದ ಆರ್.‌ ಅಶೋಕ್

Tejaswini Gowda resigns from BJP Council Impact on BJP
Lok Sabha Election 20241 day ago

Tejaswini Gowda: ಬಿಜೆಪಿ ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ತೇಜಸ್ವಿನಿ ಗೌಡ! ಬಿಜೆಪಿಗೆ ಎಫೆಕ್ಟ್?

Lok Sabha Election 2024 Gokarna priest shalls to make DK Shivakumar CM Whats wrong says Shivakumar
Lok Sabha Election 20241 day ago

Lok Sabha Election 2024: ಡಿಕೆಶಿ ಸಿಎಂ ಆಗಲಿ ಎಂದು ಗೋಕರ್ಣ ಅರ್ಚಕರಿಂದ ಸಂಕಲ್ಪ; ತಪ್ಪೇನು ಎಂದ ಶಿವಕುಮಾರ್

Dina Bhavishya
ಭವಿಷ್ಯ1 day ago

Dina Bhavishya : ಉತ್ಸಾಹದಲ್ಲಿ ಆಶ್ವಾಸನೆ ಕೊಟ್ಟು ಅಪಾಯದ ಸುಳಿಗೆ ಸಿಲುಕಬೇಡಿ

BBMP marshals harass street vendors in Jayanagar
ಬೆಂಗಳೂರು2 days ago

BBMP Marshals : ಜಯನಗರದ ಬೀದಿಯಲ್ಲಿ ಬ್ಯಾಗ್‌ ಮಾರುತ್ತಿದ್ದ ವೃದ್ಧನ ಮೇಲೆ ದರ್ಪ ಮೆರೆದ ಮಾರ್ಷಲ್ಸ್‌

Dina Bhavishya
ಭವಿಷ್ಯ2 days ago

Dina Bhavishya : ಆಪ್ತರ ವರ್ತನೆಯು ಈ ರಾಶಿಯವರ ಮನಸ್ಸಿಗೆ ನೋವು ತರಲಿದೆ

Lok Sabha Election 2024 Sanganna Karadi rebels quell and assure to support koppala BJP Candidate
Lok Sabha Election 20243 days ago

Lok Sabha Election 2024: ರಾಜ್ಯಸಭೆ ಇಲ್ಲವೇ ಪರಿಷತ್‌ ಸ್ಥಾನದ ಭರವಸೆ; ತಣ್ಣಗಾದ ಕರಡಿ! ಅಭ್ಯರ್ಥಿ ಪರ ಪ್ರಚಾರಕ್ಕೆ ಜೈ

ಟ್ರೆಂಡಿಂಗ್‌