ನವದೆಹಲಿ: ಕಾರು ಅಪಘಾತದಲ್ಲಿ ಗಾಯಗೊಂಡು ಚೇತರಿಕೆ ಕಾಣುತ್ತಿರು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್ (Rishabh Pant) ಹೋಳಿ(Holi) ಹಬ್ಬ ಆಚರಿಸಿ ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರಿಷಭ್ ಪಂತ್ ಮೈ ತುಂಬ ಬಣ್ಣ ಬಳಿದಿರುವ ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡು ಇದು ಹೋಳಿ ಎಂದು ಭಾವಿಸಬೇಡಿ, ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು. ಹೋಳಿಯ ಬಣ್ಣಗಳು ನಿಮ್ಮ ಜೀವನದಲ್ಲಿ ಸಂತೋಷವನ್ನು ಬೆಳಗಿಸುವಂತಾಗಲಿ ಎಂದು ಶುಭ ಹಾರೈಸಿದ್ದಾರೆ. ಅಸಲಿಗೆ ಪಂತ್ ಹೋಳಿ ಆಚರಿಸಿದ್ದಾರಾ ಅಥವಾ ಕಳೆದ ವರ್ಷದ ಫೋಟೊವನ್ನು ಹಂಚಿಕೊಂಡು ಶುಭಾಶಯ ಕೋರಿದ್ದಾರಾ ಎಂಬುವುದು ಖಚಿತವಾಗಿಲ್ಲ. ಏಕೆಂದರೆ ಪಂತ್ ಹಿಂದಿಯಲ್ಲಿ ಇದು ಹೋಳಿ ಎಂದು ಭಾವಿಸಬೇಡಿ ಎಂದು ಬರೆದು ನಗುವ ಇಮೋಜಿಯನ್ನು ಹಾಕಿದ್ದಾರೆ.
ಇದನ್ನೂ ಓದಿ Rishabh Pant: ಶೀಘ್ರದಲ್ಲೇ ಕ್ರಿಕೆಟ್‌ಗೆ ಮರಳುವೆ; ರಿಷಭ್ ಪಂತ್ ವಿಶ್ವಾಸ
ರಿಷಭ್ ಪಂತ್ ಡಿಸೆಂಬರ್ 30ರಂದು ಡೆಹ್ರಾಡೂನ್ ಬಳಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿ ಗಾಯಗೊಂಡಿದ್ದರು. ಸದ್ಯ ಅವರು ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕಳೆದ ವಾರವಷ್ಟೇ ಅವರು ತಮ್ಮ ಚೇತರಿಕೆಯ ಬಗ್ಗೆ ಮಾಹಿತಿ ನೀಡಿದ್ದರು.
“ಚೇತರಿಕೆಯ ಹಾದಿಯಲ್ಲಿ ಬರುವ ಎಲ್ಲ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದ್ದೇನೆ. ದೇವರ ದಯೆ ಮತ್ತು ವೈದ್ಯಕೀಯ ತಂಡದ ಕಾಳಜಿಯಿಂದ ನಾನು ಶೀಘ್ರದಲ್ಲೇ ಗುಣಮುಖನಾಗುವ ವಿಶ್ವಾಸ ಹೊಂದಿದ್ದೇನೆ” ಎಂದು ಹೇಳಿದ್ದರು. ಸದ್ಯದ ಮಾಹಿತಿ ಪ್ರಕಾರ ಪಂತ್ ಕ್ರಿಕೆಟ್‌ಗೆ ಮರಳಲು ಕನಿಷ್ಠ 2 ವರ್ಷಗಳ ಕಾಲ ಸಮಯ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.