Site icon Vistara News

Rishabh Pant: ಪಂತ್​ ‘ನೋ ಲುಕ್​ ಸಿಕ್ಸ್’ ಹೊಡೆತಕ್ಕೆ ಮನಸೋತ ಶಾರುಖ್ ಖಾನ್​; ವಿಡಿಯೊ ವೈರಲ್​

Rishabh Pant

ವಿಶಾಖಪಟ್ಟಣಂ: ಕೋಲ್ಕತ್ತಾ ನೈಟ್​ ರೈಡರ್ಸ್(Kolkata Knight Riders)​ ತಂಡ ನೀಡಿದ ಬೃಹತ್​ ಮೊತ್ತದ ಗುರಿಯನ್ನು ಬೆನ್ನಟ್ಟುವ ವೇಳೆ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡದ ನಾಯಕ ರಿಷಭ್​ ಪಂತ್​(Rishabh Pant) ಅವರು ಬಾರಿಸಿದ ‘ನೋ ಲುಕ್​ ಸಿಕ್ಸ್'(Pant’s no-look shot) ಹೊಡೆತಕ್ಕೆ ಕೆಕೆಆರ್ ತಂಡದ ಸಹ ಮಾಲೀಕ, ಬಾಲಿವುಡ್​ ನಟ ಶಾರೂಖ್ ಖಾನ್‌(Shah Rukh Khan) ಅವರು ಪ್ರೇಕ್ಷಕರ ಗ್ಯಾಲರಿಂದ ಎದ್ದು ನಿಂತು ತಪ್ಪಾಳೆ ತಟ್ಟಿ ಮೆಚ್ಚುಗೆ ಸೂಚಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್(viral video)​ ಆಗಿದ್ದು ​ಶಾರೂಖ್ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

272 ರನ್ನ್​ಗಳ ಬೇಹತ್​ ಮೊತ್ತವನ್ನು ಬೆನ್ನಟ್ಟಿದ ಡೆಲ್ಲಿಗೆ ಆಸರೆಯಾದದ್ದು ನಾಯಕ ರಿಷಭ್​ ಪಂತ್. ಮಧ್ಯಮ ಕ್ರಮಾಂಕದಲ್ಲಿ ಆಡಲಿಳಿದ ಅವರು ಕೆಲ ಕಾಲ ಹೊಡಿ-ಬಡಿ ಆಟವಾಡಿ ಅರ್ಧಶತಕ ಬಾರಿಸಿ ತಂಡ ಗೆಲುವಿವಾಗಿ ಶಕ್ತಿ ಮೀರಿ ಪ್ರಯತ್ನಿಸಿದರು. ಆದರೆ ಉಳಿದ ಆಟಗಾರರಿಂದ ಇದೇ ಪ್ರದರ್ಶನ ಕಂಡು ಬಾರದೆ ತಂಡ ಸೋಲು ಕಂಡಿತು. ಕಾರು ಅಪಘಾತದಿಂದ 14 ತಿಂಗಳು ಕ್ರಿಕೆಟ್​ನಿಂದ ದೂರ ಉಳಿದಿದ್ದರೂ ಕೂಡ ಪಂತ್​ ಅವರು ಕಳೆಯ ಶೈಲಿಯ ಬ್ಯಾಟಿಂಗ್​ ಮಾತ್ರ ಹಾಗೇಯೇ ಉಳಿದುಕೊಂಡಿದೆ. ಇದಕ್ಕೆ ಕೆಕೆಆರ್​ ವಿರುದ್ಧದ ಪಂದ್ಯವೇ ಉತ್ತಮ ನಿದರ್ಶನ.

ಆಕ್ರಮಣಕಾರಿ ಶೈಲಿಯಲ್ಲೇ ಬ್ಯಾಟಿಂಗ್​ ನಡೆಸಿದ ಪಂತ್​ ಕೇವಲ 23 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಅದರಲ್ಲೂ ವೆಂಕಟೇಶ್​ ಅಯ್ಯರ್​ ಅವರಿಗೆ ಒಂದೇ ಓವರ್​ನಲ್ಲಿ ಎಲ್ಲ ಎಸೆತಗಳನ್ನು ಸಿಕ್ಸರ್​ ಮತ್ತು ಬೌಂಡರಿಗೆ ಬಡಿದಟ್ಟಿ 28 ರನ್​ ಬಾರಿಸಿದರು. ಇದರಲ್ಲೊಂದು ಸಿಕ್ಸರ್​ ‘ನೋ ಲುಕ್​ ಸಿಕ್ಸ್'(ಚೆಂಡನ್ನು ನೋಡದೆಯೇ ಸಿಕ್ಸರ್​ ಬಾರಿಸುವುದು) ಆಗಿತ್ತು. ಈ ಸಿಕ್ಸರ್​ ಕಂಡು ಬಾಲಿವುಡ್​ ನಟ ಶಾರೂಖ್ ಫಿದಾ ಆದರು.

ಇದನ್ನೂ ಓದಿ IPL 2024: ಇಶಾಂತ್​ ಶರ್ಮ ಡೆಡ್ಲಿ ಯಾರ್ಕರ್​ಗೆ ರಸೆಲ್ ಕ್ಲೀನ್​ ಬೌಲ್ಡ್​​; ವಿಡಿಯೊ ವೈರಲ್​

ಪಂದ್ಯ ಮುಕ್ತಾಯದ ಬಳಿಕವೂ ಶಾರೂಖ್ ಅವರು ರಿಷಭ್​ ಪಂತ್​ ಅವರನ್ನು ತಬ್ಬಿಕೊಂಡು ಮೆಚ್ಚುಗೆ ಸೂಚಿಸಿದರು. ಜತೆಗೆ ಉಭಯ ತಂಡದ ಆಟಗಾರರೊಂದಿಗೆ ಕೆಲ ಕಾಲ ಕುಶಲೋಪರಿ ನಡೆಸಿದರು. ಕೆಲ ಆಟಗಾರರು ತಮ್ಮ ನೆಚ್ಚಿನ ನಟನೊಂದಿಗೆ ಫೋಟೊ ಮತ್ತು ಆಟೋಗ್ರಾಫ್​ ತೆಗೆದುಕೊಂಡರು.

ಕೆಕೆಆರ್​ಗೆ ಹ್ಯಾಟ್ರಿಕ್​ ಗೆಲುವು
ಇಲ್ಲಿನ ಡಾ.ವೈ.ಎಸ್. ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಕೆಕೆಆರ್​ ಫುಲ್​ ಜೋಶ್​ನಲ್ಲಿ ಬ್ಯಾಟಿಂಗ್​ ನಡೆಸಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​​ಗೆ ಬರೋಬ್ಬರಿ 272 ರನ್​ ಬಾರಿಸಿತು. ಈ ಬೃಹತ್​ ಮೊತ್ತವನ್ನು ಕಂಡು ಕಂಗಾಲಾದ ಡೆಲ್ಲಿ ಕ್ಯಾಪಿಟಲ್ಸ್​ 17.2 ಓವರ್​ಗಳಲ್ಲಿ 166 ರನ್​ ಬಾರಿಸಿ ಸರ್ವಪತನ ಕಂಡಿತು. ಕೋಲ್ಕತ್ತಾ ತಂಡ 106ರನ್​ ಗೆಲುವು ಸಾಧಿಸಿತು.

Exit mobile version